October 5, 2024

ಜೆಡಿಎಸ್ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಕ್ಷೇತ್ರದ ಅಭಿಮಾನಿಗಳ ಒತ್ತಡಕ್ಕೆ ಮಣಿದ ಅವರು ಪಕ್ಷೇತರ ರಾಗಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದ ವೈಎಸ್ವಿ ದತ್ತಾ ಅವರು ಈ ಬಾರಿ ಕಾಂಗ್ರೆಸ್ನಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ಗೆ ಸೇರ್ಪಡೆಯಾಗಿ ಕಡೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಬಿ ಫಾರ್ಮ್ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ಕಾಂಗ್ರೆಸ್ನ 2ನೇ ಪಟ್ಟಿಯಲ್ಲಿ ಕಾಂಗ್ರೆಸ್ ಟಿಕೆಟ್ ಅನ್ನು ಆನಂದ್ ಕೆ.ಎಸ್. ಅವರಿಗೆ ನೀಡಲಾಗಿದೆ. ನಿನ್ನೆ ಕಡೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳೊಂದಿಗೆ ಸಭೆ ಮಾಡಿದ ದತ್ತಾ ಪಕ್ಷೇತರವಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ದತ್ತಾ ಶಕ್ತಿ ಪ್ರದರ್ಶನ:

ಕಡೂರು ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. ಸಭೆ ಆರಂಭಕ್ಕೂ ಮುನ್ನ ಕಡೂರು ಪಟ್ಟಣದಲ್ಲಿ ದತ್ತಾ ರವರ ಶಕ್ತಿ ಪ್ರದರ್ಶನ ನಡೆಯಿತು. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ದತ್ತಾ ಅಭಿಮಾನಿಗಳು ಬೃಹತ್ ರೋಡ್ ಶೋ ನಡೆಸಿದರು. ಸ್ವಾಭಿಮಾನಿ ಸಭೆಗೆ ಸುಮಾರು 4000 ಜನ ಭಾಗಿಯಾಗಿದ್ದರು. ಕಲ್ಯಾಣ ಮಂಟಪದಲ್ಲಿ ಜಾಗ ಸಾಲದೆ ಮಂಟಪದ ಕೆಳಭಾಗದಲ್ಲಿ ಎಲ್.ಇ.ಡಿ. ವ್ಯವಸ್ಥೆ ಮಾಡಲಾಗಿತ್ತು. ಸಭೆ ಆರಂಭಕ್ಕೂ ಮುನ್ನವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ದತ್ತಾ ಆಗಮಿಸಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಕಂಡು ನಿಮ್ಮ ಪ್ರೀತಿಗೆ ನಾನು ಋಣಿ ಎಂದು ಜನರಿಗೆ ತಿಳಿಸಿದರು.

ಕಾಂಗ್ರೆಸ್ಗೆ ಸೆಡ್ಡು ಹೊಡೆದ  ದತ್ತಾ:

ದತ್ತಾ ಅಭಿಮಾನಿಗಳ ಅಭಿಪ್ರಾಯದಂತೆ ಅವರು ತಮ್ಮ ಮುಂದಿನ ರಾಜಕೀಯ ಹೆಜ್ಜೆ ಇಟ್ಟಿದ್ದು, ಪಕ್ಷೇತರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದರಿಂದ ವೈಎಸ್ವಿ ದತ್ತಾ ಅವರು ಬೇಸರಗೊಂಡಿದ್ದರು. ಇದರಿಂದಾಗಿ ಕಡೂರು ವಿಧಾನಸಭಾ ಕ್ಷೇತ್ರದ ಆಭ್ಯರ್ಥಿ ಆನಂದ್ ಕಡೂರುನಲ್ಲಿರುವ ಯುಗಟಿ ಗ್ರಾಮದ ದತ್ತ ನಿವಾಸಕ್ಕೆ ಬೇಟಿ ನೀಡಿ ವೈಎಸ್ವಿ ದತ್ತ ಅವರಿಗೆ ಸಮಾಧಾನ ಪಡಿಸಲು ಯತ್ನಿಸಿದ್ದರು. ಆದರೆ ಅಂದೂ ಕೂ ಸಂಧಾನ ಸಭೆ ವಿಫಲವಾಗಿತ್ತು. ಜೆಡಿಎಸ್ ಅಭ್ಯರ್ಥಿ ಧನಂಜಯ್ ಕೂಡ ಪಕ್ಷಕ್ಕೆ ಮರಳಿ ವಾಪಾಸ್ ಬರುವಂತೆ ಆಹ್ವಾನಿಸಿದ್ದರು. ಆದರೆ ಇದ್ಯಾವುದಕ್ಕೂ ಮಣೆ ಹಾಕದ ದತ್ತಾ ಅಭಿಮಾನಗಳಿಂದ ಅಭಿಪ್ರಾಯ ಪಡೆದು ತಮ್ಮ ಅಂತಿಮ ನಿರ್ಧಾರ ಘೋಷಿಸಿದ್ದಾರೆ.

ಚುನಾವಣೆ ಖರ್ಚಿಗಾಗಿ ವೈ.ಎಸ್.ವಿ.ದತ್ತಾ ಭಿಕ್ಷೆ , ಟವೆಲ್ ಗುರುತಿನಿಂದ ಸ್ಪರ್ಧಿಸಲು ತೀರ್ಮಾನ :

ಇಂದಿನ ಸ್ವಾಭಿಮಾನದ ಸಭೆಯಲ್ಲಿ ಸ್ವತಂತ್ರವಾಗಿ ನಿಲ್ಲುವಂತೆ ತೀರ್ಮಾನಿಸಿದ ವೈ.ಎಸ್.ವಿ.ದತ್ತಾ ಚುನಾವಣೆ ಖರ್ಚಿಗಾಗಿ ಭಿಕ್ಷೆಯನ್ನು ಬೇಡಿದ್ದರು. ಸ್ವಾಭಿಮಾನದ ಸಭೆಯಲ್ಲಿ ದತ್ತಾ ಸ್ವತಂತ್ರವಾಗಿ ಸ್ಪರ್ಧೆ ಮಾಡುವಂತೆ ಅನೌನ್ಸ್ ಮಾಡಿದ ದತ್ತ ಚುನಾವಣೆ ಖರ್ಚಿಗಾಗಿ ಹೆಗಲ ಮೇಲೆ ಟವೆಲ್ ಹಾಕಿಕೊಂಡು ಭಿಕ್ಷೆ ಬೇಡಿದರು.ವೈ.ಎಸ್.ವಿ.ದತ್ತಾ ಅವರ ಅಭಿಮಾನಿಗಳು 50 ಸಾವಿರ, ಲಕ್ಷ, 2 ಲಕ್ಷದ ಚೆಕ್ ನೀಡಿ ಮತ್ತಷ್ಟು ಹಣ ಕೊಡ್ತೀವಿ ಎಂದ ಅಭಿಮಾನಿಗಳು ಭರವಸೆ ನೀಡಿದ್ದಾರೆ.

ದತ್ತಾ ಅವರು ಟವೆಲ್ ಗುರುತಿನಿಂದ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಕಡೂರು ಭಾಗದಲ್ಲಿ ಬಹುತೇಕರು ಪಂಚೆ, ಲುಂಗಿ ಉಟ್ಟುಕೊಂಡು ಹೆಗಲ ಮೇಲೊಂದು ಟವೆಲ್ ಹಾಕಿಕೊಳ್ಳುವುದು ಸಂಪ್ರದಾಯ. ಇದೀಗ ಟವೆಲ್ ಗುರುತು ಪಡೆಯಲು ದತ್ತಾ ನಿರ್ಧರಿಸಿರುವುದು ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಸಾಧ್ಯತೆಯಿದೆ.

ಕಡೂರಿನಲ್ಲಿ ಮತ್ತೆ ಕಮಾಲ್ ಮಾಡ್ತಾರ ದತ್ತ :

2013 ರಲ್ಲಿ ಕಡೂರು ಕ್ಷೇತ್ರದಿಂದ ಜೆ.ಡಿ.ಎಸ್. ಅಭ್ಯರ್ಥಿಯಾಗಿ ಬಾರೀ ಬಹುಮತದಿಂದ ಗೆಲುವು ಪಡೆದು ಶಾಸಕರಾಗಿದ್ದ ದತ್ತಾ ಇದೀಗ ತಮ್ಮ ರಾಜಕೀಯ ಹಾದಿಯ ತಿರುವಿನಲ್ಲಿ ನಿಂತಿದ್ದಾರೆ.

ಬ್ರಾಹ್ಮಣ ಸಮುದಾಯದ ದತ್ತಾ ಅವರನ್ನು ಕಡೂರು ಕ್ಷೇತ್ರದ ಜನ ಜಾತಿ ಮತಗಳನ್ನು ಪರಿಗಣಿಸದೇ ಬೆಂಬಲಿಸಿದ ಜನ ಭರ್ಜರಿ ಬಹುಮತದಿಂದ ಗೆಲ್ಲಿಸಿದ್ದರು. ತಮ್ಮ ಸರಳವಾದ ನಡೆನುಡಿಯಿಂದ ರಾಜ್ಯದಲ್ಲಿ ಹೆಸರು ಮಾಡಿದ್ದ ದತ್ತಾ ಅವರು ದೇವೇಗೌಡರ ಮಾನಸ ಪುತ್ರ ಎಂದೇ ಹೆಸರು ಮಾಡಿದ್ದರು.

ಇದೀಗ ದತ್ತಾ ಪಕ್ಷೇತರರಾಗಿ ಸ್ಪರ್ಧೆ ಮಾಡಲು ಮುಂದಾಗಿರುವುದು ಇತರೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ನಿದ್ದೆಗೆಡಿಸಿದೆ. ನಿನ್ನೆಯ ಕಾರ್ಯಕ್ರಮದಲ್ಲಿ ದತ್ತಾ ಅವರ ಅಭಿಮಾನಿಗಳ ಹುರುಪು ಕಂಡರೆ ಮತ್ತೊಮ್ಮೆ ಕಡೂರಿನಲ್ಲಿ ದತ್ತಾ ತಮ್ಮ ಕಮಾಲ್ ಮಾಡುವ ಎಲ್ಲಾ ಮುನ್ಸೂಚನೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ