October 5, 2024

ಆಡಳಿತ ನಡೆಸುತ್ತಿರುವ ಸರ್ಕಾರ ಮತ್ತು ಅಧಿಕಾರಿಗಳು ಬ್ರಿಟಿಷರಿಗಿಂತ ಕ್ರೂರವಾಗಿ ಇವತ್ತು ರೈತರನ್ನು ನಡೆಕೊಳ್ಳುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಬಿ. ಸಿ ದಯಾಕರ ಬಾಳೆಹಳ್ಳಿ ಹೇಳಿದರು.

ಅವರು ಬುಧವಾರ ಮೂಡಿಗೆರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇತ್ತೀಚಿಗೆ ಚಿಕ್ಕಮಗಳೂರು ಸಮೀಪ ಮತ್ತಾವರದ ಕೃಷಿಕ ರಮೇಶ್ ಗೌಡ ಹಾಗೆ ದಂಬದಹಳ್ಳಿಯ ಚಂದ್ರೆಗೌಡ ಅವರುಗಳು 1977ರಲ್ಲಿ ಮಂಜೂರು ಅದ ಭೂಮಿ ಯಲ್ಲಿ ಕಾಫಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತಿದ್ದರು ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ನೋಟಿಸ್ ನೀಡದೆ ಏಕಾಏಕಿ ತೋಟಕ್ಕೆ ನುಗ್ಗಿ 16 ಎಕರೆ ಯಲ್ಲಿ ಬೆಳೆದು ನಿಂತಿದ್ದ ಕಾಫಿ ಗಿಡಗಳನ್ನು ಒತ್ತುವರಿ ತೆರವು ಎಂದು ನೇಪ ಒಡ್ಡಿ ಕಡಿದು ದ್ವಂಸ ಮಾಡಿದ್ದಾರೆ ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವ ಸರ್ಕಾರ ಮತ್ತು ಜನಪ್ರತಿನಿದಿಗಳಿಗೆ ನಾಚಿಕೆ ಆಗಬೇಕು ತಕ್ಷಣ ಅವರಿಗೆ ಆಗಿರುವ ನಷ್ಟವನ್ನು ಸರ್ಕಾರವೇ ಬರಿಸಬೇಕು ಎಂದರು.

ಎತ್ತಿನ ಹೊಳೆ ಯೋಜನೆ, ರೆಸಾರ್ಟ್ , ಪವಲ್ ಲೈಲ್, ಗ್ಯಾಸ್ ಪೆಟ್ರೋಲ್ ಲೈನ್,  ಗುಡ್ಡ ಕೊರೆತಗಳಿಂದ ಇವತ್ತು ಪಶ್ಚಿಮ ಘಟ್ಟ ಸಮಸ್ಯೆ ಎದುರಾಗಿದೆ ಹೊರತು ರೈತರಿಂದ ಯಾವುದೇ ಸಮಸ್ಯೆ ಆಗಿಲ್ಲ. ಆದಷ್ಟು ಬೇಗ ರೈತರೊಂದಿಗೆ ಅಧಿಕಾರಿಗಳು ಚುನಾಯಿತ ಪ್ರತಿನಿದಿಗಳು ಒಟ್ಟಿಗೆ ಸಭೆ ಕರೆದು ಚರ್ಚಿಸಿ ಸಮಸ್ಯೆ ಗೆ ಪರಿಹಾರ ಕಂಡು ಕೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಅನುಕುಮಾರ್ ಮಾತನಾಡಿ ಹಿಂದಿನಿಂದಲೂ ಮಲೆನಾಡು ಭಾಗದಲ್ಲಿ ಕಾಫಿ ಕಾಳು ಮೆಣಸು ಏಲಕ್ಕಿ ಭತ್ತ ಬೆಳೆಗಳಿಂದನೇ ಬದುಕು ಕಟ್ಟಿಕೊಂಡಿದ್ದಾರೆ ಆದರೆ ಇತ್ತೀಚಿನ ವರ್ಷಗಳಲಿ ಆಗುತ್ತಿರುವ ಮಳೆ ಹಾಗೂ ಕಾಡು ಪ್ರಾಣಿಗಳ ಉಪಟಲದಿಂದ ಭತ್ತ ಏಲಕ್ಕಿ ಬೆಳೆ ಕಮ್ಮಿ ಮಾಡಿ ಕಾಫಿ ಕೃಷಿಗೆ ಒತ್ತು ನೀಡುತ್ತಾ ಬಂದಿದಾರೆ. ಇರುವ ಅಲ್ಪ ಸ್ವಲ್ಪ ಜಮೀನಿನಲ್ಲಿ ಕಾಫಿ ಬೆಳೆಯುತಿದಾರೆ ಹಿಂದಿನ ಸರ್ಕಾರ ಒತ್ತುವರಿ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ಕೃಷಿ ಮಾಡಲು ಅವಕಾಶ ಮಾಡಿತ್ತು ಆದರೆ ಈಗಿನ ಸರ್ಕಾರ ಅಧಿಕಾರಿಗಳನ್ನು ಬಿಟ್ಟು ತೊಂದರೆ ಕೊಡುತ್ತಿದ್ದಾರೆ ಯಾವ ಕಾನೂನಿನಲ್ಲೂ ಕಾಫಿ ಗಿಡ ದ್ವಂಸ ಮಾಡಿ ಎಂದು ಹೇಳಿಲ್ಲ ಅಧಿಕಾರಿಗಳ ದರ್ಪದಿಂದ ಇವತ್ತು ರೈತ ಸಮಸ್ಯೆ ಎದರಿಸುತ್ತಿದಾರೆ ಜನಗಳಿಂದನೇ ಸರ್ಕಾರ ಹಾಗಾಗಿ ಜನಗಳಿಗೆ ತೊಂದರೆ ನೀಡಿ ಅಧಿಕಾರ ಮಾಡಬಾರದು ಎಂದು ಎಚ್ಚರಿಸಿದರು.

ಕೆಂಪೇಗೌಡ ಒಕ್ಕಲಿಗ ಸಂಘದ ಅಧ್ಯಕ್ಷ ಬ್ರಿಜೇಶ್ ಕಡಿದಾಳು ಮಾತನಾಡಿ ಸರ್ಕಾರ ರೈತರಿಗೆ ಅನಾವಶ್ಯಕವಾಗಿ ತೊಂದರೆ ನೀಡುತ್ತಿದೆ. ಯಾವುದೇ ನೋಟೀಸ್ ನೀಡದೇ, ರಾತ್ರೋರಾತ್ರಿ ತೋಟಗಳನ್ನು ನಾಶ ಮಾಡುತ್ತಿದ್ದಾರೆ. ಇದರ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕು. ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆಂಪೇಗೌಡ ಒಕ್ಕಲಿಗರ ವೇದಿಕೆ ಗೋಣಿಬೀಡು ಹೋಬಳಿ ಅಧ್ಯಕ್ಷ ಸಂತೋಷ್ ಮೇಕನಗದ್ದೆ ಮಾತನಾಡಿ ; ಈ ವರ್ಷ ಅತಿವೃಷ್ಟಿಯಿಂದ ಬೆಳೆಗಳೆಲ್ಲಾ ನಾಶವಾಗಿವೆ, ಕಾಡು ಪ್ರಾಣಿಗಳ ಹಾವಳಿ ಮಿತಿಮೀರಿದೆ. ಕೇರಳದಲ್ಲಿ ಆಗಿರುವ ಅನಾಹುತವನ್ನು ಮುಂದುಮಾಡಿ ಕಸ್ತೂರಿ ರಂಗನ್ ವರದಿ ಜಾರಿಗೆ ಪ್ರಯತ್ನ ನಡೆಸಲಾಗುತ್ತಿದೆ. ಈ ವರದಿ ಜಾರಿಯಾದರೆ ಜನಜೀವನಕ್ಕೆ ತೊಂದರೆಯಾಗುತ್ತದೆ. ಇದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ವೇದಿಕೆಯ ಉಪಾಧ್ಯಕ್ಷ ಅಶ್ವಥ್ ಬೆಟ್ಟಗೆರೆ ಮಾತನಾಡಿ ; ಮಲೆನಾಡಿನ ಜನ ಶಾಂತಿಪ್ರಿಯರು, ಅವರ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಬಾರದು, ರೈತರು ಸಿಡಿದೆದ್ದರೆ ಯಾವ ಸರ್ಕಾರಗಳು ಉಳಿಯುವುದಿಲ್ಲ. ರೈತರ ಬದುಕಿನ ಜೊತೆ ಅಧಿಕಾರಿಗಳು ಚೆಲ್ಲಾಟ ಆಡಬಾರದು ಎಂದು ಎಚ್ಚರಿಸಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ