October 5, 2024

ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಶಕ್ತಿಗಿಂತ ಯುಕ್ತಿ ಮನೋಸ್ಥೈರ್ಯ ಮುಖ್ಯವಾಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ನುಡಿದರು.
 ಶಾಲಾಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಸಂತಜೋಸೆಫ್ .ಪೂ.ಕಾಲೇಜು ಆವರಣದಲ್ಲಿ ಇಂದು ಮತ್ತು ನಾಳೆ ಆಯೋಜಿಸಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ 2024-25ನೆಯ ಸಾಲಿನರಾಜ್ಯಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು.

ಚುರುಕಿನ ಆಟವಾದ ಟಿ.ಟಿ. ಅತಿವೇಗದಲ್ಲಿ ಗಮನ ಸೆಳೆಯುತ್ತದೆ. ಗ್ರಾಮೀಣ ಭಾಗದಲ್ಲಿ ಸ್ವಲ್ಪ ಕಡಿಮೆ ಇದ್ದರೂ ನಗರ, ಪಟ್ಟಣ ಪ್ರದೇಶದಲ್ಲಿ ಹೆಚ್ಚು ಜನಪ್ರಿಯ. ಆಟಗಳ ಸರದಾರ ಇದು. ಖಾಸಗಿ ಕ್ಲಬ್ಗಳಲ್ಲಿ ಮನರಂಜನೆಯಾಗಿ ಆಡಲಾಗುತ್ತದೆ ಎಂದ ತಮ್ಮಯ್ಯ, ಶಕ್ತಿಗಿಂತ ಇಲ್ಲಿ ಯುಕ್ತಿ ಮುಖ್ಯ. ಆಟಗಾರ ಪಾದರಸದಂತೆ ಚಲಿಸಬೇಕಾಗುತ್ತದೆ. ಏಕಾಗ್ರತೆ ಕಲಿಸುತ್ತದೆ. ಆಯಾಸವಾದರೂ ದೇಹಕ್ಕೆ ಸಹಕಾರಿ. ಮಾನಸಿಕ ಒತ್ತಡ ನಿವಾರಣೆಯಲ್ಲಿ ಪರಿಣಾಮಕಾರಿ ಎಂದರು.

1926 ಸೆಪ್ಟಂಬರ್ 23ರಂದು ಟೇಬಲ್ ಟೆನ್ನಿಸ್ ಕ್ರೀಡೆ ಪ್ರವರ್ಧಮಾನಕ್ಕೆ ಬಂದಿದೆ. ದಿನವನ್ನು ವಿಶ್ವ ಟೇಬಲ್ ಟೆನ್ನಿಸ್ ದಿನವಾಗಿ ಎಲ್ಲೆಡೆ ಸಂಭ್ರಮಿಸಲಾಗುತ್ತಿದೆ. ಇದೇ ದಿನ ರಾಜ್ಯಮಟ್ಟದ ಪಂದ್ಯಾವಳಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ ಎಂದರು.

ಕಾಮನ್ವೆಲ್ತ್ ಕ್ರೀಡೆಯಲ್ಲಿ ಭಾರತೀಯ ಟಿ.ಟಿ. ಕ್ರೀಡಾಪಟುಗಳು 6ಕಂಚು, 1ಬೆಳ್ಳಿಪದಕ ಗಳಿಸಿದ್ದರು. ಮೋನಿಕಾಭಾತ್ರಾ, ಕರ್ನಾಟಕದವರೇ ಆದ ಅರ್ಚನಾಕಾಮತ್ ಭಾಗವಹಿಸಿ ಹೆಮ್ಮೆ ತಂದಿದ್ದಾರೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವುದು ಮುಖ್ಯ. ಕ್ರೀಡಾ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯಪಾಲನೆಗೆ ಸಹಕಾರಿಯಾಗುತ್ತದೆ ಎಂದ ಶಾಸಕ ತಮ್ಮಯ್ಯ, ಕ್ರೀಡಾಪಟುಗಳ ಸಾಮಥ್ರ್ಯವನ್ನು ಗುರುತಿಸಿ ಪಾರದರ್ಶಕವಾಗಿ ತೀರ್ಪು ನೀಡುವುದರಿಂದ ಅರ್ಹರರನ್ನು ಗೌರವಿಸುವಂತಾಗುವುದೆಂದರು.

ಡಿಡಿಪಿಯು ಪುಟ್ಟಾನಾಯ್ಕ, ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರರ ಸಂಘದ ಜಿಲ್ಲಾಧ್ಯಕ್ಷೆ ತಸ್ಲೀಮಾಫಾತೀಮಾ, ಕಾರ್ಯದರ್ಶಿ ತೇಜಸ್ವಿನಿ, ತೀರ್ಪುಗಾರ ಮೈಸೂರಿನ ಕಾಂತರಾಜ್, ಟ್ರೋಫಿ ದಾನಿ ಜಯಶ್ರೀ ಮತ್ತಿತರರು ಮಾತನಾಡಿದರು.

ಪ್ರಾಚಾರ್ಯರ ಸಂಘದ ಖಜಾಂಚಿ ಎಚ್.ಎಂ.ನಾಗರಾಜರಾವ್ ಸ್ವಾಗತಿಸಿ, ಉಪಾಧ್ಯಕ್ಷ ವಿರೂಪಾಕ್ಷ ವಂದಿಸಿದರು. ತಾಲ್ಲೂಕು ಪ್ರತಿನಿಧಿ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಸಂತಜೋಸೆಫರ ಶಿಕ್ಷಣಸಂಸ್ಥೆಯ ವ್ಯವಸ್ಥಾಪಕಿ ಸಿಸ್ಟರ್ ಆ್ಯನಿ, ಪ್ರಾಂಶುಪಾಲೆ ಸಿಸ್ಟರ್ ಡಾ.ಸಿತಾರಾ ಜೋಸೆಫ್, .ಪೂ.ಶಿಕ್ಷಣ ಇಲಾಖೆಯ ವೀಕ್ಷಕರಾದ ನವೀನ್ ಮತ್ತು ಗುರುಪ್ರಸಾದ್ ಮತ್ತಿತರರು ವೇದಿಕೆಯಲ್ಲಿದ್ದರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಪಂದ್ಯಾವಳಿಯನ್ನು ವೀಕ್ಷಿಸಿ ಶುಭ ಹಾರೈಸಿದರು. 32ಜಿಲ್ಲೆಗಳ ಐದು ಯುವಕಐದು ಯುವತಿಯರು ಜೊತೆಗೆ ಇಬ್ಬರು ಕೋಚ್ ಸೇರಿದಂತೆ ಸುಮಾರು 400ಮಂದಿ ಎರಡುದಿನಗಳ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ