October 5, 2024

ಜಗತ್ತಿಗೆ ಜ್ಞಾನದ ಬೆಳಕನ್ನು ಹಾರಾಡಿಸಿದ ಸ್ವಾಮಿ ವಿವೇಕಾನಂದ ಅವರ ಚರಿತ್ರೆ ಹಾಗೂ ಆದರ್ಶ ಜೀವನದ ಬಗ್ಗೆ ಅರಿತುಕೊಂಡರೆ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದು ಜೆಸಿಐ ಅಧ್ಯಕ್ಷೆ ಸವಿತಾ ರವಿ ಹೇಳಿದರು.

ಅವರು ಗುರುವಾರ ಪಟ್ಟಣದ ಡಿಎಸ್‌ಬಿಜಿ ಕಾಲೇಜು ಆವರಣದಲ್ಲಿ ಜೇಸಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ಎಂಬ ಅದ್ಭುತ ಸಾಲನ್ನು ಹೇಳಿದ ಸ್ವಾಮಿ ವಿವೇಕಾನಂದ ಅವರ ಮಾತು ಸಾಧನೆ ಮಾಡುವವರಿಗೆ ಪ್ರೇರೇಣೆಯಾಗಿದೆ. ವಿವೇಕಾನಂದರು ತತ್ವಜ್ಞಾನಿ, ಆಧ್ಯಾತ್ಮಿಕ ಚಿಂತಕ, ಮಹಾನ್ ದೇಶಭಕ್ತ, ಶ್ರೇಷ್ಟ ವಾಗ್ಮಿಯಾಗಿದ್ದರು. ವಿವೇಕಾನಂದರ ಮಾತುಗಳಲ್ಲಿ ಸೋಮಾರಿತನ ಇರುವ ವ್ಯಕ್ತಿಗಳು ಸಾಧನೆಯತ್ತ ಮುಖ ಮಾಡುವಂತಹ ಶಕ್ತಿ ಇತ್ತು. ಹಾಗಾಗಿ ಅವರು ಹೇಳಿದ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಹೇಳಿದರು.

ಡಿಎಸ್‌ಬಿಜಿ ಕಾಲೇಜಿನ ಗ್ರಂಥ ಪಾಲಕ ರವೀಂದ್ರರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಟ್ಟ ವಿಚಾರವನ್ನು ಬಿಟ್ಟು ಸಮಾಜದಲ್ಲಿ ಉತ್ತಮರಾಗಲು ಹಾಗೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸದಾ ಸಾಧನೆಯ ಗುರಿಯತ್ತ ಚಿಂತನೆ ಮಾಡುವ ಮನೋಭಾವ ರೂಡಿಸಿಕೊಳ್ಳಬೇಕು. ವಿವೇಕಾನಂದರ ಆದರ್ಶ ಜೀವನದ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೇಸಿ ಟಿ.ಹರೀಶ್, ಜೇಸಿ ರವಿಕುಮಾರ್ ಮತ್ತು ಜೇಸಿ ಕೆ.ಎನ್.ರವಿ ಯವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಜೆಸಿಐ ಕಾರ್ಯದರ್ಶಿ ಕೆ.ಕೆ.ಪ್ರದೀಪ್, ಕವಿತಾ ಸಂತೋಷ್, ರೇಖಾ ನಾಗರಾಜು, ಸುಚಿತ್ರ ಪ್ರಸನ್ನ, ಪವನ ವಿಜಯ್, ದೀಪಿಕಾ ಪ್ರಸಾದ್, ಹಮೀದ್ ಮತ್ತಿತರರಿದ್ದರು.
*****

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ