October 5, 2024

ಚಿಕ್ಕಮಗಳೂರು ಜಿಲ್ಲೆಯ ಗಿರಿಶ್ರೇಣಿಯಲ್ಲಿರುವ ದತ್ತಪೀಠದ ಮುಕ್ತಿಗಾಗಿ ಹಿಂದೂಪರ ಸಂಘಟನೆಗಳು ನಡೆಸುತ್ತಿದ್ದ ಹೋರಾಟ ಮತ್ತು ಅವರ ಪ್ರಮುಖ ಬೇಡಿಕೆಗೆ ಈಗ ಒಂದು ಹಂತದ ಜಯ ಸಿಕ್ಕಿದೆ. ವಿವಾದಿತ ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಇನಾಂ ದತ್ತಪೀಠಕ್ಕೆ ವ್ಯವಸ್ಥಾಪನಾ ಸಮಿತಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವ್ಯವಸ್ಥಾಪನಾ ಸಮಿತಿ ರಚನೆ ಮಾಡುವಂತೆ ಹಲವು ವರ್ಷಗಳ ಹೋರಾಟ ನಡೆಯುತ್ತಿದ್ದು, ಕೊನೆಗೂ ಸರ್ಕಾರ ಎಂಟು ಮಂದಿಯ ಸದಸ್ಯರ ಆಡಳಿತ ಮಂಡಳಿ ರಚನೆ ಮಾಡಿದೆ. ವ್ಯವಸ್ಥಾಪನಾ ಸಮಿತಿಯಲ್ಲಿ ಒಬ್ಬರು ಮುಸ್ಲಿಂ ಸದಸ್ಯರು ಇದ್ದು, ಮೂರು ವರ್ಷಗಳ ಅವಧಿಗೆ ಸಮಿತಿಯನ್ನು ರಚಿಸಲಾಗಿದೆ.
ಸತೀಶ್, ಸಿ.ಜಿ. ಲೀಲಾ, ಶೀಲಾ, ಸುಮಂತ್ ನೆಮ್ಮಾರು, ಜಿ.ಎಚ್.ಹೇಮಂತ್ಕುಮಾರ್, ಕೆ.ಎಸ್.ಗುರುವೇಶ್, ಎಸ್.ಎಂ.ಬಾಷಾ, ಸಿ.ಎನ್.ಚೇತನ ಸಮಿತಿಯ ಸದಸ್ಯರಾಗಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಪದಾಧಿಕಾರಿಯಾಗಿರುವುದು ಕಂಡು ಬಂದರೆ ಅಂತಹವರ ಸದಸ್ಯತ್ವವು ರದ್ದಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಆಡಳಿತ ಮಂಡಳಿಯ ಕಾರ್ಯದರ್ಶಿ ಎಂದು ನೇಮಕ ಮಾಡಲಾಗಿದೆ. ಸದಸ್ಯರು ಮೊದಲ ಸಭೆಯಲ್ಲಿ ಒಬ್ಬರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು.
ಹೈಕೋರ್ಚ್ ಆದೇಶದಂತೆ ಆಡಳಿತ ಮಂಡಳಿ ನೇಮಕ ಮಾಡಲಾಗಿದೆ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ವ್ಯವಸ್ಥಾಪನಾ ಸಮಿತಿಯ ರಚನೆ ಮಾಡುವ ಸಂಬಂಧ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು.
ಒಟ್ಟು 42 ಅರ್ಜಿಗಳು ಸ್ವೀಕೃತವಾಗಿದ್ದು, ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಅವುಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ನ.2ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ನ ಸಭೆಯಲ್ಲಿ ಅರ್ಜಿದಾರರ ಅರ್ಹತೆ, ಪೂರ್ವಪರ ವಿವರ ಸೇರಿದಂತ ಇತ್ಯಾದಿ ಮಾಹಿತಿಗಳ ಕುರಿತು ಸಮಾಲೋಚನೆ ನಡೆಸಲಾಗಿತ್ತು.
ಸಚಿವ ಸಂಪುಟದ ಉಪ ಸಮಿತಿ ಮಾಡಿರುವ ಶಿಫಾರಸ್ಸಿನ ಪ್ರಕಾರ ವ್ಯವಸ್ಥಾಪನಾ ಸಮಿತಿ ದತ್ತಪೀಠದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅರ್ಚಕರು ಹಾಗೂ ಮುಜಾವರ್ ಅವರನ್ನು ನೇಮಕ ಮಾಡಬೇಕು, ದತ್ತಪೀಠದಲ್ಲಿ ನಿತ್ಯ ಪೂಜೆ ಸಲ್ಲಿಸಲು ಆಗಮ ಶಾಸ್ತ್ರದಲ್ಲಿ ಉತ್ತೀರ್ಣರಾದ ಅರ್ಹ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು.
ದತ್ತಪೀಠ ವಿವಾದವು ಕಳೆದ ಎರಡೂವರೆ ದಶಕಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ. ರಾಜ್ಯದಲ್ಲಿ ರಾಜಕೀಯ ಬದಲಾವಣೆಗೆ ಇದು ಪ್ರಮುಖ ಕಾರಣವಾಗಿತ್ತು. ದತ್ತಜಯಂತಿ, ಅನಸೂಯ ಜಯಂತಿ, ದತ್ತಮಾಲಾ ಅಭಿಯಾನ ಮುಂತಾದ ಹೆಸರಿನಲ್ಲಿ ಹಿಂದೂಪರ ಸಂಘಟನೆಗಳು ಮತ್ತು ಬಿ.ಜೆ.ಪಿ ಇದನ್ನೊಂದು ದೊಡ್ಡ ಹೋರಾಟವಾಗಿ ರೂಪಸಿದ್ದವು. ಹಲವು ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರದ ಮೇಲೆ ಸತತ ಒತ್ತಡ ಹಾಕಿದ್ದವು. ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರವು ಅಧಿಕಾರದಲ್ಲಿದ್ದರೂ ಹೋರಾಟಕ್ಕೆ ನ್ಯಾಯ ದೊರಕಿಲ್ಲ ಎಂದು ಸಂಘಟನೆಗಳು ಸರ್ಕಾರದ ಮೇಲೆ ಮುನಿಸು ವ್ಯಕ್ತಪಡಿಸಿದ್ದವು. ಈಗ ಸರ್ಕಾರ ಕೈಗೊಂಡಿರುವ ತೀರ್ಮಾನದಿಂದ ಸುದೀರ್ಘ ಅವಧಿಯ ವಿವಾದಕ್ಕೆ ಮುಂದಾದರೂ ತಾರ್ಕಿಕ ಅಂತ್ಯ ಸಿಗಬಹುದೇ ? ಎಂಬ ಆಶಾಭಾವನೆ ಜಿಲ್ಲೆ ಮತ್ತು ರಾಜ್ಯದ ಜನರದ್ದಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ