October 5, 2024

ನೆರೆಯ ರಾಜ್ಯ ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೂ ಕುಸಿತದಿಂದಾಗಿ ಭಾರೀ ಅನಾಹುತ ಸಂಭವಿಸಿದ್ದು, 300 ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ನಾಪತ್ತೆಯಾಗಿದ್ದು, ಬಹುತೇಕ ನಿವಾಸಿಗಳು ಮನೆ, ಆಸ್ತಿ ಕಳೆದುಕೊಂಡು ಸಂತ್ರಸ್ಥರಾಗಿದ್ದಾರೆ. ಈ ಘಟನೆಯಿಂದಾಗಿ ಜಿಲ್ಲೆಯ ಜನತೆ, ಜಿಲ್ಲಾಡಳಿತ ಹಾಗೂ ಸರಕಾರ ಪಾಠ ಕಲಿಯಬೇಕಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಎಚ್ಚರಿಸಿದ್ದಾರೆ.

ಈ ಸಂಬಂಧ ಗುರುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿಕ್ಕಮಗಳೂರು ಜಿಲ್ಲೆ ಪ್ರಾಕೃತಿಕವಾಗಿ ಸಂಪದ್ಭರಿತ ಜಿಲ್ಲೆಯಾಗಿದೆ. ಎಲ್ಲಿ ನೋಡಿದರಲ್ಲೂ ಕಂಡು ಬರುವ ಸುಂದರವಾದ, ಹಸಿರ ಸಿರಿಯ ಮುಗಿಲೆತ್ತರದ ಬೆಟ್ಟಗುಡ್ಡಗಳು, ಗಿರಿಶ್ರೇಣಿಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಈ ಕಾರಣದಿಂದಾಗಿ ಜಿಲ್ಲೆಗೆ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಈ ಪ್ರವಾಸಿಗರಿಂದಾಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವೂ ಅಭಿವೃದ್ಧಿಯಾಗುತ್ತಿದ್ದು, ಇದಕ್ಕೆ ಪೂರಕವಾಗಿ ಜಿಲ್ಲಾದ್ಯಂತ ಎಲ್ಲೆಂದರಲ್ಲಿ ಹೋಮ್‌ಸ್ಟೇಗಳು, ರೆಸಾರ್ಟ್ಗಳು ನಾಯಿ ಕೊಡೆಗಳಂಗೆ ತಲೆ ಎತ್ತುತ್ತಿವೆ. ಇವುಗಳಿಗಾಗಿ ಇಲ್ಲಿನ ಬೆಟ್ಟ ಗುಡ್ಡಗಳನ್ನು ಅಗೆದು ರಸ್ತೆಯಂತಹ ಮೂಲಸೌಕರ್ಯಗಳಿಗಾಗಿ ನಿಸರ್ಗದ ಸ್ವರೂಪವನ್ನೇ ಬದಲಾಯಿಸಲಾಗುತ್ತಿದೆ. ನೈಸರ್ಗಿಕವಾಗಿ ಹರಿಯುವ ನೀರಿನ ಮೂಲಗಳು ಕಾಲುವೆಗಳನ್ನು ಮುಚ್ಚಲಾಗುತ್ತಿದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಇಲ್ಲಿನ ಪರಿಸರದ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ ಮುದೊಂದು ದಿನ ಚಿಕ್ಕಮಗಳೂರು ಜಿಲ್ಲೆಯಲ್ಲೂ ವಯನಾಡಿನಲ್ಲಿ ಸಂಭವಿಸಿದ ಘೋರ ದುರಂತ ಮರುಕಳಿಸಿದರೂ ಆಶ್ಚರ್ಯವಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈಗ್ಗೆ ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಸಂಭವಿಸಿದ ಅತೀವೃಷ್ಟಿಯಿಂದಾಗಿ ಮಲೆಮನೆ, ಚೆನ್ನಡ್ಲು ಗ್ರಾಮಗಳಲ್ಲಿ ಭೂಕುಸಿತ ಉಂಟಾಗಿದ್ದು, ಇದರಿಂದಾಗಿ ನೂರಾರು ಮಂದಿ ಸಂತ್ರಸ್ಥರಾಗಿದ್ದಾರೆ. ಕೆಲವರು ತಮ್ಮ ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆ, ಮನೆ, ಸೇತುವೆ ಸೇರಿದಂತೆ ಸಾರ್ವಜನಿಕ ಆಸ್ತಿಗಳಿಗೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ೩ದಶಕಗಳ ಹಿಂದೆ ಜಿಲ್ಲಾದ್ಯಂತ ಸದ್ಯ ಸುರಿಯುತ್ತಿರುವ ಮಳೆಗಿಂತಲೂ ಹೆಚ್ಚು ಮಳೆ ಸುರಿದ ಘಟನೆಗಳು ನಡೆದಿವೆ. ಆದರೆ ಹಿಂದೆಂದೂ ಸದ್ಯ ಸಂಭವಿಸುತ್ತಿರುವ ಭೂಕುಸಿತದಂತಹ ಘಟನೆಗಳು ನಡೆದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಿಸರ್ಗದ ಮೇಲಿನ ದೌರ್ಜನ್ಯ, ಪ್ರವಾಸೋದ್ಯಮದ ಹೆಸರಿನಲ್ಲಿ ಬೆಟ್ಟ ಗುಡ್ಡಗಳ ಸ್ವರೂಪಕ್ಕೆ ಧಕ್ಕೆ ತಂದು ಅಭಿವೃದ್ಧಿ ಮಾಡುತ್ತಿರುವುದೇ ಇಂತಹ ಪ್ರಾಕೃತಿಕ ದುರಂತಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಜಿಲ್ಲೆಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕಾಫಿ ತೋಟಗಳ ಮೇಲೆ ಕಣ್ಣು ಹಾಕಿರುವ ರಿಯಲ್ ಎಸ್ಟೇಟ್ ಮಾಫಿಯಾದವರು ಕಾಫಿ ತೋಟಗಳನ್ನೇ ನಾಶ ಮಾಡಿ ಲೇಔಟ್ ಮಾಡುವ, ವಿಲ್ಲಾಗಳನ್ನು ನಿರ್ಮಿಸುವಂತಹ ಹೈಟೆಕ್ ಯೋಜನೆಗಳನ್ನು ಮಲೆನಾಡಿನ ಗಿರಿಶ್ರೇಣಿಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲು ಮುಂದಾಗಿರುವ ಆರೋಪಗಳೂ ಕೇಳಿ ಬಂದಿವೆ. ಇಂತಹ ಯೋಜನೆಗಳಿಂದಾಗಿ ಮಲೆನಾಡಿನ ನೈಸರ್ಗಿಕ ಸ್ವರೂಪ ಬದಲಾಗುವ ಅಪಾಯವಿದೆ. ಈಗಾಗಲೇ ಮಲೆನಾಡು ಹೋಮ್‌ಸ್ಟೇ, ರೆಸಾರ್ಟ್ಗಳಿಂದ ತುಂಬಿ ತುಳುಕುತ್ತಿದ್ದು, ಹೋಮ್ ಸ್ಟೇ, ರೆಸಾರ್ಟ್ ಸಂಸ್ಕೃತಿಯಿAದಾಗಿ ಮಲೆನಾಡಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತಿದೆಯಾದರೂ ಇವುಗಳಿಂದಾಗಿ ಮಲೆನಾಡಿನಲ್ಲಿ ಪಾಶ್ಚಾತ್ಯ ಸಂಸ್ಕೃತಿ ಹೆಚ್ಚುತ್ತಿದೆ. ಹೋಮ್‌ಸ್ಟೇ, ರೆಸಾರ್ಟ್ಗಳನ್ನು ನಗರ ಪ್ರದೇಶದ ಯುವಜನತೆ ಮೋಜು ಮಸ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆರೋಪವೂ ಇದೆ. ಹಣಕ್ಕಾಗಿ ಇದನ್ನು ಹೋಮ್‌ಸ್ಟೇ, ರೆಸಾರ್ಟ್ಗಳ ಮಾಲಕರು ಪ್ರೋತ್ಸಾಹ ನೀಡುತ್ತಿರುವುದು ವಿಪರ್ಯಾಸವಾಗಿದೆ. ಜಿಲ್ಲೆಯಲ್ಲಿ ಅನಧೀಕೃತವಾಗಿ ನೂರಾರು ಹೋಮ್‌ಸ್ಟೇಗಳು ತಲೆ ಎತ್ತಿರುವುದು ಹೋಮ್‌ಸ್ಟೇ ಸಂಸ್ಕೃತಿ ತಂದೊಡ್ಡಿರುವ ಅಪಾಯಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿರುವ ಅವರು, ಮಲೆನಾಡಿನ ಸುಂದರ ಪರಿಸರ, ಗಿರಿಶ್ರೇಣಿಗಳು, ಕಾಫಿ ತೋಟಗಳ ಸ್ವರೂಪ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಇದರಿಂದಾಗಿ ಮಲೆನಾಡು ಪ್ರಾಕೃತಿಕ ವಿಕೋಪಗಳ ತವರೂರಾಗುತ್ತಿದೆ.

ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತ ಮಲೆನಾಡು ಭಾಗದಲ್ಲಿ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿ ಮಾಡಬೇಕು, ಕಾಫಿ ಬೆಳೆಗಾರರು, ಸಾರ್ವಜನಿಕರು, ಸಂಘಸಂಸ್ಥೆಗಳನ್ನು ವಿಶ್ವಾಸಕ್ಕೆ ಪಡೆದು ಗಿರಿಶ್ರೇಣಿಗಳ, ಕಾಫಿ ತೋಟಗಳ ಸ್ವರೂಪ ಬದಲಾಗುವುದನ್ನು ತಡೆಯಲು ಬೇಕಾಬಿಟ್ಟಿ ರೆಸಾರ್ಟ್, ಹೋಮ್‌ಸ್ಟೇಗಳ ನಿರ್ಮಾಣಕ್ಕೆ ಕಡಿವಾಣ ಹಾಕಬೇಕು. ಇಂತಹ ಕಠಿಣ ಕ್ರಮಗಳಿಂದ ಮಾತ್ರ ವಯನಾಡಿನಲ್ಲಿ ಸಂಭವಿಸಿರುವ ದುರಂತವನ್ನು ತಡೆಯಲು ಸಾಧ್ಯ, ಕಾಫಿನಾಡು ಮುಂದೊಂದು ದಿನ ವಯನಾಡು ಆಗುವುದನ್ನು ತಡೆಯಲು ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಇನ್ನಾದರೂ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ