October 5, 2024

ಇವತ್ತು ಆಲ್ದೂರು ಪಟ್ಟಣದಲ್ಲಿ ಎಲ್ಲಿಲ್ಲದ ಸಂಭ್ರಮ. ಪಟ್ಟಣದಲ್ಲಿ ಸಾರ್ವಜನಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅತ್ತ ಶ್ರೀಹರಿಕೋಟದಲ್ಲಿ ಪಿಎಸ್‍ಎಲ್‍ವಿ ಮೂಲಕ ಉಪಗ್ರಹಗಳು ಅಂತರಿಕ್ಷದ ಕಡೆ ಮುಖಮಾಡಿದ್ದರೆ. ಇತ್ತ ಆಲ್ದೂರಿನ ಜನರು ಆ ಒಂದು ಸುದ್ದಿಗಾಗಿ ತವಕದಿಂದ ಕಾಯುತ್ತಿದರು. ‘ಆನಂದ’ ಹೆಸರಿನ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಗಿ ತನ್ನ ಪಥ ಸೇರಿದೆ ಎಂದು ಇಸ್ರೋ ಘೋಷಣೆ ಮಾಡಿದ ತಕ್ಷಣ ಇತ್ತ ಆಲ್ದೂರು ಜನ ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಈ ಸಂತಸಕ್ಕೆ ಕಾರಣ ತಮ್ಮೂರಿನ ಯುವಕನೊಬ್ಬನ  ಸಾಧನೆ.

ಹೌದು ಇವತ್ತು ಭಾರತದ ಬಾಹ್ಯಕಾಶ ಕ್ಷೇತ್ರದಲ್ಲಿ ಒಂದು ಮಹತ್ವದ ದಿನವಾಗಿತ್ತು. ಇಸ್ರೋ ತನ್ನ ಮಿಷನ್ ಪಿಎಸ್‍ಎಲ್‍ವಿ ಸರಣಿಯಲ್ಲಿ 8 ಉಪಗ್ರಹಗಳನ್ನು ನಭಕ್ಕೆ ಯಶಸ್ವಿಯಾಗಿ ಸೇರಿಸಿತ್ತು. ಈ ಉಪಗ್ರಹಗಳಲ್ಲಿ ಒಂದರ ಹೆಸರು “ಆನಂದ”. ಆನಂದ ಉಪಗ್ರಹ ನಮ್ಮ ರಾಜ್ಯಕ್ಕೆ ವಿಶೇಷವಾಗಿ ನಮ್ಮ ಚಿಕ್ಕಮಗಳೂರು ಜಿಲ್ಲೆಗೆ ಅತ್ಯಂತ ಹೆಮ್ಮೆಯದಾಗಿದೆ. ಏಕೆಂದರೆ ಅದರ ಪ್ರವರ್ತಕ ನಮ್ಮ ಜಿಲ್ಲೆಯ ಆಲ್ದೂರಿನ ಆವೇಜ್ ಅಹಮದ್.

ಇತ್ತೀಚೆಗೆ ಉಪಗ್ರಹ ಉಡಾವಣೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸಂವಾದ ನಡೆಸಿ ಗಮನ ಸೆಳೆದಿದ್ದ ಆವೇಜ್ ಅಹಮದ್ ತಾನೇ ಸ್ಥಾಪಿಸಿದ ಪಿಕ್ಸಲ್(Pixxel) ಕಂಪನಿಯ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಖಾಸಗಿ ಉಪಗ್ರಹ ಉಡಾವಣೆ ಮಾಡಿದ ಹೆಗ್ಗಳಿಕೆ ಪಡೆದಿದ್ದಾರೆ. ಈಗಾಗಲೇ ಎರಡು ಪ್ರಯೋಗಿಕ ಕಿರು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಸೇರಿಸಿರುವ ಪಿಕ್ಸಲ್ ಕಂಪನಿ ತನ್ನ ಮೂರನೇ ಉಪಗ್ರಹವನ್ನು ಇಂದು ಯಶಸ್ವಿಯಾಗಿ ಅಂತರಿಕ್ಷದಲ್ಲಿ ನಿಗದಿತ ಪಥಕ್ಕೆ ಸೇರಿಸಿದೆ. ಏಪ್ರಿಲ್ 2022ರಲ್ಲಿ ಪಿಕ್ಸಲ್ ಕಂಪನಿ ‘ಶಕುಂತಲ’ ಹೆಸರಿನ ಕಿರುಉಪಗ್ರಹವನ್ನು ಉಡಾವಣೆ ಮಾಡಿತ್ತು.

ಯಾರಿವರು ಆವೇಜ್ : ಆಲ್ದೂರು ಪಟ್ಟಣದಲ್ಲಿ ಮೆಡಿಕಲ್ ಶಾಪ್ ಮಾಲೀಕರಾಗಿರುವ ನದೀಮ್ ಅಹಮದ್ ಅವರ ಪುತ್ರ ಅವೇಜ್ ಇದೀಗ ದೇಶದ ಗಮನ ಸೆಳೆದಿದ್ದಾರೆ. ತನ್ನ ಮಗನ ಆಸಕ್ತಿಯನ್ನು ಗಮನಿಸಿ ಅವನಿಗೆ ಬಯಸಿದ ರೀತಿಯಲ್ಲಿ ಉನ್ನತ ಶಿಕ್ಷಣ ಕೊಡಿಸಿದ ಪೋಷಕರ ಶ್ರಮಕ್ಕೆ ಮಗ ತಕ್ಕ ಸಾಧನೆ ಮಾಡಿ ಸೈ ಎನಿಸಿಕೊಂಡಿದ್ದಾನೆ. ತನ್ನ ಪ್ರಾಥಮಿಕ ಶಿಕ್ಷಣವನ್ನು ಆಲ್ದೂರಿನಲ್ಲಿಯೇ ಪಡೆದ ಅವೇಜ್ ಮುಂದೆ ಬಿರ್ಲಾ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

24ರ ಹರೆಯದ ಅವೇಜ್ ದೇಶದ ವೈಜ್ಞಾನಿಕ ಮತ್ತು ಸಂವಹನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ಆಗಬಲ್ಲ ಖಾಸಗಿ ಉಪಗ್ರಹಗಳನ್ನು ಅಭಿವೃದ್ಧಿಗೊಳಿಸಿ ಅಂತರಿಕ್ಷಕ್ಕೆ ಹಾರಿಬಿಡುವ ಮಹತ್ವದ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2023ರಲ್ಲಿ 6 ಮತ್ತು 2024ರಲ್ಲಿ 12 ಕಮರ್ಷಿಯಲ್ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಸೇರಿಸುವ ತಯಾರಿಯಲ್ಲಿ ಪಿಕ್ಸಲ್ ಕಂಪನಿ ತೊಡಗಿಸಿಕೊಂಡಿದೆ. ಈ ಉಪಗ್ರಹಗಳು ಭಾರತದಲ್ಲಿ ಸಂವಹನ ಕ್ಷೇತ್ರದಲ್ಲಿ, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವ ಬೆಳವಣಿಗೆಗೆ ಕಾರಣವಾಗಲಿವೆ ಎನ್ನಲಾಗುತ್ತಿದೆ. ಆವೇಜ್ ಅಹಮದ್ ಸಾಧನೆಗೆ ಭಾರತ ಸರ್ಕಾರ ಮತ್ತು ಇಸ್ರೋ ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದೆ.

ಇತ್ತೀಚೆಗೆ ಆಲ್ದೂರಿನ ಅವರ ನಿವಾಸದಲ್ಲಿ ಆಲ್ದೂರು ನಾಗರೀಕರ ಪರವಾಗಿ ಆವೇಜ್ ಅಹವರನ್ನು ಸನ್ಮಾನಿಸಲಾಗಿತ್ತು.
ಇವತ್ತು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯವರು ಆಲ್ದೂರಿನಲ್ಲಿ ಅವೇಜ್ ಪೋಷಕರನ್ನು ಗೌರವಿಸಿದ್ದಾರೆ.

ನಿರಂತರ ಸುದ್ದಿಗಳಿಗಾಗಿ  ದರ್ಪಣ ವಾಟ್ಸಾಪ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ

https://chat.whatsapp.com/EPix3ar9qizEtDUS0amt5B

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ