October 5, 2024

ದಿವಂಗತ ದಯಾನಂದ ನಾಯಕ್ ಅವರು ಅತ್ಯಂತ ಸರಳ, ಸಹೃದಯ, ಸಮಚಿತ್ತದ ಸಾರ್ಥಕ ಬದುಕು ನಡೆಸಿ ನಮಗೆಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕನ್ನಡ ಪೂಜಾರಿ ಖ್ಯಾತ ವಾಗ್ಮಿ   ಹಿರೆಮಗಳೂರು ಕಣ್ಣನ್ ಅಭಿಪ್ರಾಯಿಸಿದರು.

ಅವರು ಮೂಡಿಗೆರೆ ಜೇಸಿ ಭವನದಲ್ಲಿ ಹಮ್ಮಿಕೊಂಡಿದ್ದ ದಿ. ಉಲ್ಲಾಳ ದಯಾನಂದ ನಾಯಕರ ಜನ್ಮ ಶತಾಭ್ದಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಮನುಷ್ಯನಲ್ಲಿ ಸಮಾಜ ಕಟ್ಟುವ ಸುಗುಣಗಳಿರಬೇಕು. ರಾಮನ ಅದರ್ಶ ಪರಂಪರೆ ಇರಬೇಕು.  ಮತ್ಸರ ಬಿಟ್ಟು ಸಮಾಜ ಬೆಳಸಬೇಕು ಎಂಬ ದ್ಯೇಯದೊಂದಿಗೆ ದಯಾನಂದ ನಾಯಕರು ಜಿಲ್ಲೆಯಲ್ಲಿ, ರಾಜ್ಯದಲ್ಲಿ ಅನೇಕ ನಾಯಕರನ್ನು ಹುಟ್ಟು ಹಾಕಿದರು ಎಂದರು.

ವಿಧಾನಪರಿಷತ್ ಉಪಸಭಾಪತಿ ಎಂಕೆ ಪ್ರಾಣೇಶ್ ಮಾತನಾಡಿ. ದಯಾನಂದ ನಾಯಕರ ಬಗ್ಗೆ ಮಾತನಾಡುವುದು ಸೂರ್ಯನಿಗೆ ಬೆಟ್ಟು ಮಾಡಿದಷ್ಷು ಸಮ. ವ್ಯಾಪಾರಕ್ಕಾಗಿ ಬಂದವರು. ತನ್ನ ಕನಿಷ್ಠ ಜೀವನಕ್ಕೆ ಮಾತ್ರ ಉಳಿಸಿಕೊಂಡು ಉಳಿದೆಲ್ಲವನ್ನು ಸಮಾಜಕ್ಕೆ ದಾನ ಮಾಡಿದವರು. ಜೀವನದ ದಾರಿ ಹೇಗೆ ನಡೆಸಬೇಕು ಎಂಬ ಸಂದರ್ಭದಲ್ಲಿ ಸಂಸ್ಕಾರ ನೀಡುವ ಶಿಕ್ಷಣ ಕೊಡಿಸಿದರು. ಸಮಾಜದಲ್ಲಿ ಯವಕರಲ್ಲಿ ದೇಶಾಭಿಮಾನ ಮೂಡಿಸುವ ಕೆಲಸದ ಜೋತೆಗೆ ಸಿದ್ದಾಂತದಲ್ಲಿ ರಾಜಿ ಅಗದೆ ಜಾತಿ ಮತವನ್ನು ಮೀರಿ ದೇಶಕ್ಕೆ ಏನನ್ನು ಕೊಡಬೇಕು ಎಂಬ ಮನಸ್ಸಿನ ಯುವ ಪೀಳಿಗೆ ತಯಾರು ಮಾಡಿದರು.  ರಾಜಕಾರಣದಲ್ಲಿ ವಯಕ್ತಿಕತೆ ಬೇಡವೆ ಬೇಡ  ನಿಸ್ವಾರ್ಥವಾಗಿ ಬದುಕೋಣ ಎಂದು ತೋರಿಸಿದವರು ಎಂದರು.

ಮಾಜಿ ಸಚಿವ  ಬಿಎಲ್ ಶಂಕರ್ ಮಾತನಾಡಿ ; ದಯಾನಂದ ನಾಯಕರು  ಸಂಘಟನೆಗಾಗಿ ದುಡಿದವರು. ರಾಜಕೀಯಕ್ಕಾಗಿ ಅಸೆಪಟ್ಟವರಲ್ಲ. ರಾಷ್ಟಮಟ್ಟದ ಸಂಪರ್ಕ ಇದ್ದರು ಅದನ್ನ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಿಲ್ಲ. ಕುಶಬಾವು ಠಾಕ್ರೆ. ಯಡಿಯೂರಪ್ಪ. ವಾಜಪೇಯಿ. ಅಡ್ವಾಣಿಯವರ ಸಂಪರ್ಕವನ್ನು ತನಗಾಗಿ ಬಳಸದೆ ಸಮಾಜಕ್ಕಾಗಿ ಬಳಸಿಕೊಂಡವರು. ಸಂಘಕ್ಕಾಗಿ ತುರ್ತು ಪರಿಸ್ಥಿತಿ. ಸಂಘವನ್ನು ನೀಷೇದಿಸಿದಾಗ ಸೇರಿದಂತೆ ಮೂರು ಭಾರಿ ಸಂಘಟನೆಗಾಗಿ ಜ್ಯೆಲು ಸೇರಿದ್ದರು. ಎಲ್ಲಾ ಸಂಘಟನೆಯಲ್ಲು ಒಳ್ಳೆಯವರು ಇರಬೇಕು ಎನ್ನುವ ಅಭಿಪ್ರಾಯ ನಾಯಕರು ಹೊಂದಿದ್ದರು. ಅವರ ಜೀವನ ಆದರ್ಶವನ್ನು ಇಂದಿನ ಪೀಳಿಗೆ ಅಳವಡಿಸಿಕೊಳ್ಳುವ ತುರ್ತು ಇದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಅ.ಸಾ. ನಿರ್ಮಲ್ ಕುಮಾರ್. ಎಂ.ಅರ್ ಜಗದೀಶ್ ಉಪಸ್ಥಿತರಿದ್ದರು. ಎನ್.ಎಲ್ ಸುಂದರೇಶ್ವರ್ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ದಯಾನಂದ ನಾಯಕ್ ಅವರ ಧರ್ಮಪತ್ನಿ ಸುಮತಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಎಂ.ಆರ್. ಜಗದೀಶ್ ಸ್ವಾಗತಿಸಿದರು,  ಕೆಂಜಿಗೆ ಕೇಶವ್ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.ಬಿ.ಎನ್. ಮನಮೋಹನ್ ವಂದಿಸಿದರು, ಸುಂದರೇಶ್ ಕೊಣಗೆರೆ ನಿರೂಪಿಸಿದರು. ಕುಮಾರಿ ತನ್ಮಯಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಶ್ರೀಮತಿ ರೇಖಾ ಪ್ರೇಮ್ ಕುಮಾರ್ ಅವರ ವಂದೇಮಾತರಂ ಗೀತೆಯೊಂದಿಗೆ ಸಮಾಪ್ತಿಗೊಂಡಿತು.

ಪಕ್ಷಾತೀತವಾಗಿ ನೂರಾರು ಸಂಖ್ಯೆಯ ದಯಾನಂದ ನಾಯಕ್ ಅವರ ಅಭಿಮಾನಿಗಳು, ಕುಟುಂಬ ವರ್ಗದವರು, ಸಂಘಪರಿವಾರದ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ