October 5, 2024

ಚಿಕ್ಕಮಗಳೂರು ಜಿಲ್ಲೆ ಆಲ್ದೂರು ಠಾಣಾ ವ್ಯಾಪ್ತಿಯಲ್ಲಿ ದನಗಳನ್ನು ಕಳ್ಳತನ ಮಾಡುತ್ತಿದ್ದ ಪ್ರಕರಣವನ್ನು ಆಲ್ದೂರು ಪೊಲೀಸರು ಪತ್ತೆಹಚ್ಚಿದ್ದು, ಆರೋಪಿಗಳು ಪರಾರಿಯಾಗಿದ್ದು, 9 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.

ಮಾರ್ಚ್ 11 ರಂದು ಬೆಳಿಗಿನ ಜಾವಾ ಆಲ್ದೂರು ಠಾಣಾ ಸರಹದ್ದಿನ ವಗರ್ ಎಂಬಲ್ಲಿ ಬಿಡಾಡಿ ದನಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಆಲ್ದೂರು ಪಿ.ಎಸ್.ಐ. ಸಜೀತ್ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸುವ ವೇಳೆ ಆರೋಪಿಗಳು ಸ್ಕಾರ್ಪಿಯೋ ವಾಹನದಲ್ಲಿ ದನಗಳನ್ನು ತುಂಬಿಸಿಕೊಂಡು ತಪ್ಪಿಸಿಕೊಂಡು ಹೋಗಿದ್ದರು. ನಂತರ ವಾಹನವನ್ನು ಪೊಲೀಸರು ಬೆನ್ನಟ್ಟಿ ಹೋದಾಗ  ಆಲ್ದೂರು ಸಮೀಪದ ಗುಲ್ಲನ್ ಪೇಟೆಯಲ್ಲಿ ನಿಲ್ಲಿಸಿ ಪರಾರಿಯಾಗಿದ್ದರು.

ದನಗಳನ್ನು ಕದ್ದು ಸಾಗಿಸಲು ಪ್ರಯತ್ನಿಸಿದವರನ್ನು ಮಹಮ್ಮದ್ ಮುಬಾರಕ್ ಬಿನ್ ಮಹಮದ್ ಇಲಿಯಾಜ್ , ಇಕ್ಕು , ಯೂನಸ್ ಸಲೀಂ ಎಂದು ಗುರುತಿಸಲಾಗಿದೆ. ಪೊಲೀಸರು ಬೆನ್ನಟ್ಟಿ ಬಂದಾಗ ಆರೋಪಿತರು ವಾಹನವನ್ನು ಗುಲ್ಲನ್ ಪೇಟೆಯ ಆರೋಪಿ ಮಹಮ್ಮದ್ ಮುಬಾರಕ್ ಮನೆಯ ಮುಂದೆ ನಿಲ್ಲಿಸಿ ಪರಾರಿಯಾಗಿದ್ದರು.

ಈ ಬಗ್ಗೆ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅರೋಪಿತರು ಕಳ್ಳತನ ಮಾಡಿಕೊಂಡು ಹೋಗಿದ್ದ 5 ದನವನ್ನು ವಾಹನದಲ್ಲಿ ಹಿಂಸೆಯಿಂದ ಹಗ್ಗದಲ್ಲಿ ಕಟ್ಟಿ ಸ್ಕಾರ್ಪಿಯೋ ವಾಹನದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ತುಂಬಿದ್ದು, ಅದಾಗಲೇ ಕಳ್ಳನತ ಮಾಡಿ ತಂದಿದ್ದ 4 ದನಗಳು ಮುಬಾರಕ್ ಮನೆಯ ಬಳಿ ಕಂಡುಬಂದಿದ್ದವು. ಅವುಗಳನ್ನು ಮಾಂಸಕ್ಕಾಗಿ ಕಡಿಯುವ ಉದ್ದೇಶದಿಂದ ಅಲ್ಲಿಗೆ ತಂದಿದ್ದು ಆರೋಪಿತನ ಮನೆಯ ಶೆಡ್ಡಿನಲ್ಲ್ಲಿ ಇದ್ದ ದನ ಕಡಿದು ಮಾಂಸ ಮಾಡುವ ಪರಿಕರಗಳನ್ನು ಮತ್ತು 9 ದನಗಳನ್ನು ಹಾಗೂ ವಾಹನವನ್ನು ಅಮಾನತ್ತುಪಡಿಸಿಕೊಂಡು  ಆರೋಪಿತರ ವಿರುದ್ದ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಈ ಕಾರ್ಯಾಚರಣೆಯಲ್ಲಿ ಅಲ್ದೂರು ಠಾಣಾ ಪಿ.ಎಸ್.ಐ. ಸಜೀತ್ ಕುಮಾರ್ ಜಿ.ಅರ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಆರೋಪಿತರು ಕಳ್ಳತನ ಮಾಡಲು ಯತ್ನಿಸಿದ್ದ 9 ಜಾನುವಾರುಗಳನ್ನು ಪೊಲೀಸ್ ಸುಪರ್ದಿಯಲ್ಲಿ ಅರಸೀಕೆರೆ ಸಮೀಪದ ಗೋಶಾಲೆಗೆ ಕಳುಹಿಸಿಕೊಡಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ