October 5, 2024

ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆಯಲ್ಲಿ ಅಖಿಲ ಭಾರತ ಸಮನ್ವಯಿತ ಪ್ರಾಯೋಜನೆ (ಸಾಂಬಾರ ಬೆಳೆಗಳ) ವತಿಯಿಂದ ಸಾಂಬಾರ ಬೆಳೆಗಳಲ್ಲಿ ಸಮಗ್ರ ಪೀಡೆ ನಿರ್ವಹಣೆ ಕುರಿತು ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ತರಬೇತಿಯನ್ನು ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣ ಕೇಂದ್ರ ಬೆಂಗಳೂರುರವರು ಪ್ರಾಯೋಜಿಸಿದ್ದರು. ಈ ತರಬೇತಿ ಕಾರ್ಯಕ್ರಮದಲ್ಲಿ ಒಟ್ಟು 160 ರೈತರು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು. ಕಾರ್ಯಕ್ರಮವನ್ನು ಅಖಿಲ ಭಾರತ ಸಮನ್ವಯಿತ ಸಾಂಬಾರು ಬೆಳೆಗಳ ಪ್ರಯೋಜನ ಮುಖ್ಯಸ್ಥರಾದ ಡಾ. ಉಲ್ಲಾಸ ಎಂ.ವೈ. ಆಯೋಜಿಸಿದ್ದರು.

ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸೆಪ್ಟಂಬರ್ 25 ರಂದು ನಡೆಯಿತು. ಈ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಹ ಸಂಶೋದನಾ ನಿರ್ದೇಶಕರಾದ ಡಾ. ಎ.ಟಿ. ಕೃಷ್ಣಮೂರ್ತಿರವರು ವಹಿಸಿದ್ದರು.  ಅವರು ಮಾತನಾಡಿ ಸಾಂಬಾರ ಬೆಳೆಗಳು ಲಾಭದಾಯಕ ಬೆಳೆಗಳಾಗಿದ್ದು, ವಿಶೇಷವಾಗಿ ರಾಜ್ಯದ ಮಲೆನಾಡು ಮತ್ತು ಅರೆಮಲೆನಾಡು ಭಾಗದಲ್ಲಿ ಸಾಂಬಾರ ಬೆಳೆಗಳಿಗೆ ಸೂಕ್ತ ವಾತಾವರಣವಿದ್ದು, ಯುವ ಕೃಷಿಕರು ಸಾಂಬಾರ ಬೆಳೆಗಳನ್ನು ಬೆಳೆಯಲು ಆಸಕ್ತಿ ವಹಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಎಂ. ದುಶ್ಯಂತ್ ಕುಮಾರರವರು ಭಾಗವಹಿಸಿ ತರಬೇತಿ ಯಶಸ್ವ್ವಿಯಾಗಿದ್ದು ಸಾಂಬಾರು ಬೆಳೆಗಳಲ್ಲಿ ಸಂಶೋಧನೆಗೆ ಅತಿ ಹೆಚ್ಚು ಮಹತ್ವವಿದ್ದು ಯುವ ವಿಜ್ಞಾನಿಗಳು ಸಾಂಬಾರು ಬೆಳೆಗಳಲ್ಲಿ ಸಂಶೋಧನೆ ತೊಡಗಿಕೊಳ್ಳಬೇಕೆಂದು ಹೇಳಿದರು.

ಇನ್ನೊಬ್ಬ ಮುಖ್ಯ ಅತಿಥಿಗಳಾದಂತಹ ಡಾ. ಎ ಸಿದ್ಧಿಕಿ, ಜಂಟಿ ನಿರ್ದೇಶಕರು ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣ ಕೇಂದ್ರ, ಬೆಂಗಳೂರುರವರು ಈ ತರಬೇತಿಯನ್ನು ಸುಸಜ್ಜಿತವಾಗಿ ಆಯೋಜಿಸಿದ್ದು ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪ್ರಯೋಜನ ಪಡೆದುಕೊಂಡರು ಎಂದು ಹರ್ಷ ವ್ಯಕ್ತಪಡಿಸಿದ್ದರು.

ಎರಡು ದಿನದ ತರಬೇತಿ ಕಾರ್ಯಕ್ರಮದಲ್ಲಿ ಡಾ. ಎಸ್.ಜೆ. ಅಂಕೇಗೌಡರವರು, ಮುಖ್ಯಸ್ಥರು, ಪ್ರಾದೇಶಿಕ ಕಛೇರಿ, ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ, ಅಪ್ಪಂಗಳ, ಡಾ. ಎಂ.ಹೆಚ್. ಸುಚಿತ್ರ ಕುಮಾರಿ, ವಿಜ್ಞಾನಿಗಳು, ಸಸ್ಯ ಸಂರಕ್ಷಣೆ, ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ, ಡಾ. ಪಲ್ಲವಿ ಎಂ.ಎಸ್., ಸಹಾಯಕ ಪ್ರಾಧ್ಯಪಕರು, ಸಸ್ಯ ರೋಗಶಾಸ್ತ್ರ ಮತ್ತು ಶ್ರೀಮತಿ ಜಿ.ಸಿ. ಸಂಧ್ಯಾ, ಸಹಾಯಕ ಪ್ರಾಧ್ಯಪಕರು, ತೋಟಗಾರಿಕೆ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಮೂಡಿಗೆರೆ, ಹಾಗೂ ಡಾ. ಜಯಸಿಂಹ, ವಿಜ್ಞಾನಿಗಳು, ಸಸ್ಯ ಸಂರಕ್ಷಣೆ, ಪ್ರಾದೇಶಿಕ ಕೇಂದ್ರೀಯ ಸಮಗ್ರ ಪೀಡೆ ನಿರ್ವಹಣ ಕೇಂದ್ರ, ಬೆಂಗಳೂರು ರವರು ರೈತರಿಗೆ ಸಾಂಬಾರು ಬೆಳೆಗಳಲ್ಲಿ ಬಾದಿಸುವ ವಿವಿಧ ರೋಗ ಕೀಟ ನಿರ್ವಹಣೆಯ ಬಗ್ಗೆ ಹಾಗೂ ರೈತರು ಅನುಸರಿಸಬೇಕಾದ ಉತ್ತಮ ಬೇಸಾಯ ಪದ್ದತಿಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಮೂಡಿಗೆರೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ , ಪ್ರಗತಿಪರ ಕೃಷಿಕ ಪೂರ್ಣೇಶ್ ಜಿ.ಹೊಸಳ್ಳಿ ಮುಂತಾದವರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ