October 5, 2024

ಕೋಲ್ಕತ್ತದ ತರಬೇತಿ ವೈದ್ಯೆಯ ಹತ್ಯಾಕೋರರನ್ನು  ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ವಿವಿಧ ಸಂಘ-ಸಂಸ್ಥೆಗಳು ಕರೆ ನೀಡಿದ್ಧ ಪ್ರತಿಭಟನೆಗೆ ನೂರಾರು ಸಂಖ್ಯೆಯಲ್ಲಿ ಮಹಿಳಾ ಮಣಿಯರು ಜಮಾವಣೆಗೊಂಡು ನಗರದ ತಾಲ್ಲೂಕು ಕಚೇರಿಯಿಂದ ಆಜಾದ್‍ಪಾರ್ಕ್ ವೃತ್ತದವರೆಗೆ ಶಾಂತಿಯುತ ಮೆರವಣಿಗೆ ನಡೆಸಿ ನೊಂದ ಯುವತಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಮೌನ ಮೆರವಣಿಗೆಯಲ್ಲಿ ಭಾರತೀಯ ವೈದ್ಯಕೀಯ ಸಂಘ, ಟೌನ್ ಮಹಿಳಾ ಸಮಾಜ, ಒಕ್ಕಲಿಗರ ಮಹಿಳಾ ಸಂಘ, ಚಿಕ್ಕಮಗಳೂರು ರೌಂಡ್ ಟೇಬಲ್, ಶ್ರೀ ವಾಸವಿ ಮಹಿಳಾ ಮಂಡಳಿ, ವಿಪ್ರ ಮಹಿಳಾ ಘಟಕ, ಕನ್ನಡಸೇನೆ, ರೈತ ಸಂಘ, ಗ್ರೀನ್ ಇಂಡಿಯಾ ಸೇರಿದಂತೆ 28 ಸಂಘಟನೆಗಳು ಮೆರವಣಿಗೆಯಲ್ಲಿ ಸಾಗಿ ವೈದ್ಯೆಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಇನ್ನರ್‍ವ್ಹೀಲ್ ಅಧ್ಯಕ್ಷೆ ಶಾಲಿನಿ ನಾಗೇಶ್ ಹತ್ಯೆಕ್ಕೊಳಗಾದ ತರಬೇತಿ ವೈದ್ಯ ಭವಿಷ್ಯದಲ್ಲಿ ಉನ್ನತ ವ್ಯಾಸಂಗ ಪೂರೈಸಿ ಅತ್ಯುತ್ತಮ ವೈದ್ಯರಾಗುವ ಆಕಾಂಕ್ಷೆ ಇದೀಗ ನೂಚ್ಚು ನೂರಾಗಿದೆ. ಈ ಪ್ರಕರಣದ ಹೆಣ್ಣುಮಕ್ಕಳ ಪಾಲಕರು ವೈದ್ಯಕೀಯ ವೃತ್ತಿಗೆ ಸೇರ್ಪಡೆಗೊಳಿಸಲು ಭಯಭೀತರಾಗಿದ್ದಾರೆ ಎಂದು ಹೇಳಿದರು.

ಮೊಂಬತ್ತಿ ಹಚ್ಚಿ ಶ್ರದ್ದಾಂಜಲಿ ಕೋರುವ ಬದಲು ಅತ್ಯಾಚಾರಿಗಳನ್ನು ಸಜೀವ ದಹನ ಮಾಡಬೇಕು. ದಯೆ, ದಾಕ್ಷಣ್ಯಗೆ ಎಡೆ ಮಾಡಿಕೊಡಬಾರದು. ರಾಜಕೀಯ ರಾಜೀ ಮಾಡದೇ ನೊಂದ ಕುಟುಂಬಕ್ಕೆ ನ್ಯಾ ಯ ಒದಗಿಸಲು ವಿಳಂಭ ಧೋರಣೆ ಅನುಸರಿಸಿದರೆ ಬಂಗಾಳದಲ್ಲಿ ನಡೆದಿರುವ ಪ್ರಕರಣ ಮುಂದೊಂದು ದಿನ ರಾಜ್ಯದಲ್ಲಿ ಸಂಭವಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರಸ್ತುತ ಹೆಣ್ಣುಮಕ್ಕಳು ಸ್ನೇಹಿತರ ಜೊತೆ ಓಡಾಡುವ ವೇಳೆ ಜಾಗೃತರಾಗಿರಬೇಕು. ಪಾಲಕರು ಕೂಡಾ ಮಕ್ಕಳ ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಅರಿಯಲು ಮುಂದಾಗಬೇಕು. ಹೆಣ್ಣುಮಕ್ಕಳ ಜಾಗೃತೆ ದೃಷ್ಟಿಯಿಂ ದ ಪ್ರತಿನಿತ್ಯ ಯಾರೊಂದಿಗೆ ಭೇಟಿ ಮಾಡುತ್ತಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಮಕ್ಕಳ ಪಾಲಕರು ಹೊಂದಬೇಕು ಎಂದು ಹೇಳಿದರು.

ಇನ್ನರ್‍ವ್ಹೀಲ್ ಉಪಾಧ್ಯಕ್ಷೆ ನಯನ ಸಂತೋಷ್ ಮಾತನಾಡಿ ಹೆಣ್ಣುಮಕ್ಕಳು ಮೊಬೈಲ್‍ಗಳಲ್ಲಿ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡುವಂತೆ, ಪೊಲೀಸ್ ಇಲಾಖೆಯ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ, ಜೊತೆಗೆ ಮೊಬೈಲ್‍ನ ಲೋಕೇಶನ್‍ನನ್ನು ಆನ್‍ಮಾಡಿಕೊಂಡರೆ ಸಂಕಷ್ಟದ ಸಮಯದಲ್ಲಿ ಕಂಡುಹಿಡಿಯ ಲು ಸಾಧ್ಯವಾಗಲಿದೆ ಎಂದು ಹೇಳಿದರು.

ಈ ಅತ್ಯಾಚಾರ ಪ್ರಕರಣದಿಂದ ದೇಶದ ಹೆಣ್ಣುಮಕ್ಕಳು ವೈದ್ಯಕೀಯ ವೃತ್ತಿ ಎಂದರೆ ಗಾಬರಿಗೊಂಡಿ ದ್ದಾರೆ. ಸಣ್ಣಪುಟ್ಟ ಬದುಕು ಕಟ್ಟಿಕೊಂಡು ತಜ್ಞ ವೈದ್ಯರಾಗಬೇಕೆಂಬ ಕನಸಿನ ಹೆಜ್ಜೆಯನ್ನಿಡುವ ಹೆಣ್ಣುಮಕ್ಕಳು ಪಾಲಕರನ್ನು ಆಸೆ ಈಡೇರಿಸಲು ಮುಂದಾಗುತ್ತಾರೆ. ಈ ಅಮಾನವೀಯ ಕೃತ್ಯದಿಂದ ಅದೆಷ್ಟೋ ವೈದ್ಯಕೀ ಯ ಸೇವೆಯಲ್ಲಿ ನಿರತರಾದವರು ವೃತ್ತಿಯನ್ನೇ ತ್ಯಜಿಸುತ್ತಿದ್ದಾರೆ ಎಂದರು.

ಇನ್ನರ್‍ವ್ಹೀಲ್‍ನ ಸದಸ್ಯೆ ಶರ್ಮಿಳಾ ಮಾತನಾಡಿ ಹೆಣ್ಣಿಗೆ ಚ್ಯುತಿ ತರುವ ಅತ್ಯಾಚಾರಿಗಳನ್ನು ಹೊರ ದೇಶದಂತೆ ನಡುರಸ್ತೆಯಲ್ಲಿ ಶಿಕ್ಷೆಗೆ ಗುರಿಪಡಿಸಿದರೆ, ಯಾವುದೇ ವ್ಯಕ್ತಿ ಇಂಥ ಪೈಶಾಚಿಕ ಕೃತ್ಯ ಎಸಗಲು ಸಾಧ್ಯವಿಲ್ಲ. ಅಲ್ಲದೇ ನೊಂದ ವೈದ್ಯರ ಸಾಂತ್ವಾನಕ್ಕೆ ಪ್ರತಿಭಟನೆ ನಡೆಸುತ್ತಿರುವುದು ಬೇಸರದ ಸಂಗತಿ. ಹೀ ಗಾಗಿ ಈ ರೀತಿಯ ಕೃತ್ಯ ಮರಕಳಿಸದಂತೆ ಸರ್ಕಾರಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಇನ್ನರ್‍ವ್ಹೀಲ್‍ನ ಸದಸ್ಯೆ ಸಂಗೀತ ಮಾತನಾಡಿ ಕಣ್ಣಿಗೆ ಕಾಣುವಷ್ಟು ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಆದೆಷ್ಟೋ ಪ್ರಕರಣಗಳು ಕಣ್ಮರೆಯಾಗಿವೆ. ಈಚೆಗೆ ಹಕ್ಕಿಪಿಕ್ಕಿ ಜನಾಂಗದ ಯುವತಿ ಮೇಲೆ ಅತ್ಯಾ ಚಾರವಾಗಿದೆ. ಅದರಂತೆ ಅನೇಕ ಪ್ರಕರಣಗಳು ಅಲ್ಲಲ್ಲಿಯೇ ಮುಚ್ಚಿಹೋಗುತ್ತಿದೆ. ಇದರಿಂದ ಶೋಷ ಣೆಗೆ ಒಳಗಾಗುವುದು ಕೇವಲ ಹೆಣ್ಣು. ಹೀಗಾಗಿ ಹೆಣ್ಣಿನ ರಕ್ಷಣೆಯನ್ನು ಕೇವಲ ಸರ್ಕಾರ ಮಾತ್ರವಲ್ಲದೇ ಹೆತ್ತವರು ಕಾಳಜಿ ಹೊಂದಬೇಕು ಎಂದು ಹೇಳಿದರು.

ಇದೇ ವೇಳೆ ಮೌನ ಮೆರವಣಿಗೆ ಆಜಾದ್‍ಪಾರ್ಕ್ ವೃತ್ತಗೆ ಸಮಾವೇಶಗೊಂಡ ಬಳಿಕ ಟಿಎಂಎಸ್ ಶಾಲಾ ವಿದ್ಯಾರ್ಥಿಗಳಿಂದ ವೈದ್ಯ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಂಭವಿಸುವ ಅನಾಹುತಗಳ ಬಗ್ಗೆ ಸಾಂಕೇತಿಕವಾಗಿ ನಾಟಕದ ಮೂಲಕ ಪ್ರದರ್ಶನಗೊಳಿಸಿದರು.

ಈ ಸಂದರ್ಭದಲ್ಲಿ ಐಎಂಎ ಅಧ್ಯಕ್ಷ ಚೈತನ್ಯ ಸವೂರ್, ಕಾರ್ಯದರ್ಶಿ ಕಾರ್ತೀಕ್ ವಿಜಯ್, ರೌಂ ಡ್ ಟೇಬಲ್ ಅಧ್ಯಕ್ಷ ರಾಷ್ಟ್ರೀತ್, ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ, ವಕೀಲರಾದ ತೇಜಸ್ವಿ, ಮಮತಾ, ಕನ್ನಡಸೇನೆ ಮುಖಂಡರುಗಳಾದ ಜಯಪ್ರಕಾಶ್, ಹುಣಸೇಮಕ್ಕಿ ಲಕ್ಷ್ಮಣ್, ಕಳವಾಸೆ ರವಿ ಸೇರಿ ದಂತೆ ವಿವಿಧ ಸಂಘ-ಸಂಸ್ಥೆಗಳು ಮಹಿಳಾ ಬಳಗ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ