October 5, 2024

ಈ ಬಾರಿಯ ಫಿಪಾ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ತಂಡವನ್ನು ಪೆನಾಲ್ಟಿ ಶೂಟೌಟ್ ನಲ್ಲಿ ಮಣಿಸಿದ ಆಪ್ರಿಕನ್ ರಾಷ್ಟ್ರ ಮೊರಾಕ್ಕೋ ಅಚ್ಚರಿಯ ಫಲಿತಾಂಶ ನೀಡಿದೆ.

ಕತಾರ್‍ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ನಿನ್ನೆ ರಾತ್ರಿ ನಡೆದ 16 ಘಟ್ಟದ ಪಂದ್ಯದಲ್ಲಿ 120 ನಿಮಿಷಗಳ ರೋಚಕ ಹಣಾಹಣಿಯಲ್ಲಿ ಇತ್ತಂಡಗಳು ಯಾವುದೇ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಫಲಿತಾಂಶ ನಿರ್ಧಾರಕ್ಕೆ ಪೆನಾಲ್ಟಿ ಶೂಟೌಟ್ ಮೊರೆಹೋಗಬೇಕಾಯಿತು.

ಪೆನಾಲ್ಟಿ ಶೂಟೌಟ್ ನಲ್ಲಿ ಮೊರಾಕ್ಕೋ ಗೋಲ್ ಕೀಪರ್ ಯಾಸಿನ್ ಬೌನೌ ಸ್ಪೇನ್ ಹಾದಿಗೆ ಅಡ್ಡಗೋಡೆಯಾಗಿ ನಿಂತರು. ಸ್ಪೇನ್ ಮೂರೂ ಪೆನಾಲ್ಟಿ ಶೂಟ್ ಪ್ರಯತ್ನಗಳನ್ನು ತಡೆದು ಮೊರಾಕ್ಕೋಗೆ ಐತಿಹಾಸಿಕ ಜಯ ತಂದುಕೊಟ್ಟರು.

ಇದೇ ಮೊದಲ ಬಾರಿಗೆ ಮೊರಾಕ್ಕೋ ಫಿಪಾ ವಿಶ್ವಕಪ್ ಪಂದ್ಯಾವಳಿಯಲ್ಲಿ 8 ಘಟ್ಟಕ್ಕೆ ಲಗ್ಗೆ ಇಟ್ಟಿದೆ. 92 ವರ್ಷಗಳ ಪುಟ್ಬಾಲ್ ವಿಶ್ವಕಪ್ ಇತಿಹಾಸದಲ್ಲಿ ಎಂಟರ ಘಟ್ಟಕ್ಕೆ ತಲುಪಿದ 4 ನೇ ಆಪ್ರಿಕನ್ ತಂಡವಾಗಿದೆ.

ಮೊರಾಕ್ಕೋ ಈ ಪಂದ್ಯಾವಳಿಯಲ್ಲಿ ಸ್ಪರ್ಧೆಯಲ್ಲಿ ಉಳಿದುಕೊಂಡಿರುವ ಏಕೈಕ ಆಪ್ರಿಕನ್ ತಂಡವಾಗಿದೆ.

ನಿನ್ನೆ ತಡರಾತ್ರಿ ನಡೆದ ಮತ್ತೊಂದು ಪ್ರಿಕ್ವಾರ್ಟರ್ ಪಂದ್ಯದಲ್ಲಿ ಪೋರ್ಚುಗಲ್ ತಂಡ ಸ್ವಿಡ್ಜರ್ಲೆಂಡ್ ತಂಡವನ್ನು 6-1 ಗೋಲುಗಳ ಅಂತರದಿಂದ ಸುಲಭವಾಗಿ ಮಣಿಸಿತು.

ಇದೀಗ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಹಣಾಹಣಿಗೆ 8 ತಂಡಗಳು ಸಜ್ಜಾಗಿವೆ

ಡಿಸೆಂಬರ್ 9 ರಂದು : ಕ್ರೊವೇಷಿಯಾ-ಬ್ರಿಜಿಲ್ ಮತ್ತು ನೆದರ್ಲೆಂಡ್-ಅರ್ಜೆಂಟೈನಾ

ಡಿಸೆಂಬರ್ 10 ರಂದು : ಮೊರಾಕ್ಕೋ-ಪೋರ್ಚುಗಲ್ ಮತ್ತು ಇಂಗ್ಲೇಂಡ್-ಫ್ರಾನ್ಸ್ ತಂಡಗಳು ಸೆಣಸಲಿವೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ