October 5, 2024

ದಿನಾಂಕ 8/01/2023 ರ ಭಾನುವಾರ ಉಡುಪಿಯ ಶ್ರೀಕೃಷ್ಣ ದೇವಾಲಯದ ಮಧ್ವಮಂಟಪದಲ್ಲಿ ಮಲೆನಾಡಿನ ಮಹಿಳಾ ಮಣಿಗಳ ವಿಶಿಷ್ಟ ಕಾರ್ಯಕ್ರಮವು ನೋಡುಗರ ಮನ ಸೆಳೆದಿತ್ತು.

ತಮ್ಮ ಚತುರ್ಥ ಪರ್ಯಾಯದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶ್ರೀಕೃಷ್ಣನ ಸೇವೆಗೈಯುತ್ತಿರುವ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದಂಗಳವರ ಕೃಪಾಪೋಷಣೆಯಡಿಯಲ್ಲಿ ಈ ಕಾರ್ಯಕ್ರಮವು ಜರುಗಿತು. ಮೂಡಿಗೆರೆ ಹಾಗೂ ಚಿಕ್ಕಮಗಳೂರಿನ ಭಕ್ತವೃಂದದವರಿಂದ ಮೈಸೂರಿನ ಸಾಹಿತಿ ಹಾಗೂ ಸಂಸ್ಕøತ ಉಪನ್ಯಸಕರಾದ ಡಾ. ಸುಧಾ ಜೋಶಿ ಅವರು ರಚಿಸಿ ನಿರ್ದೇಶನ ಮಾಡಿದ *ದಾಸರಿಹರಿಲ್ಲಿ* ಎಂಬ ರೂಪಕು ನೋಡುಗರನ್ನು ಸೆಳೆಯಿತು.

ಡಾ. ಸುಧಾ ಜೋಶಿಯವರು ಶ್ರೀ ಪುರಂದರದಾಸರು, ಶ್ರೀ ಕನಕದಾಸರು, ಶ್ರೀ ವಿಜಯದಾಸರು ಹಾಗೂ ಶ್ರೀ ಜಗನ್ನಾಥದಾಸರು ಇವರುಗಳ ಜೀವನ ಚರಿತ್ರೆಯನ್ನು ಕವಿತೆಯಂತೆ ರಚಿಸಿ ಅದಕ್ಕೆ ಪೂರಕವಾದ ವೇಷಭೂಷಣಗಳಿಂದ ಶ್ರೀ ರಾಗರಂಜಿನಿ ಭಕ್ತವೃಂದದವರಿಂದ ನೃತ್ಯರೂಪಕವನ್ನು ಮಾಡಿಸಿದರು.

ಉಡುಪಿಯಲ್ಲಿ ಮೊದಲಬಾರಿಗೆ ಇಂತಹ ದಾಸವರೇಣ್ಯರ ಕಾರ್ಯಕ್ರಮವು ರೂಪಕದ ಮೂಲಕ ನಡೆಯಿತೆಂದು ಅಲ್ಲಿನ ಭಕ್ತವೃಂದದವರಿಂದ ಅಪಾರ ಮೆಚ್ಚುಗೆ ಪಡೆಯಿತು. ರಾಗರಂಜಿನಿ ಭಕ್ತವೃಂದದ ರೂವಾರಿಯಾದ ಶ್ರೀಮತಿ ಪ್ರಸನ್ನಲಕ್ಷ್ಮಿಯವರು ತಮ್ಮ ತಂಡದವರಿಂದ ವಿವಿಧ ರೀತಿಯ ಶ್ರೀ ಕೃಷ್ಣನ ಭಜನೆಯನ್ನು ಹಾಡುವ ಮೂಲಕ ಪರಮಾತ್ಮನನ್ನು ಸ್ತುತಿಸಿದರು. ಮೂಡಿಗರೆಯ ಶ್ರೀಮತಿ ರೂಪ ಶಿವಪ್ರಸಾದ ಭಟ್ ಹಾಗೂ ಅವರ ತಂಡವು ಬಣ್ಣ ಬಣ್ಣದ ಕೋಲಿನಿಂದ ಕೋಲಾಟ ಆಡಿ ಶ್ರೀಕೃಷ್ಣನ ಕೃಪೆಗೆ ಪಾತ್ರರಾದರು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮವು ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಶ್ರೀಗಳು ತಂಡದ ಎಲ್ಲರಿಗೂ ಮನೋಹರವಾದ ಸ್ಮರಣಿಕೆಯನ್ನು ಹಾಗೂ ಫಲಮಂತ್ರಾಕ್ಷತೆಯನ್ನು ನೀಡಿ ಆಶೀರ್ವದಿಸಿ ಮತ್ತೊಮ್ಮೆ ಮಗದೊಮ್ಮೆ ಇಂತಹ ಕಾರ್ಯಕ್ರಮಗಳು ಶ್ರೀಕೃಷ್ಣ ಪರಮಾತ್ಮನ ಕೃಪೆಯಿಂದ ಜರುಗುತ್ತಿರಲಿ ಎಂದು ಮನತುಂಬಿ ಆಶೀರ್ವದಿಸಿದರು.

ಡಾ. ಸುಧಾ ಜೋಶಿಯವರು ಪ್ರಸ್ತುತ ಮೈಸೂರಿನವರಾದರು ಸಹ ಮೂಲತಃ ಮೂಡಿಗೆರೆ ತಾಲ್ಲೂಕಿನವರಾಗಿದ್ದು ತಮ್ಮ ತವರೂರಿನ ಕಲಾತಂಡವನ್ನು ಸಜ್ಜುಗೊಳಿಸಿ ಶ್ರೀಕೃಷ್ಣನೆದುರಿನಲ್ಲಿ ಪ್ರದರ್ಶನ ನೀಡಿದ್ದು ಎಲ್ಲರಿಗೂ ಸಂತೋಷದ ವಿಚಾರವಾಗಿದೆ, ಭಾಗವಹಿಸಿದ ಎಲ್ಲರಿಗೂ ಹಾಗೂ ತಮ್ಮ ತವರೂರಿನ ಅಭಿಮಾನದಿಂದ ಕಲಾತಂಡವನ್ನು ಸಜ್ಜುಗೊಳಿಸಿದ ಡಾ. ಸುಧಾ ಜೋಶಿಯವರಿಗೂ ನಮ್ಮ ದರ್ಪಣ ಪತ್ರಿಕಾ ತಂಡವು ಹಾರ್ದಿಕ ಅಭಿನಂದನೆಗಳನ್ನು ಅಭಿಮಾನ ಪೂರ್ವಕವಾಗಿ ಸಲ್ಲಿಸುತ್ತದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ