October 5, 2024

ಎಂ.ಎಸ್.ಅಶೋಕ್ ಅವರು ಮೂಡಿಗೆರೆ ಮತ್ತು ಚಿಕ್ಕಮಗಳೂರಿನ ವಿವಿಧ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಾ ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಮಾಜಮುಖಿ ಕೆಲಸ ಮಾಡುತ್ತಿದ್ದರು. ಸಂಪನ್ಮೂಲ ವ್ಯಕ್ತಿಗಳು ಬದುಕಿದ್ದಾಗ ಅವರ ಮೌಲ್ಯದ ಬಗ್ಗೆ ಚಿಂತನೆ ಮಾಡುವುದಿಲ್ಲ. ಮೃತಪಟ್ಟಾಗ ಪಶ್ಚಾತ್ತಾಪ ಪಡುವಂಮತಾಗುತ್ತದೆ. ಹಾಗಾಗಿ ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಅವರ ಅಗಲಿಕೆ ಸಮಾಜಕ್ಕೆ ನಷ್ಟ ತಂದಿದೆ. ಕುಟುಂಬ ನಿರ್ವಹಣೆಗಾಗಿ ಪತ್ನಿಗೆ ಹುದ್ದೆ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಅವರು ಶನಿವಾರ ಸಂಜೆ ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ವಿವಿಧ ಸಂಘ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ದಿವಂಗತ ಎಂ.ಎಸ್.ಅಶೋಕ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ತನ್ನ ಅಳಿಯ ಎಂ.ಎಸ್.ಅಶೋಕ್ ಅವರು ಅಪಾರ ವಿದ್ಯಾರ್ಥಿಗಳ ಬಳಗವನ್ನೇ ಕಟ್ಟಿದ್ದಾರೆ. ಅವರು ಎಲ್ಲಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರಿಂದ ಜನಪ್ರಿಯ ವ್ಯಕ್ತಿಯಾಗಿದ್ದರು. ಅವರ ಪುತ್ರನ ಸಂಪೂರ್ಣ ವಿದ್ಯಾಭ್ಯಾಸ ತಾನು ನೋಡಿಕೊಳ್ಳುತ್ತೇನೆ. ಬದುಕು ಕಟ್ಟಿಕೊಳ್ಳಲು ಪತ್ನಿಗೆ ಹುದ್ದೆ ದೊರಕಿಸಿಕೊಡಲು ಸಹಕರಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಸಿ.ಟಿ.ರವಿ ಪ್ರವಾಸೋಧ್ಯಮ ಸಚಿವರಾಗಿದ್ದಾ ಹೇಮಾವತಿ ನದಿ ಉಳಿಸಲು ಹಾಗೂ ಪ್ರವಾಸೋಧ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಮಾರ್ಗದರ್ಶನ ನೀಡಿದ ವ್ಯಕ್ತಿ ಎಂ.ಎಸ್.ಆಶೋಕ್ ಅವರಿಗೆ ಪಿಎಚ್‍ಡಿ ಅವಾರ್ಡ್ ಇನ್ನು 2 ವಾರದಲ್ಲಿ ದಕ್ಕಲಿತ್ತು. ಆಷ್ಟೊತ್ತಿಗೆ ಇಂತಹ ದುಸ್ಥಿತಿ ಬಂದಿದ್ದು ಬೇಸರದ ಸಂಗತಿ. ಅವರ ಕುಟುಂಬ ನಿರ್ವಹಣೆಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಬಾಲಕೃಷ್ಣ ಮಾತನಾಡಿ ಅಶೋಕ್ ಅವರು ಜಿಲ್ಲೆಯ ಪ್ರವಸೋದ್ಯಮ ಅಭಿವೃದ್ಧಿಯ ಬಗ್ಗೆ ತನ್ನದೇ ಆದ ನೀಲಿನಕ್ಷೆ ರೂಪಿಸಿದ್ದರು. ಹೇಮಾವತಿ ನದಿಮೂಲ ಒಕ್ಕೂಟಕ್ಕೆ ಭದ್ರ ಬುನಾದಿ ರೂಪಿಸಿದ್ದರು. ಮೂಡಿಗೆರೆ ತೋಟಗಾರಿಕಾ ವಿಶ್ವವಿದ್ಯಾಲಯ ಮಾಡಬೇಕು ಎಂದು ಸತತ ಪ್ರಯತ್ನ ನಡೆಸಿದ್ದರು. ಬೆಳೆಗಾರರ ಸಂಘಕ್ಕೆ ಸದಾ ಮಾರ್ಗದರ್ಶನ ನೀಡುತ್ತಿದ್ದರು. ಅವರ ಅಗಲಿಕೆ ಅತೀವ ದುಖಃ ನೀಡಿದೆ ಎಂದರು.

ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಅಶೋಕ್ ಅವರು ಮೂಡಿಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಅವರು ಸದಾ ಸಮಾಜಮುಖಿ ಚಿಂತನೆಯಲ್ಲಿ ತೊಡಗಿದ್ದರು. ಅವರ ಅಗಲಿಕೆ ಜಿಲ್ಲೆಯ ಸಾರ್ವಜನಿಕ ಕ್ಷೇತ್ರಕ್ಕೆ ಅಪಾರ ನಷ್ಟವನ್ನು ಉಂಟುಮಾಡಿದೆ ಎಂದರು.

ಮುಖಂಡರಾದ ದೀಪಕ್ ದೊಡ್ಡಯ್ಯ, ಎನ್.ಆರ್. ನಾಗರತ್ನ, ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್.ಜಯರಾಂಗೌಡ, ಕಸಾಪ ತಾಲೂಕು ಅಧ್ಯಕ್ಷ ಶಾಂತಕುಮಾರ್, ಗಣೇಶ್ ಮಗ್ಗಲಮಕ್ಕಿ, ಹಳೆಕೋಟೆ ರಮೇಶ್, ಜೇಸಿ ಸಂಸ್ಥೆಯ ರವಿ.ಕೆ.ಎನ್. ಪ್ರಸನ್ನ ಗೌಡಹಳ್ಳಿ, ರೋಟರಿ ಅಧ್ಯಕ್ಷ ಪ್ರದೀಪ್ ದುಂಡುಗ, ಲಯನ್ಸ್ ಸಂಸ್ಥೆಯ ಡಿ.ಕೆ. ಲಕ್ಷ್ಮಣಗೌಡ, ಬಿ.ಹೆಚ್. ಅಹಮದ್, ಅಯೂಬ್ ಚಕ್ಕಮಕ್ಕಿ, ಎಂ.ಬಿ. ಗೋಪಾಲಗೌಡ, ಜಯಕುಮಾರ್, ಡಾ. ಸಂಪತ್ ಬೆಟ್ಟಗೆರೆ, ಕೆಂಚಪ್ಪ, ಎಂ.ಎಸ್. ನಾಗರಾಜು, ಸುನಿಲ್ ಶೆಟ್ಟಿ, ವಸಂತ , ಎಂ.ಎಸ್.ಆನಂದ್, ಮುಂತಾದವರು ಮಾತನಾಡಿದರು. ಅಶೋಕ್ ಅವರ ಸೇವಾ ಮನೋಭಾವನೆ ನೆನೆದು ತೀವ್ರ ಸಂತಾಪ ಸೂಚಿಸಿದರು.

 

ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಉಪನ್ಯಾಸಕ ಎಂ.ಎಸ್.ಅಶೋಕ್ ಇನ್ನಿಲ್ಲ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ