October 7, 2024

ತತ್ತ್ವಪದ, ಕೀರ್ತನೆ, ಭಜನೆ, ಭಕ್ತಿಗೀತೆ ಸೇರಿದಂತೆ ಸುಗಮಸಂಗೀತದಲ್ಲಿ ಸಾಹಿತ್ಯ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಪಾರಿಭಾಷಿಕ ಶಬ್ದಗಳನ್ನು ಅರ್ಥಮಾಡಿಕೊಂಡರೆ ಬದುಕು ಸುಂದರ, ಸನಾತನ ಧರ್ಮವನ್ನೂ ಉಳಿಸಬಹುದು ಎಂದು ಖ್ಯಾತ ಗಾಯಕ ಶಂಕರಶಾನುಭಾಗ್ ಅಭಿಪ್ರಾಯಿಸಿದರು.

ಮಲ್ಲಿಗೆ ಸುಗಮಸಂಗೀತ ಟ್ರಸ್ಟ್, ಕಲ್ಕಟ್ಟೆ ಪುಸ್ತಕದಮನೆ ಬೀರೂರು ಮಲ್ಲಿಗೆ ಬಳಗದ ಸಹಯೋಗದಲ್ಲಿ ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ‘ವಾರ್ಷಿಕ ಮಲ್ಲಿಗೆ ಪುರಸ್ಕಾರ’ವನ್ನು ಖ್ಯಾತ ತಬಲಾ ವಾದಕ ಪಂಡಿತ ತುಕಾರಾಮರಾವ್ ರಂಗಧೋಳ ಅವರಿಗೆ ವಿತರಿಸಿ ‘ಗಾನ ಮಲ್ಲಿಗೆ-55’ ಅಂಗವಾಗಿ ‘ಕಾವ್ಯ ಸಂಗೀತ ಸಂಜೆ’ಯಲ್ಲಿ ಅವರು ಪಾಲ್ಗೊಂಡಿದ್ದರು.

ಕೀರ್ತನೆ, ಭಜನೆ, ಭಕ್ತಿಗೀತೆಗಳು ಕಲಿಯುಗದಲ್ಲಿ ಮೋಕ್ಷ ಸಾಧನೆಗೆ ಮಾರ್ಗಗಳೆಂಬ ಭಾಗವತದ ಮಾತುಗಳನ್ನು ಉಲ್ಲೇಖಿಸಿದ ಅವರು, ಮನರಂಜನೆಯಷ್ಟೇ ಅಲ್ಲ ಅದರ ಆಚೆಗೂ ಸುಗಮ ಸಂಗೀತದಲ್ಲಿ ಅವಕಾಶವಿರುವುದರಿಂದ ಇದು ಶ್ರೇಷ್ಠ ಸಂಗೀತ ಪ್ರಾಕಾರ. ಸಂಗೀತದ ಎಲ್ಲ ಪ್ರಾಕಾರಗಳಲ್ಲಿ ಸುಗಮಸಂಗೀತದಲ್ಲಿ ಮಾತ್ರ ಕೇಳಿದ್ದನ್ನು ತೆಗೆದುಕೊಂಡು ಹೋಗುತ್ತೇವೆ. ತತ್ತ್ವ, ಒಳಗಿನ ಹೊಳಹುಗಳು ಕಾಣುತ್ತದೆ ಎಂದರು.
ದಾಸ ಸಾಹಿತ್ಯ ಕನ್ನಡ ನಾಡಿದ ಸಾರಸ್ವತಲೋಕದ ಅದ್ಭುತ. ಇದರಲ್ಲಿ ನೀತಿ, ಭಕ್ತಿ, ತತ್ತ್ವ-ಸಿದ್ಧಾಂತ, ಬೋಧನೆ, ಚಿಂತನೆಗಳಿವೆ ಇವನ್ನೆಲ್ಲ ಅರ್ಥಮಾಡಿಕೊಂಡು ಹಾಡಿದರೆ ಸಮಾಜದಲ್ಲಿ ಪರಿವರ್ತನೆಗೆ ಸಾಧನವಾಗುತ್ತದೆ. ಸಾಹಿತ್ಯ ಅರಿಯದಿದ್ದರೆ ಕಣ್ಣುಕಟ್ಟಿಕೊಂಡು ತೀರ್ಥಯಾತ್ರೆ ಮಾಡಿದಂತಾಗುವುದೆಂದು ಶಂಕರಶಾನುಭಾಗ್ ನುಡಿದರು.

84ಲಕ್ಷ ಜೀವರಾಶಿ ದಾಟಿದ ಮೇಲೆ ಮನುಷ್ಯಜನ್ಮ ಬರುತ್ತದೆ. ಇಲ್ಲಿ ಜೀವನ ಸಾರ್ಥಕ ಪಡಿಸಿಕೊಳ್ಳುವ ಅಕಾಶವಿದೆ. ಮನುಷ್ಯನಿಗೆ ಮಾತ್ರ ಭಾವನೆ ವ್ಯಕ್ತಪಡಿಸುವ ಆಲೋಚನೆ, ನಾಲಗೆ, ಬಾಯಿ ಇದೆ. ಮನುಷ್ಯರಾಗಿ ಹುಟ್ಟಿದಮೇಲೆ ಒಳಿತನ್ನು ಮಾಡಬೇಕು. ಸುಗಮಸಂಗೀತದಲ್ಲಿ ಜೀವನದ ಮೌಲ್ಯಗಳಿವೆ. ಪಾರಿಭಾಷಿಕ ಶಬ್ದಗಳನ್ನು ಅರ್ಥಮಾಡಿಕೊಳ್ಳಬೇಕು ಎಂದರು.

‘ಕಾಣದ ಕಡಲಿಗೆ…’ ಹಾಡಿನ ಪ್ರತಿಪದಗಳೂ ಬೇರೊಂದು ಸಂದೇಶವನ್ನೆ ನೀಡುತ್ತದೆ. ಹಿರಿಯಗಾಯಕ ಅಶ್ವಥ್ ಈ ಹಾಡನ್ನು ನಾಡಿನ ಮನೆ-ಮನದೊಳಗೆ ತಲುಪಿಸಿದ್ದಾರೆ. ಆದರೆ ಅರ್ಥ ತಲುಪಸಿದ್ದಾರಾ ಎನ್ನುವುದು ಪ್ರಶ್ನಾರ್ಥಕ ಚಿಹ್ನೆ ಎಂದ ಶಂಕರಶಾನುಬಾಗ್ ನಾವು ಅರ್ಥ ತಲುಪಿಸುವ ಪ್ರಯತ್ನ ಮಾಡುತ್ತಿರುವುದಾಗಿ ನುಡಿದರು.

ಭದ್ರಗಿರಿ ಕೇಶವದಾಸರು ಬರೆದು ಸ್ವರಸಂಯೋಜಿಸಿದ ‘ಜೈ ಹನುಮಾನ್…’ ತಾವು ಮೊದಲು ಹಾಡಿದ್ದು ಈ ಹಾಡು ಇಂದು ಲೋಕ ಪ್ರಸಿದ್ಧವಾಗಿದೆ. ಇದರಲ್ಲಿ ಭಕ್ತಿಯ ಪರಕಾಷ್ಠೆ ಇದೆ ಎಂದ ಅವರು, ಚಿಕ್ಕಮಗಳೂರಿನ ಬೀದಿ ಬೀದಿಗಳ ಪರಿಚಯ ತಮಗಿದೆ. ಏಕೆಂದರೆ 1979ರಿಂದ 82ರವರೆಗೆ ಇಲ್ಲಿ ಲಾಟರಿಟಿಕೆಟ್ ಮಾರಿ ಜೀವನ ನಿರ್ವಹಿಸಿದ ಅನುಭವವಿದೆ. ಕಳೆದವರ್ಷ ಇಲ್ಲಯ ಜಿಲ್ಲಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಲು ಆಹ್ವಾನ ನೀಡಿದ್ದರು. ಪ್ರಶಸ್ತಿಯ ಬದಲಿಗೆ ಕಾರ್ಯಕ್ರಮ ನೀಡಿದರೆ ನಮ್ಮೂರಿನ ಜನರಮುಂದೆ ಹಾಡಿದ ಸಂತೋಷ ಎಂದಿದ್ದು ಇಂದು ಆ ಅವಕಾಶ ಲಭ್ಯವಾಗಿದೆ ಎಂದು ಹರ್ಷಿಸಿದರು.

ಖ್ಯಾತ ತಬಲ ವಾದಕ ಶಿವಮೊಗ್ಗದ ಪಂಡಿತ ತುಕಾರಾಮ್‍ರಾವ್ ರಂಗಧೋಳ ಅವರಿಗೆ ‘ಮಲ್ಲಿಗೆಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು. ಕೃತಜ್ಞತೆ ಸಲ್ಲಿಸಿ ಮಾತನಾಡಿದ ತುಕಾರಾಮ್ ಭಜನೆಯಿಂದ ತಬಲಾ ಕಡೆಗೆ ಹೊರಳಲು ತಮ್ಮ ತಂದೆ ಕಾರಣ. ಪಂಡರಾಪುರದ ವಿಠ್ಠಲನ ಆರಾಧಕರಾದ ಅಜ್ಜ ಭಜನೆ ಹಾಡುತ್ತಾ ಕುಟುಂಬದ ಮೇಲೆ ಪ್ರಭಾವ ಬೀರಿದ್ದರು. ಡಾ.ಪುಟ್ಟರಾಜ ಗವಾಯಿಗಳೂ ಸೇರಿದಂತೆ ಆರೂ ಜನ ಗುರುಗಳಿಂದ ಕಲಿತ್ತಿದ್ದು ಅವರಿಗೆ ಗೌರವ ಸಂದಾಯವಾಗುತ್ತದೆ ಎಂದರು.

ಆಶಾಕಿರಣದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ ಜಿ.ವಿ.ಅತ್ರಿ ಇಲ್ಲಿ ಆರಂಭಿಸಿದ ಸಂಗೀತಗಂಗಾ ನೂರಾರು ಸಂಗೀತರಗಾರರನ್ನು ಹುಟ್ಟುಹಾಕಿದೆ. ಸಂಗೀತರಾದ ದಾಸರಾದರೆ ಮೋಕ್ಷವನ್ನೂ ಪಡೆಯಬಹುದು. ಸಂಗೀತ ಒಂದು ಚಮತ್ಕಾರ. ಹೊಟ್ಟೆಯಲ್ಲಿದ್ದಾಗಿನಿಂದ ಚಟ್ಟದವರೆಗೂ ಸಂಗೀತ ಬೇಕು. ನೂರಾರು ಕಾಯಿಲೆಗಳನ್ನು ತಡೆಗಟ್ಟು ಶಕ್ತಿಯೂ ಸಂಗೀತಕ್ಕಿದೆ ಎಂದ ಮಕ್ಕಳ ತಜ್ಞರೂ ಆದ ಕೃಷ್ಣೇಗೌಡ, ಸಂಗೀತದ ಗಂಧವಿಲ್ಲದವ ಪಶುವಿಗೆ ಸಮಾನ ಎನ್ನುತ್ತಾರೆ. ಕೃಷ್ಣನ ಕೊಳಲ ನಾದಕ್ಕೆ ಪಶುಗಳೂ ಸ್ಪಂದಿಸಿದ್ದನ್ನು ಕೇಳಿದ್ದೇವೆ. ಹಲವು ಮಾನಸಿಕ ಕಾಯಿಲೆಗಳಿಗೆ ಸಂಗೀತಚಿಕಿತ್ಸೆ ನೀಡಲಾಗುತ್ತದೆ ಎಂದರು.

ಎಐಟಿ ವಿ.ವಿ.ಕುಲಸಚಿವ ಡಾ.ಸಿ.ಕೆ.ಸುಬ್ರಾಯ, ಪ್ರಾಂಶುಪಾಲ ಡಾ.ಜಯದೇವ, ಕಲ್ಕಟ್ಟೆಪುಸ್ತಕದಮನೆ ಅಧ್ಯಕ್ಷೆ ರೇಖಾನಾಗರಾಜರಾವ್, ಬೀರೂರು ಮಲ್ಲಿಗೆಬಳಗದ ಅಧ್ಯಕ್ಷೆ ಸ್ವರ್ಣಾಗುರುನಾಥ್, ಬುಕ್ಕಾಬುದಿಯ ಅನಿತಾಪ್ರಭು ಶುಭಹಾರೈಸಿದರು. ಗಾಯಕರುಗಳಾದ ಮಲ್ಲಿಗೆಸುಧೀರ್, ಮಂಜುಳಾಮಹೇಶ್, ಅಭಿಮಲ್ಲಿಗೆ, ಮೋಹನಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಕಲ್ಕಟ್ಟೆಪುಸ್ತಕದಮನೆಯ ಎಚ್.ಎಂ.ನಾಗರಾಜರಾವ್ ಸ್ವಾಗತಿಸಿ, ನಿರೂಪಿಸಿದರು. ಆಯೋಜಕ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಅಧÀ್ಯಕ್ಷ ಮಲ್ಲಿಗೆಸುಧೀರ್ ಸನ್ಮಾನಿತರನ್ನು ಪರಿಚಯಿಸಿದರು.

ಬೀರೂರಿನ ಮಲ್ಲಿಗೆಬಳಗ, ನಗರದ ದಾಸವಿಠ್ಠಲ ಯುವಭಜನಾ ಮಂಡಳಿ, ಆರಾಧನಾ ಸಂಗೀತಶಾಲೆ, ಕಡೂರಿನ ವೀರಾಂಜನೇಯ ಭಜನಾಮಂಡಳಿ ವತಿಯಿಂದ ಭಜನಾಕಾರ್ಯಕ್ರಮ ನಡೆಯಿತು.

ಶಂಕರಶಾನುಭಾಗ್ ಅವರ ‘ಕಾವ್ಯ ಸಂಗೀತ’ಕ್ಕೆ ಶಿವಮೊಗ್ಗದ ವಿಜಯಸೌಂಡ್ಸ್ ಸಾಥ್ ನೀಡಿದ್ದು ತಬಲಾ ಪಂ.ತುಕಾರಾಮ್, ಕೀಬೋರ್ಡ್‍ನಲ್ಲಿ ಹಾಸನದ ವೆಂಕಟೇಶ್, ರಿದಮ್ ಪ್ಯಾಡ್‍ನಲ್ಲಿ ವಿಠ್ಠಲರಾವ್ ಸಹಕಾರ ನೀಡಿದರು.

ವರದಿ : ಪ್ರಭುಲಿಂಗಶಾಸ್ತ್ರಿ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ