October 5, 2024

ಸಹೃದಯಿ ಬಂಧುಗಳೆ,
ಇದೊಂದು ಅವಿಸ್ಮರಣೀಯ ಸಂದರ್ಭ. ಚಿಕ್ಕಮಗಳೂರು ದರ್ಪಣ ಪತ್ರಿಕೆಯು ತನ್ನ ಆನ್‍ಲೈನ್ ಆವೃತ್ತಿಯೊಂದಿಗೆ ಹೊಸ ಹೆಜ್ಜೆ ಇರಿಸಿದೆ. ದರ್ಪಣ ಕಳೆದ 21 ವರ್ಷಗಳಿಂದ ಜಿಲ್ಲೆಯ ಮುಂಚೂಣಿ ಪಾಕ್ಷಿಕ ಪತ್ರಿಕೆಯಾಗಿ 12 ಪುಟಗಳ ಸಮೃದ್ಧ ಸುದ್ದಿ ಮಾಹಿತಿಗಳೊಂದಿಗೆ ನಿರಂತರವಾಗಿ ಪ್ರಕಟವಾಗುತ್ತಿದೆ. ಬಹುತೇಕ ಅಂಚೆ ಮೂಲಕ ಓದುಗರ ಮನೆಮನೆಗೆ ಪತ್ರಿಕೆ ತಲುಪುತ್ತಿದೆ. ಓದುಗ ಬಳಗದ ಸಲಹೆ, ಸಹಕಾರ, ಪ್ರೋತ್ಸಾಹ, ಬೆಂಬಲದಿಂದ ನಿರಂತರವಾಗಿ ಪತ್ರಿಕೆಯನ್ನು ಪ್ರಕಟಿಸಿ ಪಸರಿಸಲು ಸಾಧ್ಯವಾಗಿದೆ.

ಪತ್ರಿಕೆ ಕಳೆದ ಇಪ್ಪತ್ತೊಂದು ವರ್ಷಗಳಲ್ಲಿ ಜಿಲ್ಲೆಯ ಮಲೆನಾಡು ಭಾಗದ ಕೈಗನ್ನಡಿಯಾಗಿ ಕೆಲಸ ಮಾಡಿದೆ.  ಗ್ರಾಮೀಣ ಪ್ರದೇಶಗಳ ಮೂಲೆ ಮೂಲೆಯಿಂದ ಸುದ್ದಿಗಳನ್ನು ಹೆಕ್ಕಿ ತಂದು ಪ್ರಸಾರ ಮಾಡಲಾಗಿದೆ. ಅನೇಕ ಜನ ಉದಯೋನ್ಮುಖ ಲೇಖಕರಿಗೆ, ಪತ್ರಿಕೋದ್ಯಮದಲ್ಲಿ ಆಸಕ್ತಿ ಇದ್ದವರಿಗೆ ಉತ್ತಮ ಅವಕಾಶಗಳನ್ನು ಒದಗಿಸಿ ಅವರು ಮತ್ತಷ್ಟು ಮುಂದೆ ಸಾಗಲು ಪ್ರೇರಣೆ ನೀಡಿದೆ. ಎಲೆಮರೆಯಕಾಯಿಯಂತೆ ಇದ್ದ ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಯುವಜನರನ್ನು, ಹಿರಿಯ ಸಾಧಕರನ್ನು ಗುರುತಿಸಿದೆ.

ಅನುಭವಗಳು ಬದುಕನ್ನು ಪಕ್ವಗೊಳಿಸುತ್ತವೆ ಎಂಬುದು ಎಂದೆಂದಿಗೂ ಸಲ್ಲುವ ಮಾತು. ಇಷ್ಟು ವರ್ಷಗಳ ಪತ್ರಿಕಾ ರಂಗದ ಅನುಭವದ ಹಿನ್ನಲೆಯಲ್ಲಿ ಬದಲಾದ ತಂತ್ರಜ್ಞಾನ ಹಾಗೂ ಸಂವಹನ ಸ್ವರೂಪಕ್ಕೆ ಪೂರಕವಾಗಿ ಇದೀಗ ಚಿಕ್ಕಮಗಳೂರು ದರ್ಪಣ ಪತ್ರಿಕೆಯ ಆನ್‍ಲೈನ್ ಆವೃತ್ತಿಯನ್ನು ಪ್ರಾರಂಭಿಸುತ್ತಿದ್ದೇವೆ. ಈ ಮೂಲಕ ಸುದ್ದಿಗಳನ್ನು ಶೀರ್ಘವಾಗಿ ಓದುಗರಿಗೆ ತಲುಪಿಸುವುದು, ವಿಶೇಷ ಮಾಹಿತಿಗಳನ್ನು ಹಂಚಿಕೊಳ್ಳುವುದು, ಜ್ಞಾನ ವಿಜ್ಞಾನಕ್ಕೆ ಸಂಬಂಧಿಸಿದಂತಹ ವಿಚಾರಗಳನ್ನು, ವ್ಯಕ್ತಿವಿಶೇಷ, ಸಂದರ್ಶನ, ಲೇಖನ, ಸುತ್ತಮುತ್ತಲ ಸಾರ್ವಜನಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದು…ಹೀಗೆ ವಿಭಿನ್ನ ನೆಲೆಯಲ್ಲಿ ಕೆಲಸ ಮಾಡಬೇಕೆಂಬ ಸದಾಶಯದೊಂದಿಗೆ ಪತ್ರಿಕಾ ಬಳಗ ಕಾರ್ಯನಿರ್ವಹಿಸಲಿದೆ.

ಮುಂಬರುವ ದಿನಗಳಲ್ಲಿ ತಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹ ನಮ್ಮೊಂದಿಗಿರಲಿ. ತಮಗೆ ಇಷ್ಟವೆನಿಸಿದ ಸುದ್ದಿ ಮತ್ತು ಮಾಹಿತಿಗಳನ್ನು ಹಂಚಿಕೊಳ್ಳುವುದರ ಮೂಲಕ ಹೆಚ್ಚು ಹೆಚ್ಚು ಜನರಿಗೆ ತಲುಪಿಸಿ ಪತ್ರಿಕೆಯ ಬೆಳವಣಿಗೆಗೆ ಸಹಕರಿಸಿ ಎಂದು ಪ್ರೀತಿಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.

ಪತ್ರಿಕೆಗೆ ಸುದ್ದಿ, ಮಾಹಿತಿ, ಲೇಖನ, ಕಥೆ ಕಳುಹಿಸುವವರು darpanackm@gmail.com ಗೆ ಈಮೇಲ್ ಅಥವಾ 9448555587 ಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು. ಶುಭಾಶಯ ಕೋರುವವರು, ಜಾಹಿರಾತು ನೀಡುವವರು 8660601449 ಸಂಖ್ಯೆಯನ್ನು ಸಂಪರ್ಕಿಸಬಹುದು.

ಈ ಕೆಳಗಿನ ಲಿಂಕ್ ಮೂಲಕ ಚಿಕ್ಕಮಗಳೂರು ದರ್ಪಣ ನ್ಯೂಸ್ ವಾಟ್ಸಾಪ್ ಗ್ರೂಪ್ ಸದಸ್ಯರಾಗುವ ಮೂಲಕ ಪ್ರತಿದಿನದ ಸುದ್ದಿಗಳನ್ನು ವೀಕ್ಷಿಸಬಹುದು.
https://chat.whatsapp.com/L84vBNJaZ0N641Df8w8xp3

ಇಂತಿ ತಮ್ಮ ಪ್ರೀತಿಯ
ಪ್ರಸನ್ನ ಗೌಡಳ್ಳಿ
9448555587

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ