October 5, 2024

ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಜಿಲ್ಲಾ ಹಂತದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ‘ಚಿಕ್ಕಮಗಳೂರು ತಾಲ್ಲೂಕು 5ನೆಯ ಕನ್ನಡ ಸಾಹಿತ್ಯ ಸಮ್ಮೇಳನ’ ಆಗ್ರಹಿಸಿದೆ.

ಚಿಕ್ಕಮಗಳೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಕುವೆಂಪು ಕಲಾಮಂದಿರ ಗೌರಮ್ಮಬಸವೇಗೌಡ ಮಹಾಮಂಟಪದಲ್ಲಿ ನಡೆಸಿದ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನ ಬಿಸಲೇಹಳ್ಳಿ ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದು ನಾಲ್ಕು ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿತು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಮೊದಲು ಜಿಲ್ಲಾ ಹಂತದಲ್ಲಿ ನೀಡಲಾಗುತ್ತಿತ್ತು. ಪ್ರಸ್ತುತ ರಾಜ್ಯಮಟ್ಟದಲ್ಲಿ ಮಾತ್ರ ಕೊಡಲ್ಪಡುತ್ತಿದೆ. ಚಿಕ್ಕಮಗಳೂರಿನ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲು ಅವಕಾಶವಾಗುವಂತೆ ಪ್ರತಿವರ್ಷ ಜಿಲ್ಲಾ ಹಂತದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದೆ.

ಅಂಬಳೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿದ್ದ ಎ.ಆರ್.ಕೃಷ್ಣಶಾಸ್ತ್ರಿ ಭವನ ಪೂರ್ಣವಾಗಿ ನಿರ್ಮಾಣವಾಗಬೇಕು. ಅಂಬಳೆ ಗ್ರಾಮಕ್ಕೆ ಹೋಗುವ ರಸ್ತೆಯ ಆರಂಭದಲ್ಲಿ ಕೃಷ್ಣಶಾಸ್ತ್ರಿಗಳ ಮಹಾದ್ವಾರ ರಚನೆಯಾಗಬೇಕೆಂದು ಒತ್ತಾಯಿಸಲಾಯಿತು.

ಹೊಸದಾಗಿ ಜಿಲ್ಲಾಧಿಕಾರಿಗಳ ಕಛೇರಿ ನಿರ್ಮಾಣವಾಗುತ್ತಿದ್ದು ಈಗಿರುವ ಕಛೇರಿಯ ಕಟ್ಟಡವನ್ನು ಜಿಲ್ಲಾ ಸ್ಮಾರಕವಾಗಿ ಉಳಿಸಿಕೊಳ್ಳಬೇಕು. ಜಿಲ್ಲೆಯ ಶಾಸನ, ಸಾಹಿತ್ಯ, ಕೃಷಿ ಪರಂಪರೆ, ಕಲಾಕೃತಿ ಸೇರಿದಂತೆ ಜಿಲ್ಲೆಯ ಸಾಂಸ್ಕøತಿಕ ಮಾಹಿತಿ ಮತ್ತು ಅಧ್ಯಯನ ಕೇಂದ್ರವಾಗುವುದರ ಜೊತೆಗೆ ಅಲ್ಲಿ ಕನ್ನಡದ ಕಾರ್ಯಚಟುವಟಿಕೆಗಳನ್ನು ನಡೆಸಲು ಅವಕಾಶವಾಗಬೇಕೆಂದು ಒತ್ತಾಯಿಸಲಾಯಿತು.

ಶ್ರೇಷ್ಠ ಮತ್ತು ಸುಂದರ ಪ್ರಕೃತಿ ತಾಣವಾಗಿರುವ ಚಿಕ್ಕಮಗಳೂರು ತನ್ನದೇ ಆದ ವೈಶಿಷ್ಟ್ಯದಿಂದ ಸಹೃದಯಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿಯ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗಿರಿಶ್ರೇಣಿಯ ಸ್ವಚ್ಛತೆಗೆ ಜಿಲ್ಲಾಡಳಿತ ಸೂಕ್ತ ಹಾಗೂ ನಿರಂತರ ಕ್ರಮಕೈಗೊಳ್ಳಬೇಕೆಂದು. ಸಮ್ಮೇಳನದ 4ನೆಯ ನಿರ್ಣಯದಲ್ಲಿ ಗಮನ ಸೆಳೆಯಲಾಗಿದೆ.

ತಾಲ್ಲೂಕು ಕಾರ್ಯದರ್ಶಿ ವಿರೇಶಕೌಲಗಿ, ಖಜಾಂಚಿ ಈಶ್ವರಪ್ಪ, ನಗರಅಧ್ಯಕ್ಷ ಸಚಿನಸಿಂಗ್, ಕಸಾಪ ಕಸಬ ಹೋಬಳಿ ಅಧ್ಯಕ್ಷೆ ವೀಣಾಮಲ್ಲಿಕಾರ್ಜುನ್ ಮತ್ತಿತರರು ವೇದಿಕೆಯಲ್ಲಿದ್ದರು. ವೀಣಾಅರವಿಂದ್ ಸ್ವಾಗತಿಸಿ, ಡಾ.ತನುಜಾ ನಿರೂಪಿಸಿ, ಮೋಕ್ಷಾ ವಂದಿಸಿದರು.

 

ಚುಟುಕುಸಾಹಿತಿ ಅರವಿಂದದೀಕ್ಷಿತ್ ಮತ್ತು ಉತ್ತಮವಾಗ್ಮಿ ನಾಗಶ್ರೀತ್ಯಾಗರಾಜ್ ಅವರಿಗೆ ಸಾಹಿತ್ಯಸಿರಿ ಪ್ರಶಸ್ತಿ ನೀಡಲಾಯಿತು. ಸಾಹಿತಿ ಪತ್ರಕರ್ತ ತಿಪ್ಪೇರುದ್ರಪ್ಪ, ರಂಗಕರ್ಮಿ ಸುರೇಶದೀಕ್ಷಿತ್, ಶಿಕ್ಷಣತಜ್ಞ ಡಾ.ವಿನಾಯಕ, ಅಂಗನವಾಡಿ ಶಿಕ್ಷಕಿ ಎಸ್.ಶೈಲಾಬಸವರಾಜ್, ಡಿ.ಎಂ.ಮಂಜುನಾಥಸ್ವಾಮಿ, ಭೋಜೇಗೌಡ, ರೇಖಾನಾಗರಾಜರಾವ್, ಚಂದ್ರಶೇಖರ್‍ನಾರಣಪುರ, ರಾಜೇಶ್, ಕಳವಾಸೆಚಂದ್ರೇಗೌಡ ಸೇರಿದಂತೆ 25ಸಾಧಕರನ್ನು ಗೌರವಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ