October 5, 2024

ಇತ್ತೀಚೆಗೆ ಲಂಡನ್ ನಲ್ಲಿ ನಡೆದ ಇಂಟನ್ರ್ಯಾಷನಲ್ ಕಾಫಿ ಆರ್ಗನೈಸೇಷನ್ ಸಭೆಗೆ ಇಂಟನ್ರ್ಯಾಷನಲ್ ಕಾಫಿ ಆರ್ಗನೈಸೇಷನ್ ನ ಪಿ.ಎಸ್.ಸಿ.ಬಿ.ಸದಸ್ಯ ರಾದ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಡಾ.ಹೆಚ್.ಟಿ .ಮೋಹನ್ ಕುಮಾರ್ ರವರು ಭಾಗವಹಿಸಿ ಅಂತರಾಷ್ಟ್ರೀಯ ಕಾಫಿ ವಿಚಾರದ ಬಗ್ಗೆ ನಡೆದ ಚರ್ಚಾಕೂಟಯಲ್ಲಿ ಭಾಗವಹಿಸಿದ್ದರು.

ಕೇಂದ್ರ ವಾಣಿಜ್ಯ ಸಚಿವರ ಕಡೆಯಿಂದ ಅಧಿಕಾರಿ ನೀರಜ್ ರವರು, ಇಂಡಿಯನ್ ಎಂಬೆಸಿ, ಲಂಡನ್ ಅಲ್ಲಿಂದ ಇಬ್ಬರು ಅಧಿಕಾರಿಗಳು ಆದ ನಿಧಿಮಣಿ ತ್ರಿಪತಿ, ಹಾಗೂ ಶ್ರೀರಂಜನಿ ಕನಗವೆಲ್ ಈ ಸಭೆಗೆ ಭಾಗವಹಿಸಿದ್ದರು.

ಕಾಫಿ ಬೆಳೆಯುವ 60- 65 ದೇಶಗಳಿಂದ ಆಯಾ ದೇಶದ ಪ್ರತಿನಿಧಿಗಳು ಭಾಗವಹಿಸಿ ಸುಧೀರ್ಘವಾದ ಚರ್ಚೆ ನಡೆದು ಮುಂದಿನ ಸಭೆಯನ್ನು ಹೊಂಡರಸ್ ನಲ್ಲಿ ಮಾಡುವುದು ಎಂದು ತೀರ್ಮಾನವಾಗಿರುತ್ತದೆ.

ಬ್ರೆಜಿಲ್ ದೇಶದಿಂದ ಬಂದಂತಹ ಪ್ರತಿನಿಧಿಯವರಾದ ಕಾರ್ಲೋಸ್ ಹೆನ್ರಿಕ್ಯೂ ಜಾರ್ಜ್ ಬ್ರಾಂಡೋ ರವರ ಜೊತೆ ಕಾರ್ಮಿಕರ ಸಮಸ್ಯೆ ಬಗ್ಗೆ ವಿಚಾರ ವಿನಿಮಯ ಮಾಡಿಕೊಂಡಾಗ ಪ್ರಸ್ತುತ ದಿನಗಳಲ್ಲಿ ಬ್ರೆಜಿಲ್‍ನಲ್ಲಿ ದೊಡ್ಡ ದೊಡ್ಡ ಯಾಂತ್ರಿಕರಣಗಳನ್ನು ಉಪಯೋಗಿಸುತ್ತಿದ್ದಾರೆ. ಭಾರತದಲ್ಲಿ ಸಣ್ಣ ಸಣ್ಣ ಯಾಂತ್ರಿಕರಣಗಳನ್ನು ಉಪಯೋಗಿಸಿ ಇಳಿಜಾರು ಭಾಗದಲ್ಲೂ ಸಹ ಉಪಯೋಗಿಸಿ ಕಾರ್ಯ ಚಟುವಟಿಕೆಗಳನ್ನು ನಡೆಸುವ ಅವಕಾಶ ಇದೆ ಎಂದು ಭರವಸೆ ನೀಡಿರುತ್ತಾರೆ.

ಅದಾದ ನಂತರ ಇಂಟನ್ರ್ಯಾಷನಲ್ ಕಾಫಿ ಆರ್ಗನೈಸೇಷನ್ ಕಚೇರಿಗೆ ಡಾಕ್ಟರ್ ಹೆಚ್.ಟಿ.ಮೋಹನ್ ಕುಮಾರ್ ರವರು ಭೇಟಿ ಕೊಟ್ಟು ಅಲ್ಲಿಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ಪಡೆದಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ