October 5, 2024

ಸೂಕ್ತ ರಸ್ತೆ ಮೂಲ ಸೌಲಭ್ಯಗಳಿಲ್ಲದ ಕಾರಣ 19 ವರ್ಷದ ಯುವಕನ ಶವವನ್ನು ಬಟ್ಟೆಯ ಸ್ಟ್ರೆಚರ್‌ನಲ್ಲಿ ಗ್ರಾಮಸ್ಥರು ಹೊತ್ತುಕೊಂಡು ಹೋಗಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊನೆಗೋಡು ಗ್ರಾಮದಲ್ಲಿ ನಡೆದಿದೆ.

ಬಟ್ಟೆ ಸ್ಟ್ರೆಚರ್‌ನಲ್ಲಿ ಶವ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಪರಿಶಿಷ್ಟ ಜಾತಿಗೆ ಸೇರಿದ ಅವಿನಾಶ್ ತೀವ್ರ ಅಸ್ವಸ್ಥರಾಗಿದ್ದರು. ಎಂಟು ಬುಡಕಟ್ಟು ಕುಟುಂಬಗಳು ವಾಸಿಸುವ ಕುಗ್ರಾಮದ ಅವರ ಸಂಬಂಧಿಕರು ಅವರನ್ನು ತಾತ್ಕಾಲಿಕ ಸ್ಟ್ರೆಚರ್‌ನಲ್ಲಿ ರಸ್ತೆ ಮಾರ್ಗದವರೆಗೆ ಹೊತ್ತಕೊಂಡು ಹೋಗಿ, ನಂತರ ಅಲ್ಲಿಂದ ಕಳಸ  ಆಸ್ಪತ್ರೆಗೆ ಸೇರಿಸಿದ್ದರು.  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವಿನಾಶ್ ಮೃತಪಟ್ಟಿದ್ದರು.

ಅವಿನಾಶ್ ಅವರ ದೇಹವನ್ನು ಹೊತ್ತ ಆಂಬುಲೆನ್ಸ್ ಕೆಲದೂರದವರೆಗೆ ಮಾತ್ರ ಬಂದಿತು. ಸರಿಯಾದ ರಸ್ತೆ ಇಲ್ಲದ ಕಾರಣ ಶವವನ್ನು ಆ್ಯಂಬುಲೆನ್ಸ್ ನಿಂದ ಇಳಿಸಿದ ಅವರ ಸಂಬಂಧಿಕರು ಮತ್ತೆ ಹೊತ್ತು ತಮ್ಮ ಗ್ರಾಮಕ್ಕೆ ನಡೆದರು.

ಶವವನ್ನು ಬಟ್ಟೆಯ ಸ್ಟ್ರೆಚರ್‌ನಲ್ಲಿ ಇರಿಸಿ ಊರಿಗೆ ಸಾಗಿಸಲಾಯಿತು. ಅಲ್ಲಿ ಅಂತಿಮ ವಿಧಿಗಳನ್ನು ನಡೆಸಲಾಯಿತು.

ಕೊನೆಗೋಡು ಗ್ರಾಮಸ್ಥರಿಗೆ, ಸಂಸೆ-ಎಸ್‌ಕೆ ಮೆಗಲ್ ರಸ್ತೆಯು ಹತ್ತಿರದ ಮೋಟಾರುರಸ್ತೆ ಮಾರ್ಗವಾಗಿದೆ, ಇದು ಅವರ ತಮ್ಮಗ್ರಾಮದಿಂದ 2 ಕಿ.ಮೀ. ನಡೆದುಕೊಂಡು ಹೋದರೆ ಈ ರಸ್ತೆ ತಲುಪಬಹುದಾಗಿದೆ. ಈ ನಡುವೆ ಮಳೆಗಾಲದಲ್ಲಿ ತುಂಬಿ ಹರಿಯುವ ಸಣ್ಣ ಹೊಳೆಗಳನ್ನು ದಾಟಬೇಕು. ತಮ್ಮ ಗ್ರಾಮವನ್ನು ಸಂಪರ್ಕಿಸಲು ಯಾವುದೇ ಗಟ್ಟಿಯಾದ ಸೇತುವೆಗಳಿಲ್ಲದ ಕಾರಣ ಈ ನದಿಗಳನ್ನು ದಾಟಲು ಅವರು ಕಾಲುದಾರಿಗಳನ್ನೇ ಅವಲಂಭಿಸಬೇಕಾಗಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ