October 5, 2024

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿ.ಜೆ.ಪಿ. ಟಿಕೆಟ್ ನನಗೆ ನೀಡಬೇಕು ಎಂದು ನಗರಸಭಾ ಮಾಜಿ ಅಧ್ಯಕ್ಷ ಬಿ.ಜೆ.ಪಿ. ಹಿರಿಯ ಮುಖಂಡ ಹೆಚ್.ಡಿ. ತಮ್ಮಯ್ಯ ಪ್ರಬಲವಾಗಿ ಅಹವಾಲು ಸಲ್ಲಿಸಿದ್ದಾರೆ.

ಇಂದು ಚಿಕ್ಕಮಗಳೂರು ನಗರದಲ್ಲಿ ಬಿ.ಜೆ.ಪಿ. ಕಛೇರಿ ಪಾಂಚಜನ್ಯಕ್ಕೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ನವರಿಗೆ ತಮಗೆ ಟಿಕೆಟ್ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಈ ಮೂಲಕ ಇದೇ ಮೊದಲ ಬಾರಿಗೆ ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿ.ಟಿ. ರವಿಯವರ ವಿರುದ್ಧ ಅವರ ಪಕ್ಷದಲ್ಲಿಯೇ ಪ್ರತಿಸ್ಪರ್ಧಿಯೊಬ್ಬರು ಅಧಿಕೃತವಾಗಿ ಹುಟ್ಟಿಕೊಂಡಂತೆ ಆಗಿದೆ.

ಕಳೆದ ಇಪ್ಪತ್ತು ವರ್ಷಗಳಿಂದ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿ ಶಾಸಕರಾಗಿ ಆಯ್ಕೆಯಾಗುತ್ತಿರುವ ಸಿ.ಟಿ. ರವಿಯವರು ಮುಂಬರುವ ಚುನಾವಣೆಯಲ್ಲಿಯೂ ಬಿ.ಜೆ.ಪಿ. ಅಭ್ಯರ್ಥಿಯೆಂದು ಪ್ರತಿಬಿಂಬಿಸಲ್ಪಟ್ಟಿದ್ದಾರೆ. ಪ್ರಸ್ತುತ ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದು ಬಿ.ಜೆ.ಪಿ. ರಾಷ್ಟ್ರಮಟ್ಟದ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಸಿ.ಟಿ.ರವಿಯವರ ಆಪ್ತವಲಯದಲ್ಲೇ ಗುರುತಿಸಿಕೊಂಡಿದ್ದ ತಮ್ಮಯ್ಯ ಇದೀಗ ತಮಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು ಎಂದು ಹಕ್ಕೋತ್ತಾಯ ಮಾಡಿದ್ದಾರೆ. ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಿರುವ ಅವರು ತಮ್ಮ ಮನವಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ 15 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರನಾಗಿ ಕೆಲಸ ಮಾಡಿಕೊಂಡು ಬಂದು ಸಿ.ಟಿ. ರವಿ ಅವರ ಗೆಲುವಿನಲ್ಲಿಯೂ ಸಾಕಷ್ಟು ಶ್ರಮವಹಿಸಿದ್ದೇನೆ. ಚಿಕ್ಕಮಗಳೂರು ನಗರಸಭೆ ನಾಲ್ಕು ಬಾರಿ ಸದಸ್ಯನೂ ಆಗಿದ್ದು, ಒಂದು ಬಾರಿ ಅಧ್ಯಕ್ಷರಾಗಿಯೂ ಆಡಳಿತ ನಡೆಸಿದ ಅನುಭವ ಇದೆ. ಲಿಂಗಾಯತ ಸಮುದಾಯದ ನನಗೆ ಈ ಬಾರಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡಬೇಕು ಎಂದು ಕೋರಿದ್ದಾರೆ.

ಇದರೊಂದಿಗೆ ಕ್ಷೇತ್ರದಲ್ಲಿ ಸಿ.ಟಿ.ರವಿಯವರಿಗೆ ಪ್ರತಿಸ್ಪರ್ಧಿಯೊಬ್ಬರು ಹುಟ್ಟಿಕೊಂಡಂತಾಗಿದೆ. ಕ್ಷೇತ್ರದಲ್ಲಿ ಪ್ರಬಲ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದ ತಮ್ಮಯ್ಯ ಅವರು ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ. ಇತ್ತೀಚೆಗೆ ತಮ್ಮಯ್ಯ ಅವರು ಲಿಂಗಾಯತ ಪ್ರಭಾವಿ ಸ್ವಾಮೀಜಿಗಳನ್ನು ಮತ್ತು ರಾಜ್ಯದ ಅನೇಕ ಬಿ.ಜೆ.ಪಿ. ಮುಖಂಡರನ್ನು ಭೇಟಿಮಾಡಿ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ ಎಂದು ಅವರ ಆಪ್ತ ವಲಯದಿಂದ ತಿಳಿದುಬಂದಿದೆ.

ಇದೀಗ ಅವರು ಟಿಕೆಟ್ ಕೇಳಿ ಬೆಂಬಲಿಗರೊಂದಿಗೆ ಮನವಿ ಸಲ್ಲಿಸಿರುವುದಕ್ಕೆ ಪಕ್ಷದ ಹೈಕಮಾಂಡ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತದೆ ಕಾದು ನೋಡಬೇಕು.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯದಿಂದಲೂ, ಜನಪಂಪರ್ಕದಿಂದಲೂ, ರಾಜಕೀಯ ಬೆಳವಣಿಗೆಯಿಂದಲೂ ಪ್ರಬಲವಾಗಿರುವ ಸಿ.ಟಿ.ರವಿಯವರಿಗೆ ಬಿ.ಜೆ.ಪಿ. ಟಿಕೆಟ್ ನಿರಾಕರಿಸುವುದು ಸುಲಭವಲ್ಲ. ಏಕೆಂದರೆ ಸಿ.ಟಿ.ರವಿ ಯವರು ಈಗ ಟಿಕೆಟ್ ಪಡೆಯುವ ಹಂತ ದಾಟಿ ಟಿಕೆಟ್ ನೀಡುವ ತೀರ್ಮಾನ ಮಾಡುವ ಹಂತಕ್ಕೆ ತಲುಪಿದ್ದಾರೆ. ಹಾಗಾಗಿ ಅವರಿಗೆ ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ನೀಡುವುದು ಬಹುತೇಕ ಖಚಿತ.

ಆದರೆ ಈಗ ತಮ್ಮ ಆಪ್ತವಲಯದಲ್ಲಿದ್ದ ತಮ್ಮಯ್ಯ ಅವರು ಸಿ.ಟಿ.ರವಿ ವಿರುದ್ಧವೇ ತೊಡೆತಟ್ಟಿ ಟಿಕೆಟ್ ಗೆ ಬೇಡಿಕೆ ಇಟ್ಟಿರುವುದು ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರಭಾವ ಬೀರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.

ತಮ್ಮಯ್ಯನವರು ಈಗ ಮಂಡಿಸಿರುವ ಹಕ್ಕೋತ್ತಾಯದ ಹಿಂದೆ ಯಾವ ರಾಜಕೀಯ ತಂತ್ರಗಾರಿಕೆ ಅಡಗಿದೆ ಎಂಬುದು ಸ್ವತಃ ಬಿ.ಜೆ.ಪಿ. ಕಾರ್ಯಕರ್ತರಿಗೂ ಗೊಂದಲ ಉಂಟುಮಾಡುವಂತಿದೆ.

 

ಉಪಸಭಾಪತಿ ಸ್ಥಾನಕ್ಕೆ ಎಂ.ಕೆ.ಪ್ರಾಣೇಶ್ ಪುನರಾಯ್ಕೆ- ವಿದ್ಯಾರ್ಥಿಪರಿಷತ್ ನಿಂದ ವಿಧಾನಪರಿಷತ್ ವರೆಗೆ ಅವರ ರಾಜಕೀಯ ಹಾದಿ ಹೇಗಿತ್ತು ಗೊತ್ತಾ ?

 

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ