October 5, 2024

ಕಳಸ ತಾಲ್ಲೂಕಿನ ಹಿರೇಬೈಲ್ ನಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಚಂದ್ರ ಅವರು ಸಮುದಾಯವನ್ನು ಸಂಘಟಿಸುವುದು, ಸಮುದಾಯದ ಆತ್ಮಸ್ಥೈರ್ಯವನ್ನು ಬಲಪಡಿಸುವುದು, ಸಮುದಾಯದ ಜನರಲ್ಲಿ ಸಹಕಾರವನ್ನು ಸಾಧಿಸುವುದು, ಸಮುದಾಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನೇರವಾಗುವುದು, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವುದು, ಸಮುದಾಯದ ಜನರನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಂಘಟಿಸುವುದರ ಜೊತೆಗೆ ಸಮುದಾಯದ ಸಬಲೀಕರಣಕ್ಕೆ ಶ್ರಮಿಸುವ ಉದ್ದೇಶದಿಂದ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘವೂ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಹಿರೇಬೈಲ್ ಘಟಕ ಅಧ್ಯಕ್ಷ ನಳರಾಜ್ ಮಾತನಾಡಿ ನಮ್ಮ ಸಮುದಾಯ ಅಶಕ್ತ ಕುಟುಂಬಗಳಿಗೆ ಆತ್ಮಸ್ಥೈರ್ಯವನ್ನು ತುಂಬುವುದು. ಅಂತಹ ಕುಟುಂಬಗಳು, ವ್ಯಕ್ತಿಗಳು ಅನಾರೋಗ್ಯ ಪೀಡಿತರಾದಾಗ ಅಥವಾ ಸಂಕಷ್ಟಕ್ಕೆ ಸಿಲುಕಿದಾಗ ಅವರನ್ನು ಬೇಟಿಯಾಗಿ ಅವರ ಮನೆಗೆ ಹೋಗಿ ಸಂಘದಿಂದ ಕಿರು ಸಹಾಯವನ್ನು ಮಾಡಿ ಸಮುದಾಯದ ಬೆಂಬಲವನ್ನು ವ್ಯಕ್ತಪಡಿಸುವುದು ಮತ್ತು ನಮ್ಮ ಸಮುದಾಯದಲ್ಲಿ ಯಾರಾದರೂ ಮೃತಪಟ್ಟರೇ ಸಾವಿನ ಮನೆಗೆ ತೆರಳಿ ಅಂತ್ಯಸಂಸ್ಕಾರಕ್ಕೆ ಸಣ್ಣ ಪ್ರಮಾಣದ ಧನಸಹಾಯವನ್ನು ಮಾಡುವ ಮೂಲಕ ಸಂಘವೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಪದಾಧಿಕಾರಿಗಳಾದ ರಾಘವ, ದಾಮೋದರ್, ವೇಲಾಯುದನ್, ಮಂಜು, ಶರತ್, ದೀಕ್ಷಿತ್, ಸದಾನಂದ, ನಾಗೇಶ್, ರವಿ, ಬೋಪಯ್ಯ, ಅನ್ನಪೂರ್ಣ, ಪ್ರಮೀಳಾ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ