October 5, 2024

ವೈದ್ಯಕೀಯ ಕ್ಷೇತ್ರ ಸುಲಭವಲ್ಲ, ಅತ್ಯಂತ ಸವಾಲನ್ನು ಹೊಂದಿದೆ. ಆ ನಿಟ್ಟಿನಲ್ಲಿ ವೈದ್ಯರುಗಳು ಪರಸ್ಪರ ಹೊಂದಾಣಿಕೆಯಿಂದ ಮುನ್ನೆಡೆದರೆ ಮಾತ್ರ ಸಮಸ್ಯೆಗಳಿಂದ ಹೊರಬರ ಬಹುದು, ರೋಗಿ ಸಾವು-ಬದುಕಿನ ಹೋರಾಟದಲ್ಲಿ ವೈದ್ಯರ ಚಿಕಿತ್ಸೆ ಪ್ರಮುಖ ಪಾತ್ರ ವಹಿಸುತ್ತದೆ. ಒಂದೊಮ್ಮೆ ಆಕಸ್ಮಿಕವಾಗಿ ಸಂಭವಿಸುವ ಅನಾಹುತಕ್ಕೆ ವೈದ್ಯರನ್ನೇ ನೇರ ಹೊಣೆ ಮಾಡುವುದು ಸರಿಯಲ್ಲ, ಇಂತಹ ಸನ್ನಿವೇಶಗಳಿರುವ ಕಾರಣ ಪ್ರತಿ ವೈದ್ಯರುಗಳು ಒಬ್ಬರಿಗೊಬ್ಬರು ಸಹಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ರಾಜ್ಯಾಧ್ಯಕ್ಷ ಡಾ|| ಎಸ್.ಶ್ರೀನಿವಾಸ್ ಹೇಳಿದರು.

ಚಿಕ್ಕಮಗಳೂರು ನಗರದಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ ಜಿಲ್ಲಾ ಘಟಕದಿಂದ ಏರ್ಪಡಿಸಿದ್ಧ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ವೈದ್ಯಕೀಯ ಲೋಕದಲ್ಲಿ ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿಕೊಡಬಾರದು. ಜೊತೆಗೆ ಐಎಂಎ ಜೊತೆಗೂಡಿ ಒಗ್ಗಟ್ಟಿನಿಂದ ಮುಂದುವರೆಯಬೇಕು. ಸ್ಥಳೀಯವಾಗಿ ವೈದ್ಯರು ಐಎಂಎ ಸದಸ್ಯರನ್ನಾಗಿ ಸೇರ್ಪಡೆಗೊಂಡರೆ ಮಾತ್ರ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರ ನೆರವಿಗೆ ಧಾವಿಸಬಹುದು ಎಂದರು.

ಪ್ರಸ್ತುತ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಐಎಂಎ ಸದಸ್ಯರನ್ನು ಭೇಟಿ ಮಾಡುತ್ತಿದ್ದೇನೆ. ಕೆಲವೊಂದು ಜಿಲ್ಲೆಗಳಲ್ಲಿ ವೈದ್ಯರಿಗೆ ಸಮರ್ಪಕ ಕಟ್ಟಡವಿಲ್ಲ. ಚಿಕ್ಕಮಗಳೂರು ಘಟಕದಲ್ಲಿ ವೈದ್ಯರ ಸಹಕಾರದಿಂದ ದೊಡ್ಡಮಟ್ಟಿನ ಕಟ್ಟಡ ನಿರ್ಮಿಸಿ ಪರಸ್ಪರ ಒಡನಾಟ ನಡೆಸಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಕಾರ್ಯನಿರ್ವಹಿಸಿರುವುದು ಹೆಮ್ಮೆಯ ಸಂಗತಿ. ಜೊತೆಗೆ ಐಎಂಎನ ಕೆ.ಎಸ್.ಎಸ್.ಎಸ್. ಯೋಜನೆಯಲ್ಲಿ ವೈದ್ಯರು ನೊಂದಾವಣೆಯಾಗಿದ್ದಲ್ಲಿ ಆಕ ಸ್ಮಿಕದಿಂದ ವೈದ್ಯರಿಗೆ ಸಾವು ಸಂಭವಿಸಿದರೆ ಕುಟುಂಬಕ್ಕೆ ವಿಮೆ ಸೌಲಭ್ಯ ದೊರಕಿಸಿಕೊಡುತ್ತಿದೆ ಎಂದು ಹೇಳಿ ದರು.

ಖಾಸಗೀ ವೈದ್ಯಕೀಯ ಸಂಸ್ಥೆಗಳ ರಾಜ್ಯ ಘಟಕದ ಅಧ್ಯಕ್ಷ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕಟ್ಟಡ ಸ್ಥಾಪನೆಗೆ ಅಡಿಪಾಯ ಹಾಕಿದ್ದರು. ಜೊತೆಗೆ ಸ್ಥಳೀಯ ಜನ ಪ್ರತಿನಿಧಿಗಳ ಸಹಕಾರವು ಸಂಸ್ಥೆಗೆ ಬಹಳಷ್ಟು ಕೊಡುಗೆಯಿದೆ ಎಂದು ಹೇಳಿದರು.

ಭಾರತೀಯ ವೈದ್ಯಕೀಯ ಸಂಸ್ಥೆ ತಾಲ್ಲೂಕು ಕಾರ್ಯದರ್ಶಿ ಕಾರ್ತೀಕ್ ವಿಜಯ್ ಮಾತನಾಡಿ ನಮ್ಮ ಸಂಸ್ಥೆಯಲ್ಲಿ ಅತಿಹೆಚ್ಚು ಸಂಖ್ಯೆಯಲ್ಲಿ ವೈದ್ಯರನ್ನು ಸದಸ್ಯರಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಅಲ್ಲದೇ ಸಂಸ್ಥೆಯಿಂದ ಮಾಸಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಚಟುವಟಿಕೆಗೆ ಆದ್ಯತೆ ನೀಡ ಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ಜಿಲ್ಲಾಧ್ಯಕ್ಷ ಚೈತನ್ಯ ಸವೂರ್, ವೈದ್ಯರುಗಳಾದ ಡಾ.ರಾಜು, ರವಿ ಪ್ರಕಾಶ್, ಡಿ.ಪಿ.ಮೋಹನ್, ಡಾ.ಬಸವರಾಜ್, ಡಾ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ