October 5, 2024

ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಸಾರ್ವಜನಿಕ ಮಹಾ ಗಣಪತಿಯ ವಿಸರ್ಜನೆ ಸೆಪ್ಟಂಬರ್ 19ರಂದು ಗುರುವಾರ ಅದ್ದೂರಿಯಾಗಿ ನಡೆಯಲಿದೆ ಎಂದು ಗಣಪತಿ ಸಮಿತಿ ಅಧ್ಯಕ್ಷ ಅನುಕುಮಾರ್ ತಿಳಿಸಿದರು.

ವಿಸರ್ಜನಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು ಗಣೇಶೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು, ಧಾರ್ಮಿಕ ಪ್ರವಚನಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಗಿದ್ದು 13 ನೇ ದಿನವಾದ ಸಪ್ಟೆಂಬರ್ 19 ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ನಂತರ ವಿದ್ಯುತ್ ದೀಪ ಅಲಂಕೃತವಾದ ಭವ್ಯ ಮಂಟಪದಲ್ಲಿ ಗಣಪತಿ ವಿಗ್ರಹ ಕುಳ್ಳಿರಿಸಿ ಮೆರವಣಿಗೆ ಮಾಡಲಾಗುವುದು ಎಂದರು.

ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಹಳೇ ಮೂಡಿಗೆರೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಕೆ ಎಂ ರಸ್ತೆ ಮುಖಾಂತರ ಸಂಚರಿಸಿ ರಾಮೇಶ್ವರ ಮೆಡಿಕಲ್ ಮುಂಭಾಗದ ರಸ್ತೆಯಲ್ಲಿ ಎಂ ಜಿ ರಸ್ತೆ ಪೊಲೀಸ್ ಸ್ಟೇಷನ್ ಸರ್ಕಲ್ ಶೆಟ್ರು ಬೀದಿ ಮುಖಾಂತರ ಕೆ ಎಂ ರಸ್ತೆ ಯಲ್ಲಿ ಸಂಚರಿಸಿ ಬಸ್ ಸ್ಟ್ಯಾಂಡ್  ಸರ್ಕಲ್ ನಂತರ ಗೆಂಡಹಳ್ಳಿ ಬೇಲೂರು ರಸ್ತೆ ಮೂಲಕ ಸುಂಡೆ ಕೆರೆ ಹಳ್ಳದಲ್ಲಿ ವಿಸರ್ಜಿಸಲಾಗುವುದು.

ಈ ವಿಸರ್ಜನ ಮೆರವಣಿಗೆಗೆ ಮೆರಗು ತರುವ ದೃಷ್ಟಿಯಿಂದ ನಾದಸ್ವರ ಡೊಳ್ಳು ಕುಣಿತ , ಕೀಲು ಕುದುರೆ, 25ಕ್ಕೂ ಹೆಚ್ಚು ನಾಸಿಕ್ ಡೋಲು ತಂಡ , ಸ್ಥಳೀಯ ನಿಸಾನಿ, ಕೇರಳದ ಚಂಡೆ, ತಾಯ್ಯಾಮ್ ಭಾಣ ಬಿರುಸುಗಳೊಂದಿಗೆ ಸ್ವಾಮಿ ಕೊರಗಜ್ಜ , ಹುಲಿ ಕುಣಿತ , ಕುಣಿತ ಭಜನೆ, ಟ್ಯಾಲೋ ಸೇರಿದಂದೆ ಇನ್ನು ಹಲವು ಸ್ತಬ್ದ ಚಿತ್ರಗಳು ಇರುತ್ತದೆ.

ವಿಸರ್ಜನ ಸಂದರ್ಭದಲ್ಲಿ ತಾಲೂಕಿನಾದ್ಯಂತ ಸುಮಾರು ಇಪತ್ತು ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ಗುರಿ ಇಟ್ಟುಕೊಂಡಿದ್ದು, ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆಗೆ  ಎಲ್ಲರನ್ನು ಆಹ್ವಾನಿಸಿದರು.

ಈ ವಿಷರ್ಜನೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಸಮಿತಿಯ ಎಲ್ಲಾ ಸದಸ್ಯರು ಮೆರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಪಟ್ಟಣದ ರಸ್ತೆಗಳು ಕಿರಿದಾಗಿರುವುದರಿಂದ ಟ್ರಾಫಿಕ್ ಸಮಸ್ಯೆ ಆಗಬಹುದು ಹಾಗಾಗಿ ಪೊಲೀಸ್ ಇಲಾಖೆಯ ಸಹಕಾರ ಸಹ ಹೆಚ್ಚು ನಿರೀಕ್ಷಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ