October 5, 2024

ಮೂಡಿಗೆರೆ ತಾಲ್ಲೂಕಿನ ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘ 2023-24ನೇ ಸಾಲಿನಲ್ಲಿ 46.09 ಲಕ್ಷ ಲಾಭ ಗಳಿಸಿದೆ’ಎಂದು ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ಕಲ್ಲೇಶ್ ಹೇಳಿದರು.

ಭಾನುವಾರ ಪಟ್ಟಣದ ಚರ್ಚ್ ಹಾಲ್ ನಲ್ಲಿ  ನಡೆದ ಸಂಘದ 48ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.’

ನಮ್ಮ ಸಂಘದಲ್ಲಿ 2891 ಸದಸ್ಯರಿದ್ದು, ಸಂಘದಲ್ಲಿ 151ಕೋಟಿ ವಾರ್ಷಿಕ ವಹಿವಾಟು ನಡೆಸಲಾಗಿದೆ. ಕೃಷಿಯೇತರ ಸಾಲವನ್ನು1081 ಜನರಿಗೆ 2023-24 ಸಾಲಿನಲ್ಲಿ 36.53 ಲಕ್ಷ ಸಾಲ ವಿತರಣೆ ಮಾಡಿದ್ದೇವೆ. ಕೊಟ್ಟಿಗೆಹಾರದಲ್ಲಿ 44.05ಲಕ್ಷ ವ್ಯಯಿಸಿ ಹೊಸ ಗೋದಾಮು ಕಟ್ಟಿ ಇಂದು ಅದರ ಉದ್ಘಾಟನೆ ನಡೆಸಿದ್ದೇವೆ. ಮುಂದೆ ಬಾಳೂರು,ಹೆಗ್ಗುಡ್ಲುವಿನಲ್ಲಿ ಆಹಾರ ಗೋದಾಮು ಕಟ್ಟಲು ಸಂಘ ನಿಶ್ಚಯಿಸಿದೆ.ಸರ್ವ ಸದಸ್ಯರ,ಧಾನಿಗಳ ಸಹಕಾರದಿಂದ ಸಂಘ ಅಭಿವೃದ್ದಿಗೆ ಕಾರಣವಾಗಿದೆ’ಎಂದರು.        ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳಸೇ ಬಿ. ಶಿವಣ್ಣ ಮಾತನಾಡಿ’ನನಗೆ 14 ಸಹಕಾರ ಸಂಘಗಳು ನಮ್ಮ ಬ್ಯಾಂಕ್ ವ್ಯಾಪ್ತಿಗೆ ಬರುತ್ತವೆ.ಮಂಡಳಿ ಸಭೆ ಕರೆದು ಸಹಕಾರ ಸಂಘಗಳಿಗೆ  ಅನುದಾನ ನೀಡಲು ಪ್ರಯತ್ನಿಸಲಾಗುವುದು ಎಂದರು.

ನಿರ್ದೇಶಕ ಟಿ.ಎಂ.ಗಜೇಂದ್ರ ಮಾತನಾಡಿ’ದಶಕಗಳ ಹಿಂದೆ ಸರ್ವ ಸದಸ್ಯರು ಶ್ರಮಿಸಿದ ಫಲದಿಂದ ಸಹಕಾರ ಸಂಘ ಮೇಲ್ಮಟ್ಟಕ್ಕೆ ಬಂದಿದೆ.ಸದಸ್ಯರು ಅಭಿಮಾನವಿಟ್ಟು ಯಾವುದೇ ಬೇಡಿಕೆ ಮಾಡದೇ ಸಂಘವನ್ನು ಮುನ್ನಡೆಸುತ್ತಿದ್ದಾರೆ.ಕಳೆದ ವರ್ಷ ಶೇ10 ಡಿವಿಡೆಂಟ್ ಅನ್ನು ಮುಂದುವರೆಸಲಾಗಿದೆ ‘ಎಂದರು.

ಸದಸ್ಯ ಬಿ.ಶಿವರಾಮ ಶೆಟ್ಟಿ ಮಾತನಾಡಿ’ ಸಂಘವು ಮುಂದಿನ ವರ್ಷದಲ್ಲಿ ಎಸ್ಸೆಸ್ಸೆಲ್ಸಿ,ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.

ಸಂಘದಲ್ಲಿ ಶ್ರಮಿಸಿದ ಸರ್ವ ನಿರ್ದೇಶಕರುಗಳನ್ನು ಸನ್ಮಾನಿಸಲಾಯಿತು.ಸಂಘದ  ವಾರ್ಷಿಕ ವರದಿಯನ್ನು ಕಾರ್ಯನಿರ್ವಾಹಣಾಧಿಕಾರಿ ಜಿ.ಪಿ.ನಿಶಾಂತ್ ವಾಚಿಸಿದರು.

ಸಭೆಯಲ್ಲಿ ಮೂಡಿಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಳಸೆ ಶಿವಣ್ಣ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜಿ.ಕೆ.ದಿವಾಕರ್, ಜಿಲ್ಲಾ ಬ್ಯಾಂಕ್ ಮೇಲ್ವಿಚಾರಕ ಯು.ಸಿ.ಪ್ರಯಾಗ್,ಸಂಘದ ಉಪಾಧ್ಯಕ್ಷೆ ಎಚ್.ಕೆ.ಮಮತ,ನಿರ್ದೇಶಕರಾದ ಬಿ.ಎಂ.ಭರತ್,ಎ.ಆರ್.ಅಭಿಲಾಷ್,ರಂಗನಾಥ್,ಬಿ.ಎಸ್.ವಿಕ್ರಂ,ಬಿ.ಎಂ.ಸತೀಶ್, ಜಿ.ಬಿ.ಲಕ್ಷ್ಮಿ,ದಿಲ್ ದಾರ್ ಬೇಗಂ, ಬಿ.ಆರ್.ಚಂದ್ರಶೇಖರ್, ಬಿ.ಎಲ್.ಅಶ್ವಥ್,ಕೆ.ಕೆ.ಯತೀಶ್,ನಾರಾಯಣ್ ಗೌಡ, ಎ.ಬಿ.ನಾಗೇಶ್ ಗೌಡ, ಕೆ.ಪಿ.ರಮೇಶ,ಬಿ.ಎ.ಪ್ರದೀಪ್,ಸಿಇಒ ಜಿ.ಪಿ.ನಿಶಾಂತ್, ಸಿಬ್ಬಂದಿಗಳು ಸದಸ್ಯರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ