October 5, 2024

ರಾಜಕೀಯ ಸೇರಿದಂತೆ ವಿವಿಧ ರಂಗಗಳಲ್ಲಿ ಸ್ವಾರ್ಥತೆ ತುಂಬಿ ತುಳುಕಾಡುವ ನಡುವೆ ಜೇಸಿಯಂತಹ ಸಂಸ್ಥೆಯಲ್ಲಿ ನಿಸ್ವ್ವಾರ್ಥ ಭಾವನೆ ಅಳವಡಿಸಿಕೊಂಡು ಸಮಾಜಮುಖಿ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.


ಅವರು ಸೋಮವಾರ ಮೂಡಿಗೆರೆ ಪಟ್ಟಣದ ಜೇಸಿ ಭವನದಲ್ಲಿ ಜೇಸಿ ಸಂಸ್ಥೆ ವತಿಯಿಂದ 7 ದಿನ ನಡೆಯುವ ಪ್ರೇರಣ ಜೇಸಿ ಸಪ್ತಾಹ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಭೂಮಿಯಲ್ಲಿ ಗಿಡ ಮರಗಳು, ಪ್ರಾಣಿ ಪಕ್ಷಿಗಳು, ಜೀವ ಸಂಕುಲಗಳ ಆಶ್ರಯದಾಯಕವಾಗಬೇಕಾದ ಮನುಷ್ಯ, ಸ್ವಾರ್ಥ ಭಾವನೆಯಿಂದ ತನ್ನ ಕರ್ತವ್ಯ ಮರೆಯುತ್ತಿದ್ದಾರೆ. ಇದು ಆಗಬಾರದು. ಪ್ರತಿಯೊಬ್ಬರೂ ಉತ್ತಮ ಸಮಾಜಕ್ಕಾಗಿ ಶ್ರಮಿಸಬೇಕು. ಒಂದು ಮಗು ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಹಾಗಾಗಿ ತಮ್ಮ ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿಲ್ಲಿಸಿ, ಇಲ್ಲಿನ ಸಂಸ್ಕøತಿ ಬಗ್ಗೆ ಅರಿವು ಮೂಡಿಸಬೇಕೆಂದು ಹೇಳಿದರು.

ಜೇಸಿ ಅಲ್ಯೂಮಿನಿ ಕ್ಲಬ್‍ನ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಎಸ್.ಕುಮಾರ್ ಮಾತನಾಡಿ, 7 ದಿನ ನಡೆಸುವ ವಿವಿಧ ಜನಪರವಾದ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಪಸರಿಸುವುದೇ ಜೇಸಿ ಸಪ್ತಾಹದ ಮೂಲ ಉದ್ದೇಶವಾಗಿದೆ. ನಮ್ಮ ವಲಯ ವ್ಯಾಪ್ತಿಯಲ್ಲಿ 60 ಕ್ಕೂ ಅಧಿಕ ಜೇಸಿ ಸಂಸ್ಥೆಗಳಿವೆ. ಆದರೆ ಜೇಸಿ ಸಪ್ತಾಹ ಕಾರ್ಯಕ್ರಮ ನಡೆಸುವುದು ಬೆರಳೆಣಿಕೆ ಮಾತ್ರ. ಸಪ್ತಾಹ ಕಾರ್ಯಕ್ರಮವನ್ನು ಮೂಡಿಗೆರೆ ಜೇಸಿ ಸಂಸ್ಥೆ ಪ್ರತಿ ವರ್ಷವೂ ಮಾಡಿಕೊಂಡು ಬಂದಿದ್ದು. ರಾಷ್ಟ್ರ ಮಟ್ಟದಲ್ಲಿ ಇಲ್ಲಿನ ಸಂಸ್ಥೆ ಹೆಸರುವಾಸಿಯಾಗಿದೆ ಎಂದು ಹೇಳಿದರು.


ಇದೇ ಸಂದರ್ಭದಲ್ಲಿ ಶತಾಯುಷಿಗಳು, ಮಾಜಿ ಯೋಧರು, ಸಹಕಾರ, ಕೃಷಿ,ಉದ್ಯಮ ಮುಂತಾದ ರಂಗದಲ್ಲಿ ಸೇವೆ ಸಲ್ಲಿಸಿದ 11 ಜೋಡಿ ಹಿರಿಯ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಸುಪ್ರಿತ್ ಕಾರ್‍ಬೈಲ್ ವಹಿಸಿದ್ದರು. ಜೇಸಿ ಸ್ಥಾಪಕ ಅಧ್ಯಕ್ಷ ಎನ್.ಎಲ್.ಸುಂದರೇಶ್ವರ್, ಪ.ಪಂ. ಸದಸ್ಯ ಪಿ.ಜಿ.ಅನುಕುಮಾರ್, ಲೇಡಿ ಜೇಸಿ ಅಧ್ಯಕ್ಷೆ ದಿವ್ಯ ಸುಪ್ರಿತ್, ಸ್ತಪಾಹದ ನಿರ್ದೇಶಕ ಸುದೀಪ್ ತ್ರಿಪುರ, ಶ್ರಾವ್ಯ ಉದಯ್, ನಿಶ್ಚಿತಾ ಯತೀಶ್, ಕವಿತಾ ಸಂತೋಷ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ