October 5, 2024

ಜ್ಞಾನದ ಬಾಗಿಲು ತೆಗೆದು ಬೆಳಕು ಚೆಲ್ಲುವ ‘ಸಹಸ್ಪಂದನ’ ವೈವಿಧ್ಯಮಯ ಚಿತ್ರಶಾಲೆ ಎಂದು ಮೈಸೂರುವಿ.ವಿ. ವಿಶ್ರಾಂತ ಪ್ರಾಧ್ಯಾಪಕ ಡಾ.ಎನ್.ಎಸ್.ತಾರಾನಾಥ್ ಅಭಿಪ್ರಾಯಿಸಿದರು.

ಚಿಕ್ಕಮಗಳೂರು ಸುಗಮಸಂಗೀತ ಗಂಗಾ ಮತ್ತು ವೈಲ್ಡ್ಕ್ಯಾಟ್-ಸಿ ನೇತೃತ್ವದಲ್ಲಿ ಉದ್ಭವ ಪ್ರಕಾಶನ, ಕಲ್ಕಟ್ಟೆಪುಸ್ತಕದಮನೆ, ಮಾಧ್ಯಮಸಂಸ್ಕೃತಿ ಪ್ರತಿಷ್ಠಾನ, ಪೂರ್ವಿ ಸುಗಮಸಂಗೀತ ಅಕಾಡೆಮಿ ಮತ್ತು ಮಲ್ಲಿಗೆ ಸುಗಮಸಂಗೀತ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯಪತ್ರಕರ್ತ ಸ.ಗಿರಿಜಾಶಂಕರ್ ಅವರ ಸಮಗ್ರ ಲೇಖನ ಹಾಗೂ ವಿಮರ್ಶೆಗಳ ಸಂಗ್ರಹ ಕೃತಿ ‘ಸಹಸ್ಪಂದನ’ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವೈವಿಧ್ಯಮಯ ಬರಹಗಳಿರುವ ಸಂಕಿರಣ ಕೃತಿ ಇದು. ಸ್ವಯಂ ಕಾಳಜಿಯಿಂದ ಬರೆದ ೭೨ಲೇಖನಗಳಿವೆ. ಕೃತಿಕಾರರ ಪರಿಸರ ಆಸೆ, ಕಾಳಜಿ, ಯೋಜನಾಧಾಟಿ ಪ್ರತಿಫಲನವಾಗಿದೆ. ಪತ್ರಿಕೋದ್ಯಮ ಮತ್ತು ಬರವಣಿಗೆ ಗಿರಿಜಾಶಂಕರ್ ಅವರ ಶ್ವಾಸಕೋಶ. ಪ್ರಕೃತಿಪ್ರೇಮ ಉಚ್ಚಾ÷್ವಸವಾದರೆ ಪುಸ್ತಕಪ್ರೀತಿ ನಿಶ್ವಾಸವಾಗಿ ಕೃತಿಯಲ್ಲಿ ಹೆಪ್ಪುಗಟ್ಟಿದೆ ಎಂದು ಪ್ರೊ.ತಾರಾನಾಥ್ ಬಣ್ಣಿಸಿದರು.

ಕೃತಿಯಲ್ಲಿ ನಾಲ್ಕುವರ್ಗದ ಬರಹಗಳನ್ನು ಗುರುತಿಸಬಹುದು. ಪರಿಸರದ ಲೇಖನಗಳ ಗುಚ್ಛ, ಸಮಕಾಲೀನ ಘಟನೆಗಳು, ಪುಸ್ತಕಕಗಳ ಪರಿಚಯ, ವ್ಯಕ್ತಿ ಚಿತ್ರಣ ಮತ್ತು ವಿಮರ್ಶಾ ಲೇಖನಗಳು ಇಲ್ಲಿವೆ. ಪರಿಸರವನ್ನು ಜೀವನಧ್ಯೇಯ ಉಸಿರಾಗಿಸಿಕೊಂಡ ಸಹಸ್ಪಂದನ ಇಲ್ಲಿದೆ. ಪರಿಸರದ ಬಗ್ಗೆ ಗಿರಿಜಾಶಂಕರ್ ಉತ್ತರಮುಖಿಗಳು. ಯಾವುದೇ ವ್ಯಕ್ತಿ, ಪುಸ್ತಕ, ಘಟನೆಯನ್ನು ಪರಿಸರದ ಹಿನ್ನೆಲೆಯಲ್ಲಿ ಪರಿಚಯಿಸಿದ್ದಾರೆ. ‘ಬಗೆಯುವವರು-ಬಿತ್ತುವವರು’ ಲೇಖನದಲ್ಲಿ ಗಣಿಗಾರಿಕೆ ಮತ್ತು ಕೃಷಿರಂಗದ ಹೋಲಿಕೆಯನ್ನು ಪ್ರಸ್ತಾಪಿಸಿ, ಸ್ವಾರ್ಥ ಮತ್ತು ನಿಸ್ವಾರ್ಥ ಸರಳವಾಗಿ ಅರ್ಥೈಯಿಸಿದ್ದಾರೆಂದರು.

ಪರಿಸರ ಕಾಳಜಿ ನಮ್ಮಜೀವನದ ಜೊತೆ ಬೆರೆತಿದೆ. ರಾಮಾಯಣ-ಮಹಾಭಾರತದ ಕಾಲದಿಂದ ಪರಿಸರ ಪ್ರಜ್ಞೆ ಸಮಾಜದಲ್ಲಿ ರೂಪಿತಗೊಂಡಿದೆ. ಮಾವು-ಮಲ್ಲಿಗೆಯ ಮದುವೆ, ಅರಳಿಮರಕ್ಕೆ ಮುಂಜಿ, ಸಸ್ಯಗಳನ್ನು ಶಕ್ತಿಕೇಂದ್ರವಾಗಿ ಆರಾಧಿಸುವ ಪದ್ಧತಿ ಹಿಂದಿನಿAದಲೂ ಇದೆ. ಶಾಕುಂತಲೆ ನಾಟಕದಲ್ಲಿ ಗಿಡ-ಮರ-ಪ್ರಕೃತಿಗೆ ದೈವತ್ವದ ಸ್ಥಾನ ನೀಡಿರುವುದನ್ನು ಉಲ್ಲೇಖಿಸಿದ ತಾರಾನಾಥ್, ಮಣ್ಣು ಮೆತ್ತಿದರೆ ಶ್ರೀಗಂಧ, ಮಳೆಯನೀರು ಪವಿತ್ರತೀರ್ಥ, ಕಾಲು ಎಡವಿದರೆ ಶಕ್ತಿಶಿಲೆ ಎಂದು ಪರಿಭಾವಿಸಲಾಗುತ್ತಿದೆ ಎಂದು ಸ್ಮರಿಸಿದರು.

ಪರಿಸರ ಜೀವನದ ಉಸಿರು ಮತ್ತು ಪೈರು ಆಗಿರುವುದನ್ನು ಸಹಸ್ಪಂದನದಲ್ಲಿ ಗಮನಿಸಬಹುದು. ಪರಿಸರದ ಕೆಲಸಕ್ಕೆ ತಾತ್ವಿಕತೆ ಮತ್ತು ವೈಜ್ಞಾನಿಕತೆ ತೋರಿಸಲಾಗಿದೆ. ಕಾರಂತ, ತೇಜಸ್ವಿ, ಗಿರೀಶ್, ಉಲ್ಲಾಸ್ ಮತ್ತಿತರರ ಒಡನಾಟ ಪರಿಸಕ್ಕೆ ಸಂಬAಧಿಸಿದ ಅವರ ಪ್ರಯತ್ನ ಬಿಂಬಿಸುತ್ತದೆ. ಪುಸ್ತಕ ಸಂಸ್ಕೃತಿ ಕುಸಿಯುತ್ತಿರುವ ಕಾಲದಲ್ಲಿ ಒಳ್ಳೆಯ ಪುಸ್ತಕಗಳನ್ನು ಪರಿಚಯಿಸಿ ಓದಿನ ವಿಸ್ತಾರಕ್ಕೆ ಕಾರಣರಾಗಿದ್ದಾರೆ. ವ್ಯಾಸಂಗದ ಆಸಕ್ತಿ, ವಿಸ್ತಾರ ಇಲ್ಲಿ ಬಿಂಬಿತವಾಗಿದೆ ಎಂದ ಡಾ.ತಾರಾನಾಥ್, ಜಿಲ್ಲಾಮಟ್ಟದ ಪತ್ರಿಕೆಯನ್ನು ಬಳಸಿಕೊಂಡು ಸಾಹಿತ್ಯ-ಸಾಂಸ್ಕೃತಿಕ-ಪರಿಸರದ ನಿಲುವುಗಳನ್ನು ಸಮರ್ಥವಾಗಿ ದೇಶಕ್ಕೆ ಕೇಳಿಸುವಲ್ಲಿ ಗಿರಿಜಾಶಂಕರ್ ಅವರದ್ದು ದೊಡ್ಡಪಾತ್ರ. ಧ್ಯಾನಸ್ತಸ್ಥಿತಿ, ಪರಿಸರ ಪುರುಷ ಎನಿಸುತ್ತಾರೆಂದರು.

ಸುಗಮಸಂಗೀತ ಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಅಜಾತಶತ್ರುವಾಗಿ ಎಲ್ಲರಿಂದಲೂ ಒಳಿತನ್ನು ಕಲಿತು ಇತರರಿಗೂ ಕಲಿಸಿದ ಗಿರಿಜಾಶಂಕರ್, ಜನಮಿತ್ರ ಪತ್ರಿಕೆಯ ಮೂಲಕ ಜಿಲ್ಲೆಯ ಜನರ ಮಿತ್ರರಾಗಿಯೂ ಪ್ರೀತಿಗಳಿಸಿದ್ದಾರೆಂದರು.

ಸುಂದರ ಪರಿಸರದ ಚಿಕ್ಕಮಗಳೂರು ಸ್ವಚ್ಛವಾಗಿಡಲು ನಾವೆಲ್ಲರೂ ಶ್ರಮಿಸಬೇಕು. ಸ್ವೀಡ್ಜಲ್ಯಾಂಡ್ ಬಿಟ್ಟರೆ ಚಿಕ್ಕಮಗಳೂರು ವಿಶ್ವದ ಸುಂದರ ವಾಸಯೋಗ್ಯ ತಾಣವಾಗಿರುವುದು ಹೆಮ್ಮೆಯ ಸಂಗತಿ. ೧.೧೮ಕೋಟಿ ಜನರು ಇಲ್ಲಿಯ ಪ್ರಕೃತಿ ಸವಿಯಲು ವರ್ಷದಲ್ಲಿ ಬಂದಿದ್ದಾರೆ. ಆದರೆ ಅವರಿಗೆ ಸರಿಯಾದ ವ್ಯವಸ್ಥೆಗಳಿಲ್ಲ. ಸಂಚಾರ ಮತ್ತು ಸ್ವಚ್ಛತೆಗೆ ಆದ್ಯತೆನೀಡಿ, ಅಗತ್ಯ ಪರ್ಯಾಯ ವ್ಯವಸ್ಥೆಗಳನ್ನು ಆಡಳಿತ ಮಾಡಿಕೊಡಬೇಕೆಂದು ಡಾ.ಜೆಪಿಕೆ ಆಗ್ರಹಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮುಖ್ಯಅತಿಥಿಗಳಾಗಿ ಮಾತನಾಡಿ ಅನೇಕ ಯುವಕರನ್ನು ಬೆಳೆಸಿ ತಾವೂ ಬೆಳೆದು ಸಮಾಜಕ್ಕೆ ಉತ್ತಮ ಕಾಣಿಕೆ ನೀಡಿರುವ ಗಿರಿಜಾಶಂಕರ್, ಜಾತಿ, ವರ್ಗ, ಪಕ್ಷ, ಲಿಂಗಬೇಧವಿಲ್ಲದೆ ಜನರಪ್ರೀತಿಯನ್ನು ಗಳಿಸಿರುವುದಕ್ಕೆ ಸಮಾರಂಭವೇ ಸಾಕ್ಷಿ ಎಂದರು.

‘ಮೊದಲ ಓದುಗ’ರಾಗಿ ಕೃತಿಯಲ್ಲಿ ರೈತರ ಆತ್ಮವಿಶ್ವಾಸ ಮೂಡಿಸುವ ಬರಹದ ಕೆಲವು ಸಾಲುಗಳನ್ನು ವಾಚಿಸಿದ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಪರಿಶುದ್ಧ ಪತ್ರಕರ್ತರಾಗಿ ಮೂಡಿಬಂದಿರುವ ಗಿರಿಜಾಶಂಕರ್ ಗುಣಗ್ರಾಹಿ ಎಂದು ಬಣ್ಣಿಸಿದರು.

ವೈಲ್ಡ್ಕ್ಯಾಟ್-ಸಿ ಸ್ಥಾಪಕ ಡಿ.ವಿ.ಗಿರೀಶ್ ಮಾತನಾಡಿ ಸ್ನೇಹಿತ ಮತ್ತು ಮಾರ್ಗದರ್ಶಿಯಾಗಿರುವ ಗಿರಿಜಾಶಂಕರ್ ನಮ್ಮೆಲ್ಲ ಪರಿಸರದ ಹೋರಾಟಕ್ಕೆ ಪತ್ರಕರ್ತರಾಗಿ ಹೆಗಲುಕೊಟ್ಟು ಬೆಂಬಲಿಸಿದವರೆದರು.

ಕೃತಿಕಾರ ಸ.ಗಿರಿಜಾಶಂಕರ್ ಮಾತನಾಡಿ ತಾವೊಬ್ಬ ಸಾಹಿತಿ ಅಥವಾ ವಿಮರ್ಶಕನಲ್ಲ. ಅವಸರದ ಬರವಣಿಗೆಯ ಪತ್ರಕರ್ತ. ಪುಸ್ತಕದ ಗೀಳನ್ನು ಹಚ್ಚಿಕೊಂಡವನು. ಸಂಘದ ಹಿರಿಯರಾದ ನ.ಕೃಷ್ಣಪ್ಪ, ವಿದ್ಯಾಗುರು ಶ್ರೀಶೈಲಾರಾಧ್ಯ ಮತ್ತಿತರರ ಪ್ರೋತ್ಸಾಹದಿಂದ ಓದು ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದು ಇಂದು ‘ಸಹಸ್ಪಂದನ’ ಆಗಿದೆ. ಬೈರಪ್ಪ, ಕಾರಂತ, ತೇಜಸ್ವಿ ಮತ್ತಿತರರು ಓದಿನ ಹುಚ್ಚನ್ನು ಹೆಚ್ಚಿಸಿದವರು. ವೈಯಕ್ತಿಕ ಶ್ರಮಕ್ಕಿಂತ ಬೆನ್ನಹಿಂದಿನ ಸ್ಫೂರ್ತಿಯೆ ಕೃತಿಗೆ ಕಾರಣ ಎಂದರು.

ಡಾ.ಎಚ್.ಎಸ್.ಸತ್ಯನಾರಾಯಣ ಪ್ರಾಸ್ತಾವಿಸಿದ್ದು, ಡಾ.ಬೆಳವಾಡಿಮಂಜುನಾಥ್ ಅತಿಥಿಗಳನ್ನು ಪರಿಚಯಿಸಿದರು. ಎಂ.ಎ.ನಾಗೇAದ್ರ ಸ್ವಾಗತಿಸಿ, ಎಚ್.ಎಂ.ನಾಗರಾಜರಾವ್ ಕಲ್ಕಟ್ಟೆ ನಿರೂಪಿಸಿ, ಅಮೇರಿಕಾದ ಕನ್ನಡತಿ ಸೌಮ್ಯಕೃಷ್ಣ ಪ್ರಾರ್ಥಿಸಿದರು. ವಿಶ್ವಾಸ ಜಿ.ಸರಗೂರ ವಂದಿಸಿದರು. ಮಲ್ಲಿಗೆಸುಧೀರ್ ಮತ್ತು ಎಂ.ಎಸ್.ಸುಧೀರ್ ಬಳಗದಿಂದ ಗೀತಗಾಯನ ಗಮನಸೆಳೆಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ