October 8, 2024

ಮಂಗಳೂರಿನಲ್ಲಿ ಉದ್ಯಮಿ, ಮುಸ್ಲಿಂ ಸಮುದಾಯದ ಹಿರಿಯ ಮುಖಂಡ ಮುಮ್ತಾಜ್ ಆಲಿಯವರ ಆತ್ಮಹತ್ಯೆಗೆ ಕಾರಣವಾಗಿರುವ ಹನಿಟ್ರ್ಯಾಪ್ ಪ್ರಕರಣ ಇದೀಗ ವ್ಯಾಪಕವಾಗಿ ತನ್ನ ಬಾಹುಗಳನ್ನು ಚಾಚಿರುವುದು ಬೆಳಕಿಗೆ ಬಂದಿದೆ.

ಈ ತಂಡ ಮಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಅನೇಕ ಜನರನ್ನು ಈ ರೀತಿಯಾಗಿ ಬಲೆಗೆ ಬೀಳಿಸಿ ಹಣವನ್ನು ದೋಚುತ್ತಿದ್ದುದು ಬಯಲಾಗುತ್ತಿದೆ.

 

ಮಹಿಳೆಯೊಬ್ಬರನ್ನು ಮುಂದೆ ಬಿಟ್ಟು ವಿಡಿಯೋ ಮಾಡಿಕೊಂಡಿದ್ದ ತಂಡ ಮುಮ್ತಾಜ್ ಆಲಿಯವರನ್ನು ಬ್ಲಾಕ್ ಮೇಲ್ ಮಾಡಿ ಸುಮಾರು 50 ಲಕ್ಷ ಹಣವನ್ನು ಕಿತ್ತಿದ್ದರು ಎಂದು ದೂರಲಾಗಿದೆ. ಆ ನಂತರವೂ ಮಾನಸಿಕ ಕಿರುಕುಳ, ತೇಜೋವದೆ ಮುಂದುವರಿಸಿದಾಗ ತೀವ್ರ ಖಿನ್ನತೆಗೆ ಒಳಗಾಗಿದ್ದ ಮುಮ್ತಾಜ್ ಆಲಿ ಕೊನೆಗೆ ಆತ್ಮಹತ್ಯೆ ಹಾದಿ ಹಿಡಿದಿದ್ದರು. ಕೂಳೂರು ಸೇತುವೆಯ ಬಳಿ ಕಾರು ನಿಲ್ಲಿಸಿ ಅಲ್ಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದ ಓರ್ವ ಮಹಿಳೆ ಸೇರಿದಂತೆ ಆರು ಜನರ ಮೇಲೆ ಪ್ರಕರಣ ದಾಖಲಿಸಿದ್ದು, ಇವರಲ್ಲಿ ಮೂರು ಮಂದಿಯನ್ನು ನಿನ್ನೆ ಬಂಧಿಸಲಾಗಿದೆ. ಮಹಿಳೆ ರೆಹಮತ್ ಹಾಗೂ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಾಫ, ಶೋಯೆಬ್ ಹಾಗೂ ಸಿರಾಜ್ ವಿರುದ್ಧ ದೂರು ದಾಖಲಾಗಿದೆ.

ಮೂಲಗಳ ಪ್ರಕಾರ ತಂಡ ಮಹಿಳೆಯೊಬ್ಬರನ್ನು ಬಳಸಿಕೊಂಡು ವಿಡಿಯೋ ಮತ್ತು ಆಡಿಯೋ ರೆಕಾರ್ಡ್ ಮಾಡಿಕೊಂಡು ರಾಜಕಾರಣಿಗಳನ್ನು, ಉದ್ಯಮಿಗಳನ್ನು, ಮಸೀದಿ ಕಮಿಟಿ ಸದಸ್ಯರನ್ನು, ಧಾರ್ಮಿಕ ಪ್ರವಚನಕಾರರನ್ನು ಬ್ಲಾಕ್ ಮೇಲ್ ಮಾಡಿ ಹಣವನ್ನು ಪೀಕುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಸಿದ್ಧ ಮುಸ್ಲೀಂ ಧಾರ್ಮಿಕ ಪ್ರವಾಚರೊಬ್ಬರು ಮಹಿಳೆಯೊಂದಿಗೆ ಮಾತನಾಡಿದ ಆಡಿಯೋ ರೆಕಾರ್ಡ್ ಇಟ್ಟುಕೊಂಡು ಅವರನ್ನು ಬ್ಲಾಕ್ ಮೇಲ್ ಮಾಡಿ ಕರೆದಲ್ಲಿಗೆ ಬಂದು ಧಾರ್ಮಿಕ ಪ್ರವಚನ ನೀಡುವಂತೆ ಮಾಡುತ್ತಿದ್ದರು. ಈ ಕಾರ್ಯಕ್ರಮದಿಂದ ಬಂದ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಇದೀಗ ಈ ಖದೀಮರ ತಂಡದ ಕುಕೃತ್ಯಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ಕಠಿಣ ಶಿಕ್ಷೆಯಾಗುವಂತೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇಂತಹ ಹನಿಟ್ರ್ಯಾಪ್ ಬ್ಲಾಕ್ ಮೇಲ್ ತಂಡಗಳು ಎಲ್ಲಾ ಕಡೆ ತಲೆ ಎತ್ತಿದ್ದು, ಸುಲಭವಾಗಿ ಹಣಸುಲಿಗೆ ಮಾಡುವ ಮಾರ್ಗ ಕಂಡುಕೊಂಡಿದ್ದಾರೆ. ಇಂತವರಿಂದ ಮೋಸಹೋಗದೇ ಇಂತಹ ಕೃತ್ಯಗಳು ಕಂಡ ಬಂದರೆ ಈ ಬಗ್ಗೆ ಪೊಲೀಸ್ ದೂರು ನೀಡುವ ಮೂಲಕ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ