October 5, 2024

ಮೂಡಿಗೆರೆ ಜೇಸಿಐ ಅಲ್ಯುಮಿನಿ ಕ್ಲಬ್ ವತಿಯಿಂದ ಹೆಸಗಲ್ ಸರ್ಕಾರಿ ಶಾಲೆಗೆ ಕುರ್ಚಿಗಳನ್ನು  ಕೊಡುಗೆಯಾಗಿ ನೀಡಲಾಯಿತು

ಜೆಸಿಐ ಮೂಡಿಗೆರೆ ಘಟಕಕ್ಕೆ ಜೆಸಿಐ ಇಂಡಿಯಾ ರಾಷ್ಟ್ರೀಯ ಉಪಾಧ್ಯಕ್ಷರ ಅಧಿಕೃತ ಭೇಟಿ ಸಂದರ್ಭದಲ್ಲಿ , ಜೆಸಿಐ ಮೂಡಿಗೆರೆ ಅಧ್ಯಕ್ಷರಾದ ಜೆಸಿ ಸುಪ್ರೀತ್ ರವರ ಅದ್ಯಕ್ಷತೆಯಲ್ಲಿ , ಜೇಸಿಐ ಅಲ್ಯುಮಿನಿ ಕ್ಲಬ್ ಸದಸ್ಯರ ನೆರವಿನಿಂದ ಹೆಸಗಲ್ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ಚೇರ್ ವಿತರಣೆ ಮಾಡಲಾಯಿತು. ಶಾಲೆಯ ಮಕ್ಕಳಿಗೆ ಕುಳಿತುಕೊಳ್ಳಲು ಅನುಕೂಲವಾಗುವ 20 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು

ಈ ಸಂದರ್ಭದಲ್ಲಿ ಅಲ್ಯುಮಿನಿ ಕ್ಲಬ್ ವಲಯ ಉಪಾಧ್ಯಕ್ಷ ಹೆಚ್.ಕೆ. ಯೋಗೇಶ್ ಮಾತನಾಡಿ ಸರ್ಕಾರಿ ಶಾಲೆಗಳು ಉಳಿಯಬೇಕೆಂದರೆ ದಾನಿಗಳ ನೆರವು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೇಸಿ ಅಲ್ಯುಮಿನಿ ಕ್ಲಬ್ ಸದಸ್ಯರು ಸ್ವಯಂಪ್ರೇರಿತರಾಗಿ  ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಸಗಲ್ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕ ವೃಂದವಿದ್ದು ವಿದ್ಯಾರ್ಥಿಗಳಿಗೆ ತುಂಬಾ ಆಸಕ್ತಿದಾಯಕವಾಗಿ ಪಾಠ ಪ್ರವಚನಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಶಿಕ್ಷಕರು ಮನಸ್ಸು ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಬಹುದು ಎಂದರು.

ಈ ಸಂದರ್ಭದಲ್ಲಿ ಜೇಸಿಐ ವಲಯ ಅಧ್ಯಕ್ಷೆ  ಆಶಾ ಜೈನ್, ಮೂಡಿಗೆರೆ ಅಲ್ಯುಮಿನಿ ಕ್ಲಬ್ ಸದಸ್ಯರು, ಜೇಸಿಐ ಸದಸ್ಯರು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ