October 5, 2024

ಜಾಗತಿಕ ಅತ್ಯುನ್ನತ ಕ್ರೀಡಾ ಹಬ್ಬ ಒಲಂಪಿಕ್ ಗೆ ಚಾಲನೆ ದೊರೆತಿದೆ. ಪ್ರಾನ್ಸ್ ರಾಜಧಾನಿ ಪ್ಯಾರೀಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್​ 2024ರ ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು. 7500 ಅಥ್ಲೀಟ್​ಗಳು ದೊಡ್ಡ ಸಂಖ್ಯೆಯ ಪ್ರೇಕ್ಷಕರ ಮುಂದೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಬಾರಿ ವಿಶೇಷ ಎನಿಸುವಂಥ ಅಥ್ಲೀಟ್​ಗಳ ಪರೇಡ್​ ನಡೆಯಿತು. ಪ್ಯಾರಿಸ್ ನದಿಯ ಸೀನ್​ ನದಿಯಲ್ಲಿ ಅಥ್ಲೀಟ್​ಗಳನ್ನು ದೋಣಿಯಲ್ಲಿ ಕರೆದುಕೊಂಡು ಹೋಗಲಾಯಿತು.

ಆರು ಕಿಲೋಮೀಟರ್ ಮೆರವಣಿಗೆ ಆಸ್ಟರ್ಲಿಟ್ಜ್ ಸೇತುವೆಯಿಂದ ಪ್ರಾರಂಭವಾಯಿತು ಮತ್ತು 85 ದೋಣಿಗಳು 205 ರಾಷ್ಟ್ರಗಳ 6800 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಒಂದು ನಿರಾಶ್ರಿತರ ಒಲಿಂಪಿಕ್ ತಂಡವನ್ನು ಸಾಗಿಸಿದವು.   ಒಲಿಂಪಿಕ್ ಇತಿಹಾಸದಲ್ಲಿ ಮೊದಲ ಬಾರಿಗೆ, ಉದ್ಘಾಟನಾ ಸಮಾರಂಭವು ಮುಖ್ಯ ಕ್ರೀಡಾಂಗಣದ ಹೊರಗೆ ನಡೆಯಿತು. ಸುಮಾರು 300,000 ಜನರು ನದಿಯ ದಡದಲ್ಲಿ ವಿಶೇಷವಾಗಿ ನಿರ್ಮಿಸಲಾದ ಸ್ಟ್ಯಾಂಡ್​ಗಳಲ್ಲ ಕುಳಿತು ವೀಕ್ಷಿಸಿದರು. ಇನ್ನೂ 200,000 ಜನರು ಬಾಲ್ಕನಿಗಳು ಮತ್ತು ಅಪಾರ್ಟ್ಮೆಂಟ್​ಗಳಲ್ಲಿ ಕುಳಿತು ವೀಕ್ಷಿಸಿದರು.

ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ‘ಪೆರೇಡ್ ಆಫ್ ದಿ ನೇಷನ್ಸ್’ ನೊಂದಿಗೆ ಪ್ರಾರಂಭವಾಯಿತು, ಮಳೆ ಅಡ್ಡಿಪಡಿಸಿದ ಹೊರತಾಗಿಯೂ ಕಾರ್ಯಕ್ರಮ ವರ್ಣರಂಜಿತವಾಗಿ ಆರಂಭಗೊಂಡಿತು. ಫ್ರೆಂಚ್ ಫುಟ್ಬಾಲ್ ದಂತಕಥೆ ಜಿನೆಡಿನ್ ಜಿಡಾನೆ ಪ್ಯಾರಿಸ್​​ನ ಬೀದಿಗಳಲ್ಲಿ ಒಲಿಂಪಿಕ್ ಜ್ಯೋತಿ ಜತೆ ಓಡಿದರು.

ಒಲಂಪಿಕ್ ನಲ್ಲಿ ಭಾರತವನ್ನು 117 ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದಾರೆ. ಟೆನಿಸ್ ತಾರೆ ಶರತ್ ಕಮಾಲ್​ ಹಾಗೂ ಷಟ್ಲರ್ ಪಿ. ವಿ ಸಿಂಧೂ ಭಾರತದ  ಅಥ್ಲೀಟ್​ಗಳ ನಿಯೋಗದ ನೇತೃತ್ವ ವಹಿಸಿದ್ದರು. ಅವರು ಮೆರವಣಿಗೆಯಲ್ಲಿ ತ್ರಿವರ್ಣ ಧ್ವಜ ಹಿಡಿದು ದೋಣಿಯಲ್ಲಿ ಸಾಗಿದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ