October 5, 2024

ಜೆಸಿಐ ಗೋಣೀಬೀಡು ಹೊಯ್ಸಳ ವತಿಯಿಂದ ಹಮ್ಮಿಕೊಂಡಿದ್ದ ಜೇಸಿ ಸಪ್ತಾಹ-2024ರ ಸಮಾರೋಪ ಸಮಾರಂಭ ಭಾನುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಜೆಸಿಐ ವಲಯಾಧ್ಯಕ್ಷ ಆಶಾ ಜೈನ್ ಮಾತನಾಡಿ ಹೆಚ್ಚು ಸ್ನೇಹಿತರನ್ನು ಸಂಪಾದಿಸುವುದು ಸಮಾಜದಲ್ಲಿ ಯುವ ಸಮುದಾಯದ ಶ್ರೀಮಂತಿಕೆಯಾಗಿದೆ. ಜೆಸಿಐ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಾಲಾ ಕಾಲೇಜುಗಳಲ್ಲಿ ಕಲಿತ ಪಾಠಕ್ಕಿಂತ ಹೆಚ್ಚಿನ ಪಾಠ ಸಮಾಜ ಕಲಿಸಲಿದೆಎಂದು ತಿಳಿಸಿದರು.

ಜೆಸಿಐ ಗೋಣೀಬೀಡು ಹೊಯ್ಸಳ ಸ್ಥಾಪಾಕಾಧ್ಯಕ್ಷ ಡಾ.ಮೋಹನ್‍ರಾಜಣ್ಣ ಮಾತನಾಡಿ ಯುವ ಸಮುದಾಯಕ್ಕೆ ನಾಯಕತ್ವದ ಗುಣಲಕ್ಷಣಗಳನ್ನು ಜೆಸಿಐ ಕಲಿಸಿಕೊಡುತ್ತಿದೆ. ಸಮಾಜ ಸೇವೆಗೆ ಯುವಕರು ಧುಮುಕಿದಾಗ ಅವರ ಪೋಷಕರ ದ್ಯೇಯೋದ್ದೇಶಗಳು ಈಡೇರಿದಂತಾಗುತ್ತದೆ. ಇತರರಿಗೆ ಸಹಾಯ ಮಾಡಿದಾಗ ನಮಗೆ ನೆಮ್ಮದಿ ಸಿಕ್ಕಂತಾಗುತ್ತದೆ. ಸಹಾಯ ಪಡೆದವರು ನಮಗಾಗಿ ದೇವರಲ್ಲಿ ಬೇಡಿಕೊಳ್ಳುವುದರಿಂದ ನಮ್ಮಕೀರ್ತಿ ಮತ್ತಷ್ಟು ಬೆಳೆಯುತ್ತದೆ ಎಂದು ತಿಳಿಸಿದರು.

ಜೆಸಿಐ ಅಧ್ಯಕ್ಷ ಹೆಚ್.ಜಿ.ಆದರ್ಶ, ನಿಕಟಪೂರ್ವ ಅಧ್ಯಕ್ಷ ಸಿ.ಎಸ್.ಚಂದ್ರಶೇಖರ್, ಕಾರ್ಯದರ್ಶಿ ಬಿ.ಎಂ.ಜಗತ್, ವೈ.ಬಿ.ಸುಂದರೇಶ್, ಎಂ.ಸಿ.ಗಣೇಶ್ ಗೌಡ, ಯೋಗೇಶ್‍ಕುಮಾರ್,ಸತ್ಯಕುಮಾರ್, ರವಿಕುಮಾರ್, ರಂಜಿತ್, ಪೂರ್ಣೇಶ್, ಭರತ್, ಜ್ಯೋತಿ, ಶ್ವೇತಾ, ದರ್ಶನ್,ದಿಲೀಪ್, ಸಂತೋಷ್‍, ಚೇತನ್‍, ಅಪ್ಪಣ್ಣ ಮತ್ತಿತರರಿದ್ದರು.

ಇದೇ ಸಂದರ್ಭದಲ್ಲಿ   ನಿವೃತ್ತ ಪಶುಪಾಲನಾ ಅಧಿಕಾರಿ ಅಪ್ಪಣ್ಣ ಅವರನ್ನು ಸನ್ಮಾನಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ