October 5, 2024

ಪಾಕಿಸ್ಥಾನದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೇಡ್ ತಂಡ ಟೆಸ್ಟ್ ನ ಮೊದಲ ದಿನವೇ 506 ರನ್ ಗಳಿಸಿ ವಿಶ್ವದಾಖಲೆ ನಿರ್ಮಿಸಿದೆ. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವಿನೂತನ ದಾಖಲೆಯಾಗಿದೆ.

ಇದೇ ಮೊದಲ ಬಾರಿಗೆ ತಂಡವೊಂದು ಟೆಸ್ಟ್ ಕ್ರಿಕೆಟ್‍ನ ಮೊದಲ ದಿನವೇ 500 ರನ್‍ಗಳ ಗಡಿ ದಾಟಿದೆ. ಈ ಮೂಲಕ ಇಂಗ್ಲೇಡ್ 112 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ.
1910ರಲ್ಲಿ ಆಸ್ಟ್ರೇಲಿಯಾ ತಂಡವು ಸಿಡ್ನಿಯಲ್ಲಿ ದಕ್ಷಿಣ ಆಪ್ರಿಕಾ ವಿರುದ್ಧ ಗಳಿಸಿದ 494 ರನ್‍ಗಳೇ ಇದುವರೆಗೂ ಟೆಸ್ಟ್ ಪಂದ್ಯದ ಮೊದಲ ದಿನ ದಾಖಲಾಗಿದ್ದ ಅತ್ಯಧಿಕ ರನ್ ಆಗಿತ್ತು.

ಪಾಕಿಸ್ತಾನದ ರಾವಲ್ಪಂಡಿಯಲ್ಲಿ ನಡೆಯುತ್ತಿರುವ ಈ ಟೆಸ್ಟ್ ನಲ್ಲಿ ಇಂಗ್ಲೇಡ್ ತಂಡದ ಮೊದಲ ದಿನದ ಅಂತ್ಯಕ್ಕೆ 506 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು. ತಂಡದ ಆರಂಭದ ನಾಲ್ವರು ಬ್ಯಾಟ್ಸ್‌ಮನ್ ಗಳು ಶತಕದ ಸಂಭ್ರಮ ಆಚರಿಸಿದರು.

ಜ್ಯಾಕ್ ಕ್ರಾಲಿ 122 ರನ್(111ಎಸೆತ), ಬೆನ್ ಡಕೆಟ್ 107 ರನ್(110 ಎಸೆತ), ಒಲಿ ಪೋಪ್ 108 ರನ್(104 ಎಸೆತ), ಹ್ಯಾರಿ ಬ್ರೂಕ್ ಅಜೇಯ 101 ರನ್ (81 ಎಸೆತ) ಗಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವೊಂದರ ಮೊದಲ ದಿನವೇ ನಾಲ್ಕು ಶತಕಗಳು ದಾಖಲಾಗಿವೆ.

ಇವರೆಲ್ಲರೂ ಇಂಗ್ಲೇಡ್‍ನ ಯುವ ಆಟಗಾರರಾಗಿದ್ದು ಏಕದಿನ ಮಾದರಿಯಲ್ಲಿ ಬ್ಯಾಟ್ ಬೀಸಿ ದೊಡ್ಡ ಮೊತ್ತ ಕಲೆಹಾಕಿದ್ದಾರೆ. ಪಾಕ್ ಬೌಲರ್‌ ಗಳನ್ನು ಇಂಗ್ಲೇಡ್ ಆಟಗಾರರು ದಿನವಿಡೀ ಕಾಡಿ ಬೆವರಿಳಿಸಿದ್ದಾರೆ.

ಟೆಸ್ಟ್ ಪಂದ್ಯವೊಂದರಲ್ಲಿ ಒಂದೇ ದಿನ ಅತಿಹೆಚ್ಚು ರನ್ ಗಳಿಸಿದ ದಾಖಲೆಯೂ ಇಂಗ್ಲೇಂಡ್ ಹೆಸರಿನಲ್ಲಿಯೇ ಇದೆ. 1936ರಲ್ಲಿ ಮ್ಯಾಂಚೆಸ್ಟರ್‌ ನಲ್ಲಿ ಭಾರತ ತಂಡದ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಎರಡನೇ ದಿನ ಇಂಗ್ಲೇಡ್ 588 ರನ್ ಕಲೆಹಾಕಿತ್ತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ