October 5, 2024

ಪಟ್ಟಣದ ಎಂ.ಜಿ.ರಸ್ತೆ ಅಗಲೀಕರಣಕ್ಕೆ ನೀಡಿದ ಒಂದು ವಾರ ಗಡುವು ಅಂತ್ಯಗೊಂಡಿದ್ದು, ಶನಿವಾರ ಪಟ್ಟಣ ಪಂಚಾಯಿತಿ ಆಡಳಿತ ಎಂ.ಜಿ.ರಸ್ತೆಯ ಎರಡೂ ಬದಿ ಚರಂಡಿಯ ಮೇಲಿನ ನಿರ್ಮಾಣಗಳನ್ನು ಕಿತ್ತೊಗೆಯುವ ಮೂಲಕ ಅಗಲೀಕರಣಕ್ಕೆ ಪ್ರಾರಂಭದ ಚಾಲನೆ ನೀಡಿದೆ.

ಪಟ್ಟಣದ ಎಂ.ಜಿ.ರಸ್ತೆಯಲ್ಲಿ ನಿತ್ಯ ಟ್ರಾಫಿಕ್ ಜಾಮ್, ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿದ್ದು ಅನೇಕ ವರ್ಷದಿಂದಲೂ ರಸ್ತೆ ಅಗಲೀಕರಣ ಮಾಡಬೇಕೆಂಬ ಕೂಗು ಸಾರ್ವಜನಿಕರದ್ದಾಗಿತ್ತು. ಈ ಹಿನ್ನಲೆಯಲ್ಲಿ ಪ.ಪಂ. ಆಡಳಿತ ಎಂ.ಜಿ.ರಸ್ತೆ ಅಗಲೀಕರಣ ಮಾಡಲೇಬೆಂಬ ದೃಷ್ಟಿಯಿಂದ ಕಳೆದ ವಾರ ಕಟ್ಟಡ ಮಾಲೀಕರು, ಎಲ್ಲಾ ರಾಜಕೀಯ ಪಕ್ಷ ಹಾಗೂ ಸಂಘ ಸಂಸ್ಥೆಗಳ ಮುಖಂಡರ ಸಭೆ ನಡೆಸಿತು.

ಸಭೆಯಲ್ಲಿ ಸಾರ್ವಜನಿಕರು ರಸ್ತೆ ಅಗಲೀಕರಣ ಶೀಘ್ರವಾಗಿ ಮಾಡಬೇಕು. ರಸ್ತೆ ಒಂದು ಬದಿ ಕನಿಷ್ಟ 10 ಅಡಿಯಾದರೂ ವಿಸ್ತರಣೆಯಾಗಬೇಕೆಂದು ಒತ್ತಾಯಿಸಿದ್ದರು. ಆದರೆ ಕಟ್ಟಡ ಮಾಲೀಕರು ಒಂದು ವಾರ ಸಮಯ ಪಡೆದು ಎಷ್ಟು ಅಡಿ ಬಿಡಬೇಕೆಂದು ಚರ್ಚಿಸಿ ಹೇಳುತ್ತೇವೆಂದು ಸಭೆಗೆ ತಿಳಿಸಿದ್ದರು. ಅದಕ್ಕಾಗಿ ಪ.ಪಂ. ಒಂದು ವಾರ ಗಡುವು ನೀಡುವ ಜತೆಗೆ, ಒಂದು ವಾರದಲ್ಲಿ ಉತ್ತರ ಬಾರದಿದ್ದರೆ ರಸ್ತೆ ಒಂದು ಬದಿಯಲ್ಲಿ 10 ಅಡಿ ಅಗಲೀಕರಣಕ್ಕೆ ನಿರ್ಣಯ ಕೈಗೊಂಡು ಡಿಸಿಗೆ ಕಳಿಸಲಾಗುವುದು ಎಂದು ತಿಳಿಸಲಾಗಿತ್ತು.

ಶನಿವಾರ ಬೆಳಗ್ಗೆ ಜೆಸಿಬಿ ತಂದು ಸ್ವತಃ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಬಿ. ಧರ್ಮಪಾಲ್ ಹಾಗೂ ಸದಸ್ಯರು ಅವರು ಮುಂದೆ ನಿಂತು ರಸ್ತೆ ಬದಿಯ ಎರಡೂ ಕಡೆ ಚರಂಡಿ ತೆರವುಗೊಳಿಸುವ ಮೂಲಕ ರಸ್ತೆ ಅಗಲೀಕರಣಕ್ಕೆ ಪ್ರಾರಂಭಿಕ ಚಾಲನೆ ನೀಡಿದೆ.

ಎರಡೂವರೆ ಅಡಿ ಅಗಲ ಮಾಡಲು ಕಟ್ಟಡ ಮಾಲೀಕರ ಕೋರಿಕೆ

ಈ ನಡುವೆ 2.5 ಅಡಿ ರಸ್ತೆ ಅಗಲಿಕರಣಕ್ಕೆ ಮೂಡಿಗೆರೆ ಎಂ.ಜಿ. ರಸ್ತೆ  ಕಟ್ಟಡ ಮಾಲೀಕರು ಮತ್ತು ವರ್ತಕರು ಒಪ್ಪಿದ್ದು ಇದಕ್ಕೆ ಯಾವುದೆ ವಿರೋಧ ಇಲ್ಲ ಎಂದು ಸಂಘದ ಅದ್ಯಕ್ಷ ಎನ್.ಎನ್. ಪ್ರಸನ್ನ ಮತ್ತು ಸಂಘದ ಸದಸ್ಯರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಈ ಹಿಂದೆ ಎಂ.ಜಿ. ರಸ್ತೆ ಚರಂಡಿ ನಿರ್ಮಾಣಕ್ಕೆ ಎಂದು ಎರಡೂ ಕಡೆ ಎರಡೂವರೆ ರಸ್ತೆ ಅಗಲೀಕರಣ ಮಾಡಲಾಗಿತ್ತು. ಈಗ ಮತ್ತೆ ಎರಡೂವರೆ ಬಿಟ್ಟುಕೊಟ್ಟರೆ ಒಟ್ಟು ಎರಡೂ ಕಡೆ ತಲಾ ಐದು ಅಡಿ ರಸ್ತೆ ವಿಸ್ತರಣೆ ಆದಂತೆ ಆಗುತ್ತದೆ ಎಂದು ತಮ್ಮ ವಾದ ಮಂಡಿಸಿದ್ದಾರೆ.

ಅವರು ಹೆಳಿಕೆಯಲ್ಲಿ ತಿಳಿಸಿ ರಸ್ತೆ ಅಭಿವೃದ್ಧಿಗೆ ಎಲ್ಲ ಕಟ್ಟಡ ಮಾಲೀಕರು ಮತ್ತು ವರ್ತಕರು ಬದ್ಧರಾಗಿದ್ದೇವೆ. ಅಗಲೀಕರಣ ಮಾಡುವಾಗ ಸೂಕ್ತ ಮಾನದಂಡಗಳನ್ನು ಸರ್ಕಾರ ಪಾಲಿಸಬೇಕು.

ಸಭೆಯಲ್ಲಿ ಎಂ.ಜಿ.ರಸ್ತೆಯ ಕಟ್ಟಡ ಮಾಲೀಕರು ಮತ್ತು ವರ್ತಕರು ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಲು ಒಂದು ವಾರದ ಗಡುವು ನೀಡಲಾಗಿತ್ತು.
ಈ ಹಿನ್ನಲೆಯಲ್ಲಿ ಸಭೆ ಸೇರಿದ್ದ ಕಟ್ಟಡ ಮಾಲೀಕರು ಮತ್ತು ವರ್ತಕರು ರಸ್ತೆಯ ಎರಡೂ ಕಡೆ ತಲಾ ಎರಡೂವರೆ ಅಡಿ ರಸ್ತೆ ಅಗಲೀಕರಣ ಮಾಡಲು ಒಪ್ಪಿಗೆ ಸೂಚಿಸಲು ತೀರ್ಮಾನಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ