October 5, 2024

ರಾಜ್ಯ ವಿಧಾನ ಪರಿಷತ್ತಿನ ಉಪಸಭಾಪತಿ ಸ್ಥಾನಕ್ಕೆ ಬಿ.ಜೆ.ಪಿ. ಅಭ್ಯರ್ಥಿಯಾಗಿ ಎಂ.ಕೆ.ಪ್ರಾಣೇಶ್ ಅವರು ಇಂದು ನಾಮಪತ್ರ ಸಲ್ಲಿಸಿದರು.

ನಾಳೆ ಡಿಸೆಂಬರ್ 23ರಂದು ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೇಸ್ ಪಕ್ಷದಿಂದ ಅರವಿಂದಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿ.ಜೆ.ಪಿ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಾಸಕ ಸಿ.ಟಿ. ರವಿ, ಸಚಿವರಾದ ಆರ್. ಅಶೋಕ್, ಗೋವಿಂದ ಕಾರಜೋಳ ಮುಂತಾದವರು ಇದ್ದರು.

ನಾಮಪತ್ರ ಸಲ್ಲಿಕೆಯ ನಂತರ ಎಂ.ಕೆ. ಪ್ರಾಣೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯರನ್ನು ಭೇಟಿ ಮಾಡಿದರು. ಮುಖ್ಯಮಂತ್ರಿ ಯವರು ಪ್ರಾಣೇಶ್ ಅವರಿಗೆ ಶುಭ ಹಾರೈಸಿದರು.

ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ ವಿಧಾನ ಪರಿಷತ್ತಿಗೆ ಎರಡನೇ ಅವಧಿಗೆ ಪ್ರವೇಶಿಸಿರುವ ಎಂ.ಕೆ. ಪ್ರಾಣೇಶ್ ಅವರು ಉಪಸಭಾಪತಿಯಾಗಿ ಸತತ ಎರಡನೇ ಅವಧಿಗೆ ಆಯ್ಕೆಯಾಗುವುದು ಖಚಿತವಾಗಿದೆ.

75 ಸದಸ್ಯ ಬಲದ ರಾಜ್ಯ ವಿಧಾನಪರಿಷತ್ತಿನಲ್ಲಿ ಗೆಲ್ಲಲು 38 ಸದಸ್ಯರ ಬೆಂಬಲ ಅತ್ಯಗತ್ಯವಾಗಿದೆ. ಹಾಲಿ ಪರಿಷತ್ತಿನಲ್ಲಿ ಬಿ.ಜೆ.ಪಿ. 40 ಸ್ಥಾನಗಳನ್ನು ಹೊಂದಿದೆ, ಕಾಂಗ್ರೇಸ್ 26, ಜೆ.ಡಿ.ಎಸ್. 8, ಪಕ್ಷೇತರ 1 ಸದಸ್ಯರಿದ್ದಾರೆ.

ಒಂದು ವೇಳೆ ಜೆ.ಡಿ.ಎಸ್. ಮತ್ತು ಪಕ್ಷೇತರ ಸದಸ್ಯರು ಕಾಂಗ್ರೇಸ್ ಗೆ ಬೆಂಬಲ ನೀಡಿದರೂ ಸಹ ಬಿ.ಜೆ.ಪಿ.ಗಿಂತ ಹೆಚ್ಚು ಸ್ಥಾನ ಆಗುವುದಿಲ್ಲ. ಬಿ.ಜೆ.ಪಿ. ಗೆ ಸರಳ ಬಹುಮತಕ್ಕಿಂತ 2 ಸ್ಥಾನಗಳು ಹೆಚ್ಚೇ ಇವೆ.

ಆದ್ದರಿಂದ ಚುನಾವಣೆ ಕೇವಲ ಔಪಚಾರಿಕವಾಗಿ ನಡೆಯಲಿದ್ದು, ಎಂ.ಕೆ. ಪ್ರಾಣೇಶ್ ಅವರು ನಾಳೆ ವಿಧಾನಪರಿಷತ್ ಉಪಸಭಾಪತಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ನಿನ್ನೆ ಬಿ.ಜೆ.ಪಿ. ಬಸವರಾಜ ಹೊರಟ್ಟಿಯವರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ