ಡಿಸೆಂಬರ್ 31ರ ರಾತ್ರಿ ಹೊಸವರ್ಷ ಆಚರಣೆಯ ಹೆಸರಿನಲ್ಲಿ ಅಶ್ಲೀಲ ನೃತ್ಯ, ಮಾದಕ ದ್ರವ್ಯಗಳ ಪಾನ ಪಾರ್ಟಿಗಳನ್ನು ಹಲವಾರು ಹೋಟೆಲ್, ಕ್ಲಬ್, ರೆಸಾರ್ಟ್, ಹೋಂಸ್ಟೇಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಯೋಜನೆ ಮಾಡಲಾಗುತ್ತದೆ.
ಹೊಸವರ್ಷದ ಹೆಸರಿನಲ್ಲಿ ಸ್ವೇಚ್ಛಾಚಾರದ ನಡವಳಿಕೆಗಳು ಡಿಸೆಂಬರ್ 31ರಂದು ಮೇರೆಮೀರುತ್ತದೆ. ಇದನ್ನು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ, ಇಂತಹ ಕಾರ್ಯಕ್ರಮಗಳಿಗೆ ಪೊಲೀಸರು ಅವಕಾಶ ಮಾಡಿಕೊಡಬಾರದು ಎಂದು ಮೂಡಿಗೆರೆ ವಿ.ಹೆಚ್.ಪಿ., ಬಜರಂಗದಳ ವತಿಯಿಂದ ಪೊಲೀಸ್ ವೃತ್ತನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.
ಹೊಸವರ್ಷದ ಹೆಸರಿನಲ್ಲಿ ನಡೆಯುವ ಅತಿರೇಕದ ನಡಾವಳಿಕೆಗಳು ಪಾಶ್ಚಾತ್ಯ ಸಂಸ್ಕøತಿಯಿಂದ ಕೂಡಿವೆ, ಈಗಾಗಲೇ ಲವ್ ಜಿಹಾದ್ ಹೆಸರಿನಲ್ಲಿ ಮುಗ್ದ ಹೆಣ್ಣುಮಕ್ಕಳನ್ನು ಮೋಸಗೊಳಿಸಿ ಅವರನ್ನು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲು ಪ್ರಚೋದನೆ ನೀಡಲಾಗುತ್ತಿದೆ. ಪಾರ್ಟಿಗಳಲ್ಲಿ ಮಾದಕ ದ್ಯವ್ಯಗಳ ಜಾಲಕ್ಕೆ ಯುವಜನರು, ವಿದ್ಯಾರ್ಥಿಗಳನ್ನು ಬೀಳಿಸಲಾಗುತ್ತದೆ.
ಆದ್ದರಿಂದ ಯಾವುದೇ ಹೋಟೆಲ್, ಕ್ಲಬ್ಗಳಲ್ಲಿ ತಡರಾತ್ರಿವರೆಗೆ ಪಾರ್ಟಿ, ಅಶ್ಲೀಲ ನೃತ್ಯ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು, ಎಲ್ಲಾ ಹೋಟೆಲ್, ಬಾರ್ ಮತ್ತು ಕ್ಲಬ್ಗಳನ್ನು ನಿಗದಿತ ಅವಧಿಯ ಒಳಗೆ ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಮೂಡಿಗೆರೆ ಬಜರಂಗದಳ ಸಂಚಾಲಕ ಅಜಿತ್ ಮತ್ತು ಪದಾಧಿಕಾರಿಗಳು ಪೊಲೀಸ್ ಇಲಾಖೆಗೆ ಮನವಿಪತ್ರ ಸಲ್ಲಿಸಿದ್ದಾರೆ.