October 5, 2024

ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂಬ ಇರಾದೆಯಲ್ಲಿರುವ ಬಿ.ಜೆ.ಪಿ. ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನಾಗಿ ದಿನೇಶ್ ದೇವರುಂದ ಇವರನ್ನು ನೇಮಿಸಿದೆ.

ಚುನಾವಣಾ ಚಾಣಾಕ್ಷ ಎಂದೇ ಹೆಸರು ಮಾಡಿರುವ ಎಂ.ಜೆ. ದಿನೇಶ್ ದೇವರುಂದ ಇವರನ್ನು ಬೇಲೂರು ಕ್ಷೇತ್ರದ ಬಿ.ಜೆ.ಪಿ. ಉಸ್ತುವಾರಿಯನ್ನಾಗಿ ನೇಮಿಸಿ ರಾಜ್ಯ ಬಿ.ಜೆ.ಪಿ. ಆದೇಶ ಹೊರಡಿಸಿದೆ.

ಕಳೆದ ಬಾರಿ ಬೇಲೂರಿನಲ್ಲಿ ಬಿ.ಜೆ.ಪಿ. ಎರಡನೇ ಸ್ಥಾನ ಗಳಿಸಿತ್ತು. ಇಲ್ಲಿ ಜೆ.ಡಿ.ಎಸ್.ನ ಲಿಂಗೇಶ್ ಗೆಲುವು ಪಡೆದಿದ್ದರು. ಬಿ.ಜೆ.ಪಿ.ಯಿಂದ ಹೆಚ್.ಕೆ. ಸುರೇಶ್ ಅಭ್ಯರ್ಥಿಯಾಗಿದ್ದರು. ಈ ಬಾರಿ ಕ್ಷೇತ್ರದಲ್ಲಿ ಬಿ.ಜೆ.ಪಿ. ಟಿಕೇಟ್ ಗೆ ಹಲವು ಮಂದಿ ಪೈಪೋಟಿ ನಡೆಸುತ್ತಿದ್ದು ಹೆಚ್.ಕೆ. ಸುರೇಶ್(ಹುಲ್ಲಹಳ್ಳಿ ಸುರೇಶ್) ಮತ್ತೊಮ್ಮೆ ಬಿ.ಜೆ.ಪಿ. ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಬೇಲೂರು ವಿಧಾನಸಭಾ ಕ್ಷೇತ್ರವನ್ನು ಮುಂಬರುವ ಚುನಾವಣೆಯಲ್ಲಿ ಶತಾಯುಗತಾಯ ಗೆಲ್ಲಲೇಬೇಕೆಂಬ ಗುರಿಯಿಟ್ಟುಕೊಂಡಿರುವ ಬಿ.ಜೆ.ಪಿ. ಪಕ್ಷವೂ ಬಿ.ಜೆ.ಪಿ. ರಾಷ್ಟ್ರೀಯ ಕಿಸಾನ್ ಮೋರ್ಚಾ ಕಾರ್ಯಕಾರಿಣಿ ಮಂಡಳಿ ಸದಸ್ಯ ದಿನೇಶ್ ದೇವರುಂದ ಇವರಿಗೆ ಕ್ಷೇತ್ರದ ಚುನಾವಣಾ ಉಸ್ತುವಾರಿ ನೀಡಿದೆ.

 

ಹಾಸನ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಬಿ.ಜೆ.ಪಿ. ತನ್ನ ಉಸ್ತುವಾರಿಗಳನ್ನು ನೇಮಿಸಿದೆ. ಬೇಲೂರಿಗೆ ದಿನೇಶ್ ದೇವರುಂದ, ಹಾಸನ ಕ್ಷೇತ್ರಕ್ಕೆ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ, ಶ್ರವಣಬೆಳಗೊಳಕ್ಕೆ ಮಂಜು ಮಂಡ್ಯ, ಅರಸಿಕೆರೆಗೆ ಲೋಹಿತ್ ಕುಂದೂರು, ಹೊಳೆನರಸೀಪುರಕ್ಕೆ ಹೆಚ್.ಎಂ. ಸುರೇಶ್, ಅರಕಲಗೂಡು ಕ್ಷೇತ್ರಕ್ಕೆ ಪ್ರಕಾಶ್ ಕೊರಟಗೆರೆ, ಸಕಲೇಶಪುರ ಕ್ಷೇತ್ರಕ್ಕೆ ಅಮಿತ್ ಶೆಟ್ಟಿ ಇವರನ್ನು ಚುನಾವಣಾ ಉಸ್ತುವಾರಿಗಳಾಗಿ ನೇಮಿಸಿದೆ.

ಬೇಲೂರು ಉಸ್ತುವಾರಿ ವಹಿಸಿರುವ ದಿನೇಶ್ ಇವರು ಜನಸಂಘ ಕಾಲದಿಂದಲೂ ಕಾರ್ಯಕರ್ತರಾಗಿ ಸೇವೆಸಲ್ಲಿಸುತ್ತಿದ್ದ ಮೇಕನಗದ್ದೆ-ದೇವರುಂದ ಗ್ರಾಮದ ಜಗನ್ನಾಥಗೌಡ ಇವರ ಪುತ್ರ. ದಿನೇಶ್ ಆರಂಭದಿಂದಲೂ ಬಿ.ಜೆ.ಪಿ. ಕಾರ್ಯಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಜಿನಿಯರ್ ಪದವೀದರರಾದ ಇವರು ಮೂಡಿಗೆರೆ ತಾಲ್ಲೂಕಿನ ದೇವರುಂದದಲ್ಲಿ ಕಾಫಿ ಎಸ್ಟೇಟ್ ಹೊಂದಿದ್ದಾರೆ. ತನ್ನದೇ ಮಾಲೀಕತ್ವದ ‘ಕೃಷಿಕ’ ಹೆಸರಿನ ಕೃಷಿ ನಿಯತಕಾಲಿಕ ಹೊರತರುತ್ತಿದ್ದಾರೆ.

ಕೃಷಿ ಮತ್ತು ಕೃಷಿ ಪತ್ರಿಕೋದ್ಯಮದೊಂದಿಗೆ ರಾಜಕೀಯ ಮತ್ತು ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನ ಮಲೆನಾಡು ಕ್ರೆಡಿಟ್ ಕೋ. ಆಪರೇಟೀವ್ ಸೊಸೈಟಿ ಇದರ ಸಂಸ್ಥಾಪರಾಗಿದ್ದು, ಸಹ್ಯಾದ್ರಿ ಸಂಘ ಬೆಂಗಳೂರು ಸಂಘಟನಾ ಕಾರ್ಯದರ್ಶಿಯಾಗಿ, ಪೂರ್ಣಪ್ರಜ್ಞ ಶಾಲೆ ಕಡಬಗೆರೆ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಭಾರತ ಟೂರಿಸಂ ಡೆವಲಪ್‍ಮೆಂಟ್ ಕೋ ಆಪರೇಟೀವ್ ಸೊಸೈಟಿ ಇದರ ಸ್ಥಾಪಕ ನಿರ್ದೇಶಕರಾಗಿ, ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಮೂಡಿಗೆರೆ ಪಿ.ಸಿ.ಎ.ಆರ್.ಡಿ. ಬ್ಯಾಂಕ್ ಮತ್ತು ಟಿ.ಎ.ಪಿ.ಸಿ.ಎಂ.ಎಸ್.ನ ಮಾಜಿ ನಿರ್ದೇಶಕರಾಗಿ, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹೀಗೆ ವಿವಿಧ ಜವಾಬ್ದಾರಿ ಹುದ್ದೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ದಿನೇಶ್ ದೇವರುಂದ ಇವರು ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 2004 ಮತ್ತು 2008ರಲ್ಲಿ ಚುನಾವಣಾ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಮೊತ್ತಮೊದಲ ಬಾರಿಗೆ ಕ್ಷೇತ್ರದಲ್ಲಿ ಬಿ.ಜೆ.ಪಿ. ಗೆಲುವು ಪಡೆಯುವಲ್ಲಿ ಇವರು ರೂಪಿಸಿದ ಚುನಾವಣಾ ತಂತ್ರಗಾರಿಕೆ ಪ್ರಮುಖ ಪಾತ್ರ ವಹಿಸಿತ್ತು. 2008ರಲ್ಲಿ ಎರಡನೇ ಬಾರಿ ಕ್ಷೇತ್ರದಲ್ಲಿ ಬಿ.ಜೆ.ಪಿ. ಇವರ ಉಸ್ತುವಾರಿಯಲ್ಲಿ ಗೆಲುವು ಪಡೆದಿತ್ತು. ಅಲ್ಲದೇ ಎರಡು ಬಾರಿ ಎಂ.ಕೆ. ಪ್ರಾಣೇಶ್ ಅವರು ವಿಧಾನಪರಿಷತ್ ಚುನಾವಣೆ ಸ್ಪರ್ಧಿಸಿದಾಗಲೂ ದಿನೇಶ್ ಅವರ ಪರವಾಗಿ ಕೆಲಸ ಮಾಡಿದ್ದರು.

ಸದ್ಯ ಬಿ.ಜೆ.ಪಿ. ಕಿಸಾನ್ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುವ ದಿನೇಶ್ ಅವರಿಗೆ ಬೇಲೂರು ಕ್ಷೇತ್ರದಲ್ಲಿಯೂ ಸಾಕಷ್ಟು ಸಂಪರ್ಕವಿದ್ದು, ಹಾಗಾಗಿ ಪಕ್ಷ ಅವರಿಗೆ ಕ್ಷೇತ್ರದ ಚುನಾವಣೆ ಉಸ್ತುವಾರಿ ನೀಡಿದೆ ಎನ್ನಲಾಗಿದೆ. ಬೇಲೂರು ಕ್ಷೇತ್ರದಲ್ಲಿ ಗೆಲ್ಲಲು ಮಾಸ್ಟರ್ ಪ್ಲಾನ್ ಮಾಡಿರುವ ಬಿ.ಜೆ.ಪಿ., ದಿನೇಶ್ ದೇವರುಂದ ಅವರ ಉಸ್ತುವಾರಿಯಲ್ಲಿ ಈ ಬಾರಿ ತನ್ನ ವಿಜಯಪತಾಕೆ ಹಾರಿಸುತ್ತದಾ ಎಂದು ಕಾದು ನೋಡಬೇಕು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ