October 5, 2024
ಚಿಂತನೆ ನಡೆಸಿದಾಗ ಮಾತ್ರ ಮನುಷ್ಯ ಕ್ರೀಯಾಶೀಲತೆ ಹೊಂದುತ್ತಾನೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಬಣಕಲ್ ಕಸಾಪದ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.’ ಕರ್ನಾಟಕ ಸುವರ್ಣ ಮಹೋತ್ಸವ ಪ್ರಯುಕ್ತ ಪ್ರತಿ ಜಿಲ್ಲೆ, ತಾಲ್ಲೂಕು ಹಾಗೂ ಪ್ರತಿ ಗ್ರಾಮಗಳಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮ ನಡೆಸಲು ಚಿಂತನೆ ಮಾಡಲಾಗಿದೆ’ಎಂದರು.
ಯುರೇಕಾ ಆಕಾಡೇಮಿಯ ಅಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ’ಯಾವುದೇ ಕೆಲಸವನ್ನು ನಾಯಕನ ಜತೆಗೆ ತಂಡವಾಗಿ ಕೆಲಸ ನಿರ್ವಹಿಸಿದರೆ ಎಲ್ಲವೂ ಕೆಲಸಗಳು ಸುಲಭದಲ್ಲಿ ನಿರ್ವಹಿಸಬಹುದು’ಎಂದರು.
ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ ಗೌಡ ಮಾತನಾಡಿ’ಬಣಕಲ್ ನಲ್ಲಿ ಕಸಾಪದ ತಿಂಗಳ ಸಾಹಿತ್ಯ ಬೆಳೆಯಬೇಕಾದರೆ ಮೋಹನ್ ಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ದೀಪಕ್ ದೊಡ್ಡಯ್ಯ,ಮಗ್ಗಲಮಕ್ಕಿ ಗಣೇಶ್ ಸೇರಿದಂತೆ ಹಲವರ ಪರಿಶ್ರಮ  ಅಪಾರವಾಗಿದೆ ಎಂದು ಸ್ಮರಿಸಿದರು.
ಸ್ಥಾಪಕ ಅಧ್ಯಕ್ಷ  ಪೂರ್ವಾಧ್ಯಕ್ಷ ಸುರೇಶ್ ಎಸ್.ಶೆಟ್ಟಿ, ಟಿ.ಎಂ.ಆದರ್ಶ್,ಮುಖ್ಯ ಶಿಕ್ಷಕ ಜಿ.ಎಚ್.ಶ್ರೀನಿವಾಸ್, ಮಗ್ಗಲಮಕ್ಕಿಗಣೇಶ್, ಶಾಂತಕುಮಾರ್, ಟಿ.ಎಂ.ಗಜೇಂದ್ರ, ಎಲ್.ಬಿ.ರಮೇಶ್, ಬಿ.ಕೆ .ದಿನೇಶ್, ಝರೀನಾ, ಬಿ.ಶಿವರಾಮ ಶೆಟ್ಟಿ, ಬಿ.ಎಂ.ಶಂಕರ್, ಎಲ್.ಬಿ.ಲೋಕೇಶ್  ಮಾತನಾಡಿದರು.
ನಿರ್ಗಮಿತ ಅಧ್ಯಕ್ಷ ಟಿ.ಎಂ.ಆದರ್ಶ್ ಅವರು ನೂತನ ಅಧ್ಯಕ್ಷ ಬಿ.ಕೆ. ಲೋಕೇಶ್ ಅವರಿಗೆ ಧ್ವಜಾ ನೀಡುವ  ಮೂಲಕ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಅನಿತಾ ಜಗದೀಪ್,ವಿಶಾಲನಾಗರಾಜ್,ಭಕ್ತೇಶ್, ವಸಂತ್ ಹಾರ್ಗೋಡು, ಸಂಪತ್ ಬೆಟ್ಟಗೆರೆ ,ನಾಟ್ಯರಂಜಿತ್,ಸಂಜಯ್ ಗೌಡ,ಸ್ವಾತಿ ನವೀನ್, ಆರೀಫ್, ಹೊರಟ್ಟಿ ರಘು,ಸಂಜಯ್ ಗೌಡ,ಬಕ್ಕಿ ಮಂಜುನಾಥ್,ರಾಮಚಂದ್ರ,ಬಿ.ಎಸ್.ವಿಕ್ರಂ,ಬಿ.ಕೆ.ದಿನೇಶ್,ಯತೀಶ್ ಕುಮಾರ್,ಶರತ್ ಫಲ್ಗುಣಿ ಮತ್ತಿತರರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ