October 5, 2024

ಕಪೂಚಿನ್ ಕೃಷಿಕ ಸೇವಾ ಕೇಂದ್ರ ಮತ್ತು ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಬಣಕಲ್ ಇವರ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆಯ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಬಡ ಮಕ್ಕಳಿಗೆ ಶಿಕ್ಷಣ ಪೂರಕ ಸಾಮಗ್ರಿಗಳಾದ ನೋಟ್ ಬುಕ್ ಡ್ರಾಯಿಂಗ್ ಬುಕ್ ಕಲರ್ ಪೆನ್ಸಿಲ್ ಕಲರ್ ಪೆನ್ನುಗಳು ಮತ್ತು ಊಟದ ಬಾಕ್ಸ್ ಹಾಗೂ ಊಟದ ಬ್ಯಾಗುಗಳನ್ನು ಮಕ್ಕಳಿಗೆ ವಿತರಿಸಲಾಯಿತು.

ವಿಮುಕ್ತಿ ಚಾರಿಟಿ ಚಾರಿಟೇಬಲ್ ಟ್ರಸ್ಟ್ ನ ನಿರ್ದೇಶಕರಾದ ಫಾದರ್ ಎಡ್ವಿನ್ ಡಿಸೋಜಾ ಮಾತನಾಡಿ ಮಕ್ಕಳಿಗೆ ಶಿಕ್ಷಣದ ಮೇಲೆ ಆಸಕ್ತಿ ಬರಲು ಮತ್ತು ಉತ್ತೇಜನ ನೀಡಲು ಸಂಸ್ಥೆ ಶ್ರಮಿಸುತ್ತದೆ ಹೆತ್ತವರು ಮಕ್ಕಳಿಗೆ ಮಾರ್ಗದರ್ಶಕರಾಗಿರಲಿ ಪೋಷಕರಾದ ನಮಗೆ ಮಕ್ಕಳನ್ನು ಸರಿದಾರಿಗೆ ತರುವ ಮತ್ತು ಶಿಕ್ಷಿಸುವ ಸ್ವಾತಂತ್ರ್ಯ ಇದೆ ಅದನ್ನು ಸರಿಯಾಗಿ ಉಪಯೋಗಿಸಿ ಮಕ್ಕಳನ್ನು ದೇಶಕ್ಕೆ ಉತ್ತಮ ಪ್ರಜೆಯಾಗಿ ಮಾಡುವುದು ಹೆತ್ತವರ ಕರ್ತವ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾದ ನವೀನ್ ಕುಮಾರ್ ಮಾತನಾಡಿ ಮಕ್ಕಳ ಕಲಿಕೆಗೆ ಪೂರಕವಾದ ಪರಿಕರಗಳನ್ನು ನೀಡಿರುವುದು ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಪ್ರೇರಣೆ ಎಂದರು.

ಹಳೆ ಮೂಡಿಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶ್ರೀಮತಿ ಜ್ಯೋತಿ ಸಲ್ದಾನ ಮಾತನಾಡಿ ಜೀವನದಲ್ಲಿ ನಮ್ಮ ಜೊತೆ ಇರುವುದು ವಿದ್ಯೆ ಮಾತ್ರ ಪೋಷಕರಾಗಲಿ ಶಿಕ್ಷಕರಾಗಲಿ ಸಹಪಾಠಿಗಳಾಗಲಿ ಎಂದೆಂದಿಗೂ ಜೊತೆಗಿರುವುದಿಲ್ಲ ಎಂದರು ವಿದ್ಯೆ ಎಂದರೆ ಬರಿ ಓದುವುದು ಮಾತ್ರವಲ್ಲ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕೌಶಲ್ಯವಿರುತ್ತದೆ ಚಿತ್ರಕಲೆ ನೃತ್ಯ ಹಾಡುಗಾರಿಕೆ ಹಾಗೂ ಇನ್ನಿತರ ಕೌಶಲ್ಯಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವುದು ಅವಶ್ಯಕತೆ ಎಂದರು.

ನಾಗಲಾಪುರ ಮುಖ್ಯ ಶಿಕ್ಷಕರಾದ ಸುರೇಶ್ ರವರು ಮಕ್ಕಳಿಗೆ ಶಿಕ್ಷಣದ ಮಹತ್ವ ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ಕಾಫಿ ನಾಡು ಸಮಾಜ ಸೇವಾ ಸಂಘದ ಹಸೇನರ್ ಬಿಳುಗುಳ ರವರು ಕಾರ್ಯಕ್ರಮದಲ್ಲಿದ್ದ ಮಕ್ಕಳಿಗೆ ಜೀವನದಲ್ಲಿ ಉನ್ನತ ಸಾಧನೆ ಮಾಡಲು ಹಣವೇ ಮುಖ್ಯವಲ್ಲ ಜೀವನ ಕೌಶಲ್ಯವು ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ತ್ರಿವರ್ಣ ಭಾವೈಕ್ಯತೆಯ ಬಣ್ಣ 1999 ಕಿರುಚಿತ್ರದ ಪೋಸ್ಟರ್ ಅನ್ನು ವೇದಿಕೆಯಲ್ಲಿದ್ದ ಗಣ್ಯರು ಮತ್ತು ಸೃಜನಶೀಲ ಯುವ ತಂಡ ರಿ ಅಧ್ಯಕ್ಷರಾದ ಅಬ್ದುಲ್ ನಾಜಿಮ್ ಮತ್ತು ಕಾರ್ಯದರ್ಶಿಯಾದ ವಿಜಯಲಕ್ಷ್ಮಿ ರವರು ಬಿಡುಗಡೆ ಮಾಡಿದರು.

ದೇಶಪ್ರೇಮ ಹಾಗೂ ತ್ಯಾಗದ ಸಂಕೇತ ಈ ಚಿತ್ರದಲ್ಲಿದೆ ಎಂದು ಚಿತ್ರಕಥೆ ನಿರ್ದೇಶನದ ವಿಜಯಲಕ್ಷ್ಮಿ ರವರು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಉಷಾ, ನೃತ್ಯ ಶಿಕ್ಷಕ ಆದರ್ಶ್ ದೀಕ್ಷಿತ್ ಮತ್ತು ರಮೇಶ್ ಸಾಲುಮರ, ನಾಗೇಶ್, ಹಳೆಮೂಡಿಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಸೋನಿಯಾ ಕ್ರಾಸ್ತಾ, ಅಭಿಜಿತ್, ಪ್ರದೀಪ್, ರಾಜು ನಾಗಲಾಪುರ, ರೋಷನ್, ಸ್ಟೆಪಿ, ಶಬಾನ, ಶಶಿಕಲಾ, ಕೀರ್ತನ, ಚೈತ್ರ, ಶ್ರಾಮ್ಯ ಮತ್ತು ಮಕ್ಕಳು ಪೋಷಕರು ಹಾಜರಿದ್ದರು

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ