October 5, 2024

• ಇಂದು ವಿಶ್ವ ಮಧುಮೇಹಿಗಳ ದಿನವಾಗಿದೆ. ಮಧುಮೇಹ, ಡಯಾಬಿಟಿಸ್, ಸಕ್ಕರೆ ಖಾಯಿಲೆ ಅಥವಾ ಶುಗರ್ ಎಂದು ಆಡುಭಾಷೆಯಲ್ಲಿ ಕರೆಯಲ್ಪಡುತ್ತದೆ.  ಇತ್ತೀಚಿನ ದಿನಗಳಲ್ಲಿ ಇದು ಜಗತ್ತಿನಲ್ಲಿ ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆ.

ಭಾರತ ದೇಶ ಮಧುಮೇಹಿಗಳ ರಾಜಧಾನಿಯಾಗುತ್ತಿದೆ. ಬದಲಾದ ಜೀವನ ಶೈಲಿ, ಆಹಾರ ಕ್ರಮ, ಮಾನಸಿಕ ಒತ್ತಡ ಮಧುಮೇಹ ಹೆಚ್ಚಾಗಲು ಕಾರಣವಾಗಿದೆ.

• ಮಧುಮೇಹ ಇತರೆ ಅನೇಕ ಸಮಸ್ಯೆಗಳಿಗೆ ರಾಜಮಾರ್ಗವಾಗಿದೆ. ಕಿಡ್ನಿ ವೈಪಲ್ಯ, ಲಿವರ್ ಸಮಸ್ಯೆ, ಹೃದಯಸಂಬಂಧಿ ಖಾಯಿಲೆ, ಹೃದಯಾಘಾತ, ಪಾಶ್ರ್ವವಾಯು, ದೃಷ್ಟಿದೋಷ ಸಮಸ್ಯೆಗೆ ಇದು ಕಾರಣವಾಗುತ್ತದೆ.

• ಮಧುಮೇಹ ಅನುವಂಶಿಕ ಕಾಯಿಲೆಯಲ್ಲ. ಕೆಲವೊಮ್ಮೆ ಇದು ಚಿಕ್ಕ ಮಕ್ಕಳಲ್ಲಿಯೂ ಕಾಣಿಸಿಕೊಳ್ಳುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಕೆಲವು ಸಲಹೆಗಳು

• ಪ್ರತಿದಿನ ಒಂದು ಗಂಟೆ ನಿಯಮಿತ ನಡಿಗೆ, ವ್ಯಾಯಾಮ, ಯೋಗ ಮತ್ತು ಧ್ಯಾನ ಇದು ಮಧುಮೇಹ ನಿಯಂತ್ರಣಕ್ಕೆ ಪೂರಕವಾಗಿದೆ.

• ಈಗಾಗಲೇ ಮಧುಮೇಹ ಖಾಯಿಲೆಯಿಂದ ಬಳಲುತ್ತಿರುವವರು   ಅತಿಯಾದ ಆಯಾಸವುಂಟುಮಾಡುವ ವ್ಯಾಯಾಮ ಮಾಡಬಾರದು.

• ಮನಸ್ಸು ಆದಷ್ಟು ಒತ್ತಡರಹಿತವಾಗಿದ್ದು, ನಗುಮೊಗ, ಲವಲವಿಕೆಯಿಂದ ಇರುವುದು.
• ಸಣ್ಣ ಸಣ್ಣ ವಿಚಾರಗಳಿಗೂ ಸಿಡುಕು, ಕೋಪ ಮನೋಭಾವನೆ, ಅತಿಯಾದ ಭಯ ಬಿಡಬೇಕು.
• ಬೆಳಿಗ್ಗೆ ಎದ್ದೊಡನೆ 1 ಲೋಟ ಬೆಚ್ಚನೆ ನೀರು ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಕಾರಿ
• ಬೆಳಗ್ಗಿನ ತಿಂಡಿಗೆ ಚಪಾತಿ ಅಥವಾ ಇಡ್ಲಿ ಸೇವಿಸಿದರೆ ಒಳ್ಳೆಯದು.
• ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ರಾಗಿಮುದ್ದೆ, ಅಲ್ಪ ಪ್ರಮಾಣದಲ್ಲಿ ಅನ್ನ ಸೇವಿಸಿ.
• ರಾತ್ರಿ ಊಟದ ನಂತರ ಕನಿಷ್ಟ 1 ಗಂಟೆಯ ನಂತರ ಮಲಗಬೇಕು.
• ಸಕ್ಕರೆ, ಮೈದಾ ನಿಷಿದ್ಧ, ಉಪ್ಪನ್ನು ಮಿತವಾಗಿ ಬಳಸಬೇಕು
• ಜಂಕ್‍ಫುಡ್, ಬೇಕರಿ ತಿನಿಸು, ಕರಿದ ಪದಾರ್ಥಗಳನ್ನು ತಿನ್ನದಿರುವುದು ಒಳ್ಳೆಯದು.
• ನೆಲದ ಅಡಿಯಲ್ಲಿ ಬೆಳೆಯುವ ತರಕಾರಿ ಕಡಿಮೆ ಮಾಡಿ. ಉದಾ ಬೀಟ್‍ರೂಟ್, ಆಲೋಗೆಡ್ಡೆ, ಗೆಣಸು ಇತ್ಯಾದಿ.
• ಇತರೆ ತರಕಾರಿಗಳನ್ನು ಯಥೇಚ್ಚವಾಗಿ ಸೇವಿಸಿ. ಸೊಪ್ಪನ್ನು ಹೆಚ್ಚಾಗಿ ಬಳಸಿ
• ಮಾಂಸಹಾರಿಗಳಾಗಿದ್ದರ ಮೀನು ಹಾಗೂ ಇತಿಮಿತಿಯಲ್ಲಿ ಚಿಕನ್ ಸೇವಿಸುವುದು ಒಳಿತು.
• ರೆಡ್ ಮೀಟ್ ಅಂದರೆ ಮಟನ್, ಪೋರ್ಕ್ ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.
• ಮದ್ಯಪಾನ, ಧೂಮಪಾನ ಹಾನಿಕಾರಕ, ರೆಡಿಮೇಡ್ ಜ್ಯೂಸ್ ಸೇವನೆ ಒಳ್ಳೆಯದಲ್ಲ.
• ಕೈತೋಟ, ಕೃಷಿ ಕಾರ್ಯಗಳಲ್ಲಿ ನಿಯಮಿತವಾಗಿ ತೊಡಗಿಸಿಕೊಂಡರೆ ದೇಹಕ್ಕೆ ಉತ್ತಮ ವ್ಯಾಯಾಮ ದೊರೆಯುತ್ತದೆ.
• ಹಣ್ಣುಗಳಲ್ಲಿ ಸೀಬೆ, ಕಿತ್ತಳೆ, ಮೂಸುಂಬೆ, ಸೇಬು, ಪಪ್ಪಾಯಿ ಹಣ್ಣುಗಳನ್ನು ಸೇವಿಸಬಹುದು.
• ಸಕ್ಕರೆ ಅಂಶ ಹೆಚ್ಚಾಗಿರುವ ಮಾವು, ಸೀತಾಫಲ, ಹಲಸಿನ ಹಣ್ಣುಗಳು ಒಳ್ಳೆಯದಲ್ಲ.
• ಅನಿವಾರ್ಯವಾದಾಗ ಮಧುಮೇಹಿಗಳು ಮಾತ್ರೆಗಳಿಗಿಂತ ಇನ್ಸುಲಿನ್ ಪಡೆಯುವುದು ಒಳ್ಳೆಯದು, ಅಡ್ಡಪರಿಣಾಮಗಳು ಇರುವುದಿಲ್ಲ.
• ನಿಯಮಿತವಾಗಿ ವೈದ್ಯರ ಸಲಹೆ ಪಡೆಯುವುದು, ಕನಿಷ್ಟ 6 ತಿಂಗಳಿಗೊಮ್ಮೆ ಡಯಾಬಿಟೀಸ್ ಪರೀಕ್ಷೆ ಮಾಡಿಸಿಕೊಳ್ಳುವುದು, ಶುಗರ್ ಲೆವೆಲ್ ಹೆಚ್ಚಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಜಾಣರ ಲಕ್ಷಣ.

ಸಂಗ್ರಹಿತ ಮಾಹಿತಿ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ