October 5, 2024

ಶೀವಮೊಗ್ಗ ನೂತನ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಜನರನ್ನು ಕರೆದೊಯ್ಯಲು ನಮ್ಮ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಡಿಪೋಗಳ ಬಹುತೇಕ ಸಾರಿಗೆ ಬಸ್ ಗಳನ್ನು ಕಳುಹಿಸಿಕೊಡಲಾಗಿದೆ.

ಇದರಿಂದ ತಮ್ಮ ನಿತ್ಯಸಂಚಾರದ ಬಸ್ಸುಗಳು ಬಾರದೇ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪರದಾಡುವಂತಾಗಿದೆ.

ಇಂದು ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದು ನೂತನ ವಿಮಾನ ನಿಲ್ದಾಣ ಉದ್ಘಾಟನೆ ನೆರವೇರಿಸಲಿದ್ದಾರೆ. ಆ ಕಾರ್ಯಕ್ರಮಕ್ಕೆ ಜನರನ್ನು ಸೇರಿಸಲು ನೆರೆಯ ಜಿಲ್ಲೆಯ ಸಾರಿಗೆ ಬಸ್ಸುಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಎಂದು ಎಂದಿನಂತೆ ಶಾಲಾಕಾಲೇಜಿಗೆ ಹೋಗಲು ಬಸ್ಸಿಗೆಂದು ಕಾದು ನಿಂತಿದ್ದ ವಿದ್ಯಾರ್ಥಿಗಳು ಸಮಯ ಮೀರುತ್ತಾ ಬಂದರು ಬಸ್ಸು ಬಾರದೇ ಇದ್ದುದ್ದರಿಂದ ಕಂಗಾಲಾಗಿದ್ದಾರೆ.

ಇವತ್ತು ಪ್ರಥಮ ಪಿ.ಯು.ಸಿ‌.ಸೇರಿದಂತೆ ಅನೇಕ ತರಗತಿಗಳಿಗೆ ಪರೀಕ್ಷೆ ಇತ್ತು. ಗ್ರಾಮೀಣ ಭಾಗದಿಂದ ಶಾಲಾ ಕಾಲೇಜಿಗೆ ತೆರಳುವ ಸಾವಿರಾರು ವಿದ್ಯಾರ್ಥಿಗಳು ಪರ್ಯಾಯ ವಾಹನ ವ್ಯವಸ್ಥೆ ಇಲ್ಲದೆ ಪರೀಕ್ಷೆ ಹಾಜರಾಗಲು ಸಾಧ್ಯವಾಗಿಲ್ಲ.

ಮೂಡಿಗೆರೆ ಡಿಪೋ ಒಂದರಿಂದಲೇ ಸುಮಾರು‌ 40 ಬಸ್ಸುಗಳು ಶಿವಮೊಗ್ಗ ಕಾರ್ಯಕ್ರಮಕ್ಕೆ ತೆರಳಿವೆ. ತಾಲ್ಲೂಕಿನ ಗ್ರಾಮೀಣ ಭಾಗದ ಬಹುತೇಕ ಕಡೆ ಇಂದು ಬಸ್ಸುಗಳಿಲ್ಲದೇ ಅಡಚಣೆಯಾಗಿದೆ.

ಹೀಗೆ ಸಾರಿಗೆ ಇಲಾಖೆ ಯಾವುದೇ ಮುನ್ಸೂಚನೆ ನೀಡದೇ ಬಸ್ಸುಗಳನ್ನು ಬೇರೆಡೆಗೆ ಕಳುಹಿಸಿಕೊಟ್ಟಿರುವುದರ ಬಗ್ಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ