October 5, 2024

ಮೂಡಿಗೆರೆ ಸಮೀಪದ ಹಳಸೆ ಗ್ರಾಮದ ಹೆಚ್.ಬಿ. ಶಿವಣ್ಣ ಅವರ ಮನೆಯೆದುರಿನ ತಡೆಗೋಡೆ (ರಿವಿಟ್ ಮೆಂಟ್) ಒಳಗೆ ಅಡಗಿದ್ದ ನಾಲ್ಕು ನಾಗರಹಾವುಗಳನ್ನು ಸೆರೆಹಿಡಿಯಲಾಗಿದೆ.

ಇಂದು ಬೆಳಿಗ್ಗೆ ಒಂದು ನಾಗರ ಮನೆಯ ಅಂಗಳದಲ್ಲಿ ಕಂಡುಬಂದಾಗ ಹಾವನ್ನು ಹಿಡಿಯಲು ಬಣಕಲ್ ನ ಸಮಾಜಸೇವಕ ಸ್ನೇಕ್ ಆರೀಫ್ ಅವರನ್ನು ಕರೆಸಿದ್ದಾರೆ. ಒಂದು ಹಾವು ಹಿಡಿದು ಕೊಂಡೊಯ್ದ ಮೇಲೆ ಮತ್ತೆ ಅದೇ ಸ್ಥಳದಲ್ಲಿ ತಡೆಗೋಡೆಯೊಳಗಿಂದ ಮತ್ತೊಂದು ಹಾವು ಇಣುಕಿದೆ.

ಆಗ ಮತ್ತೆ ಆರೀಪ್ ಅವರಿಗೆ ಕರೆಮಾಡಿ ಕರೆಸಿದ್ದಾರೆ. ಹಾವನ್ನು ಹಿಡಿಯಲು ತಡೆಗೋಡೆ ಒಡೆದಾಗ ಒಂದೇ ಕಡೆ ಮೂರು ನಾಗರಗಳು ಕಡುಬಂದಿವೆ. ಹಾವುಗಳನ್ನು ಕಂಡು ಮನೆಮಂದಿ ಹೌಹಾರಿದ್ದಾರೆ. ಮೂರೂ ಹಾವುಗಳನ್ನು ಆರೀಫ್ ಚಾಕಚಕ್ಯತೆಯಿಂದ ಸೆರೆಹಿಡಿದಿದ್ದಾರೆ.

ಸುಮಾರು 6 ಅಡಿ ಉದ್ದವಿದ್ದ ಒಂದೇ ಗಾತ್ರದ ಒಟ್ಟು ನಾಲ್ಕು ಗೋದಿ ನಾಗರಹಾವುಗಳನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.

ಈ ರೀತಿ ಒಂದೇ ಸ್ಥಳದಲ್ಲಿ ಇಷ್ಟೊಂದು ನಾಗರಹಾವುಗಳು ಕಂಡುಬಂದದ್ದು ಬಹು ಅಪರೂಪದ ಪ್ರಕರಣವಾಗಿದೆ.

ವಿಷಕಾರಿಯಾದ ನಾಲ್ಕು ನಾಗರಹಾವುಗಳನ್ನು ಸುರಕ್ಷಿತವಾಗಿ ಹಿಡಿದ ಆರೀಫ್ ಅವರಿಗೆ ಹಳಸೆ ಶಿವಣ್ಣ ಕುಟುಂಬದವರು ಧನ್ಯವಾದ ಸಲ್ಲಿಸಿದ್ದಾರೆ.

ಹಾವುಗಳನ್ನು ಸುರಕ್ಷಿತವಾಗಿ ಚಾರ್ಮಾಡಿ ಅರಣ್ಯಕ್ಕೆ ಬಿಡಲಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ