October 5, 2024

ಮೂಡಿಗೆರೆ ತಾಲ್ಲೂಕಿನ ಕಿತ್ಲೇಗಂಡಿ ಗ್ರಾಮ ಮತ್ತು ಸುತ್ತಮುತ್ತ ಸುಮಾರು 15ವರ್ಷಗಳಿಂದ ಅನಾಥವಾಗಿ ತಿರುಗಾಡುತ್ತಿದ್ದ ಅಣ್ಣಪ್ಪ ಎಂಬ ವ್ಯಕ್ತಿಯನ್ನು ಮೂಡಿಗೆರೆ ಸಾಮಾಜಿಕ ಸಕ್ರಿಯಾ ಸೇವಾ ಸಂಸ್ಥೆ(ರಿ)ಯ ಸದಸ್ಯರು ಆರೈಕೆ ಮಾಡಿ ಅನಾಥಶ್ರಮಕ್ಕೆ ಸೇರಿಸಿರುತ್ತಾರೆ.

ಸಂಸ್ಥೆಯ ಅಧ್ಯಕ್ಷರಾದ ಫಿಶ್ ಮೋಣು, ಅಬ್ದುಲ್ ರಹಮಾನ್, ಅಸೀಫ್ ಬೀಜುವಳ್ಳಿ, ಉಮ್ಮರ್ ಹಾಗು ಚಕ್ಕಮಕಿ ಅಯ್ಯೂಬ್ ಹಾಜಿ ಇವರುಗಳು ಅಣ್ಣಪ್ಪನನ್ನು ಕ್ಷೌರ ಮಾಡಿಸಿ, ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕಿಸಿ ತುಮಕೂರು ಶಾರದಾಂಭ ಅನಾಥಾಶ್ರಮಕ್ಕೆ ಕರೆದುಕೊಂಡು ಸೇರಿಸಿರುತ್ತಾರೆ.

ಈ ಕಾರ್ಯಕ್ಕೆ ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಜಿ.ಬಿ. ಧರ್ಮಫಾಲ್ ಮತ್ತು ಕಿತ್ತಲೇಗಂಡಿಯ ಕೆ .ಎಂ. ಹೋಟೆಲ್ ಮಾಲೀಕರಾದ ಥಚ್ಚಿ ಮತ್ತು ಸ್ಥಳೀಯರು ಸಹಕಾರ ನೀಡಿದರು.

ಮೂಡಿಗೆರೆ ಸಾಮಾಜಿಕ ಸಕ್ರಿಯಾ ಸೇವಾ ಸಂಸ್ಥೆ(ರಿ) ಇದರ ಅಧ್ಯಕ್ಷರಾದ ಫಿಶ್ ಮೋಣು ಮತ್ತು ಅವರ ತಂಡದವರು ಹಲವು ವರ್ಷಗಳಿಂದ ಇಂತಹ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಹತ್ತಾರು ಅನಾಥರನ್ನು ಆರೈಕೆ ಮಾಡಿ ಆಶ್ರಮಗಳಿಗೆ ಸೇರಿಸಿದ್ದಾರೆ. ಅನೇಕ ಕಠಿಣ ಪರಿಸ್ಥಿತಿಗಳಲ್ಲಿ ಇವರು ಪೊಲೀಸ್ ಮತ್ತು ಅಗ್ನಿಶಾಮಕ ದಳದೊಂದಿಗೆ ಸ್ವಯಂಪ್ರೇರಿತರಾಗಿ ಜೀವದ ಹಂಗು ತೊರೆದು ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.

ನಿಸ್ವಾರ್ಥ ಮನೋಭಾವನೆಯಿಂದ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಫಿಶ್ ಮೋಣು ಮತ್ತವರ ತಂಡದ ಕಾರ್ಯ ಶ್ಲಾಘನೀಯವಾಗಿದೆ.

*************************

ನಿರಂತರ ಸುದ್ದಿಗಳಿಗಾಗಿ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ 
https://chat.whatsapp.com/DDXjmfQaBa0HJQqmKf7y89

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ