ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವ 3000 ಉದ್ಯೋಗಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ದೇಶವ್ಯಾಪಿ ಇರುವ ಎಲ್ಲ ಬ್ರ್ಯಾಂಚ್ ಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಯ ಹೆಸರು- ಅಪ್ರೆಂಟಿಸ್
ಒಟ್ಟು ಹುದ್ದೆಗಳು– 3,000
ವಯೋಮಿತಿ: 20 ರಿಂದ 28 ವರ್ಷದ ಒಳಗಿನವರು ಅರ್ಜಿ ಸಲ್ಲಿಸಬಹುದು
ವಯೋಮಿತಿ ಸಡಿಲಿಕೆ
ಎಸ್ಎಸಿ, ಎಸ್ಟಿಗೆ 5 ವರ್ಷಗಳು ಸಡಿಲಿಕೆ
ಒಬಿಸಿ, ಜನರಲ್ 3 ವರ್ಷಗಳು
ವಿಶೇಷ ಚೇತನರಿಗೆ 10 ವರ್ಷಗಳು ಸಡಿಲಿಕೆ
ವಿದ್ಯಾರ್ಹತೆ:ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು
ಆಯ್ಕೆ ಪ್ರಕ್ರಿಯೆ
ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಮೆರಿಟ್ ಲಿಸ್ಟ್ ಸಿದ್ಧ ಪಡಿಸಲಾಗುತ್ತದೆ
ಟೆಸ್ಟ್ ನಡೆಸಲಾಗುತ್ತದೆ
ದಾಖಲೆ ಪರಿಶೀಲನೆ
ಸಂಸ್ಥೆಯಿಂದ ಆಯ್ಕೆ ಮಾಡಲಾದ ಬ್ರ್ಯಾಂಚ್ ಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ ಅರ್ಜಿ ಶುಲ್ಕ ಇರಲ್ಲ
ಜನರಲ್, ಒಬಿಸಿ ಸೇರಿ ಎಲ್ಲರಿಗೂ- 500 ರೂಪಾಯಿಗಳು
ಆನ್ಲೈನ್ ಅರ್ಜಿ ಆರಂಭ– ಸೆಪ್ಟೆಂಬರ್ 21
ಅರ್ಜಿ ಹಾಕಲು ಕೊನೆ ದಿನ– ಅಕ್ಟೋಬರ್ 04