October 5, 2024

ನಮ್ಮ ರಾಜ್ಯದ ಹೆಮ್ಮೆಯ ಬ್ಯಾಂಕ್ ಕರ್ನಾಟಕ ಬ್ಯಾಂಕ್ ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಶತಮಾನೋತ್ಸವದ ಅಂಗವಾಗಿ ಬ್ಯಾಂಕಿನ ಎಲ್ಲಾ ಶಾಖೆಗಳಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಲಾಗುತ್ತಿದೆ.

ಮೂಡಿಗೆರೆ ತಾಲ್ಲೂಕಿನ ಬಣಕಲ್‍ನಲ್ಲಿ ಸೋಮವಾರ ಕರ್ಣಾಟಕ ಬ್ಯಾಂಕಿನ ಶತಮಾನೋತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಬಣಕಲ್ ಶಾಖೆಯ ವ್ಯವಸ್ಥಾಪಕ ಬಿ. ಮಂಜುನಾಥ್ ರವರು 1924 ರಲ್ಲಿ ಮಂಗಳೂರಿನಲ್ಲಿ ಬ್ಯಾಂಕ್ ಸ್ಥಾಪನೆಯಾಗಿ ಇಂದು ದೇಶದ 24 ರಾಜ್ಯಗಳಲ್ಲಿ 900 ಕ್ಕೂ ಹೆಚ್ಚು ಶಾಖೆಗಳು ಹಾಗೂ 1400 ಕ್ಕೂ ಹೆಚ್ಚು ಎಟಿಎಂ ಘಟಕಗಳನ್ನು ಹೊಂದಿದೆ. ಬ್ಯಾಂಕ್ ರೂ 1.47 ಸಾವಿರ ಕೋಟಿ ಅಧಿಕ ವ್ಯವಹಾರ ಮಾಡಿರುವುದು ಸಂತಸದ ವಿಚಾರ. ಗ್ರಾಹಕರಿಂದಲೇ ಬ್ಯಾಂಕ್ ಅಭಿವೃದ್ದಿಗೆ ಕಾರಣವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಿಗುವ ಎಲ್ಲಾ ಸರ್ಕಾರಿ ಸಾಲ ಸೌಲಭ್ಯ ಜನರಿಗೆ ಒದಗಿಸುವಲ್ಲಿ ಬ್ಯಾಂಕ್ ಉತ್ತಮ ಸೇವೆ ನೀಡಿದೆ. ವಿಶೇಷ ಕೆಬಿಎಲ್ ಸುರಕ್ಷಾ ಯೋಜನೆಯಲ್ಲಿ ವಾರ್ಷಿಕ 50ರೂ ಕಂತಿನ ಯೋಜನೆಯಲ್ಲಿ ಅಪಘಾತವಾದ ಸ್ಥಳೀಯರೊಬ್ಬರಿಗೆ 5ಲಕ್ಷ ಪರಿಹಾರ ನೀಡಿದ್ದೇವೆ. ಇನ್ನೂ ಮೂವರಿಗೆ 10ಲಕ್ಷ ರೂ ಪರಿಹಾರ ಬ್ಯಾಂಕ್ ನೀಡಲಿದೆ ಎಂದರು.

 

ಗ್ರಾಹಕರಾದ ಬಿ.ಶಿವರಾಮ ಶೆಟ್ಟಿ ಮಾತನಾಡಿ ಬ್ಯಾಂಕುಗಳು ಬಡ ಜನರಿಗೆ ರೈತಾಪಿ ವರ್ಗದ ಜನರಿಗೆ ನೆರವು ನೀಡುವಂತಾಗಬೇಕು. 55ವರ್ಷದಿಂದ ಕರ್ಣಾಟಕ ಬ್ಯಾಂಕ್ ಉತ್ತಮ ಸೇವೆ ನೀಡುತ್ತಿದೆ. ಸಿಬ್ಬಂದಿಗಳು ಇನ್ನು ಮುಂದೆಯೂ ಎಲ್ಲಾ ತರಹದ ಜನರಿಗೆ ನಗುಮುಖದ ಸೇವೆ ನೀಡುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ವರ್ತಕರಾದ ಯಶೋಧರ್ ರಾವ್, ಬಣಕಲ್ ಪೆಟ್ರೋಲ್ ಬಂಕ್ ಮಾಲಿಕ ಸಂದೇಶ್, ಬಣಕಲ್ ಗ್ರಾ.ಪಂ. ಮಾಜಿ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ, ರಾಜೇಶ್,ಅಮೀನ್,ಸರ್ವರ್, ತನುಕೊಟ್ಟಿಗೆಹಾರ,ಅಣ್ಣಪ್ಪ ಕೂಡಹಳ್ಳಿ,ಡಾ.ವಿಜಯ್,ದಯಾಳ್ ಶೇಟ್ ,ಅಖಿಲ್ ಸಿಬ್ಬಂದಿಗಳಾದ ಪ್ರದ್ಯುಮ್ನಾ ರಾವ್,ಅಶೋಕ್,ಶ್ರೀಧರ್,ವಿದ್ಯಾ, ಅಭಿಲಾಷ್, ಸ್ನೇಹಾ, ಬಿ.ಎನ್. ಸದಾಶಿವ,ಲೀಲಾವತಿ ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ