October 5, 2024

ಪ್ಯಾರಿಸ್​ ಒಲಿಂಪಿಕ್ಸ್​ ನ ಪುರುಷರ ಕುಸ್ತಿ 57 ಕೆ. ಜಿ ವಿಭಾಗದಲ್ಲಿ ಭಾರತದ ಅಮನ್​ ಸೆಹ್ರಾವತ್​ ಕಂಚಿನ ಪದಕ ಗೆದ್ದಿದ್ದಾರೆ.

ಅವರು ಪೊರ್ಟೊರಿಕೊ ದೇಶದ ಡೇರಿಯನ್​ ಕ್ರೂಜ್ ವಿರುದ್ಧ 13-5 ಅಂಕಗಳ ಅಂತರದ ಜಯ ಸಾಧಿಸುವ ಮೂಲಕ ಭಾರತಕ್ಕೆ ಮತ್ತೊಂದು ಕಂಚಿನ ಪದಕ ತಂದರು. 21 ವರ್ಷದ ಅಮನ್​ ಚೊಚ್ಚಲ ಒಲಿಂಪಿಕ್ಸ್​ನಲ್ಲಿಯೇ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದರು. ಇದರೊಂದಿಗೆ ಭಾರತಕ್ಕೆ ಕುಸ್ತಿಯಲ್ಲಿ ಒಂದು ಕಂಚಿನ ಪದಕ ಒಲಿಯಿತು.

ಅಮನ್ ಅವರ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿದೆ. ಅದರಲ್ಲಿ 5 ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ.

ಕಂಚಿನ ಪದಕ ಹಣಾಹಣಿಯಲ್ಲಿ ಅಮನ್ ಆರಂಭದಲ್ಲಿಯೇ ಕೆಚ್ಚೆದೆ ತೋರಿದರು. ಎದುರಾಳಿ ಮೇಲೆ ಸಂಪೂರ್ಣ ಮೇಲುಗೈ ಸಾಧಿಸಿದರು. ಅವರ ಬಿಗಿ ಹಿಡಿತಕ್ಕೆ ಎದುರಾಳಿಯ ಲಯ ತಪ್ಪಿತು. ಹೀಗಾಗಿ ಅಮನ್​ ನಿರಂತರವಾಗಿ ಅಂಕಗಳನ್ನು ಗೆದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ