October 5, 2024

ಹೆಣ್ಣಿನ ಸೌಂದರ್ಯಕ್ಕಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುವಂತಾಗಬೇಕು. ಸೌಂದರ್ಯ ಆಸ್ತಿ ಆಗಬೇಕೆ ಹೊರತು ದೌರ್ಬಲ್ಯವಾಗಬಾರದು ಎಂದು ಉಪನ್ಯಾಸಕಿ ಕುಸುಮಾಸಿದ್ದೇಶ್ ಅಭಿಪ್ರಾಯಿಸಿದರು.

ಚಿಕ್ಕಮಗಳೂರು  ಅಕ್ಕಮಹಾದೇವಿ ಮಹಿಳಾ ಸಂಘದ 15ನೆಯ ವಾರ್ಷಿಕೋತ್ಸವ ಹಾಗೂ ಸರ್ವ ಸದಸ್ಯರ ವಾರ್ಷಿಕಮಹಾಸಭೆ  ಉದ್ಘಾಟಿಸಿ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ಅವರು ಮಾತನಾಡಿದರು.

ಮಹಿಳಾಲೋಕಕ್ಕೆ ಅಕ್ಕ ಆದರ್ಶ. ಕನ್ನಡದ ಮೊದಲ ಕವಿತ್ರಿ ಅಕ್ಕಮಹಾದೇವಿ ವೈರಾಗ್ಯ ಮತ್ತು ವೈಚಾರಿಕತೆ ಹೆಸರಾದವಳು. ಸ್ತ್ರೀಗೆ ಸ್ವಾತಂತ್ರ್ಯ ಸಮಾನತೆಯನ್ನು 12ಶತಮಾನದಲ್ಲೆ ಪ್ರತಿಪಾದಿಸಿದ ಧೀರೆ. ಅವಳ ಅನೇಕ ವಚಗಳು ಇಂದೂ ಪ್ರಸ್ತುತ ಎಂದರು.

ಹೆಣ್ಣು ಎಂಬ ಕೀಳರಿಮೆ ಬೇಡ, ಸಂಕೋಲೆಯಿಂದ ಹೊರಬಂದಾಗ ಸಮಾಜದಲ್ಲಿ ಏನಾದರೂ ಸಾಧಿಸಲು ಸಾಧ್ಯ. ಲಿಂಗ ಅಸಮಾನತೆ ಮುಖ್ಯವಲ್ಲ. ಕೇವಲ ಹೆಣ್ಣಿನ ಸೌಂದರ್ಯಕ್ಕೆ ಬೆಲೆ ಕೊಡದೆ ಅವಳ ವ್ಯಕ್ತಿತ್ವಕ್ಕೆ ಬೆಲೆ ಕೊಟ್ಟಾಗ ಸಮಾಜದಲ್ಲಿ ಆಕೆಗೂ ಒಂದು ಬದುಕಿದೆ ಎಂಬುದು ಅರಿವಾಗುತ್ತದೆ ಎಂದರು.

ಬಾಲ್ಯದಲ್ಲಿ ತಂದೆ, ತಾರುಣ್ಯದಲ್ಲಿ ಪತಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯ ತಪ್ಪಿದ್ದಲ್ಲ. ಎಲ್ಲೋ ಹುಟ್ಟಿ, ಬೆಳೆದು ಪತಿಯ ಮನೆಸೇರಿ ಬೆಳಗುವಳು. ಒಂದುರೀತಿ ಹೆಣ್ಣು ನದಿಗಳಂತೆ. ಎಲ್ಲೋ ಹುಟ್ಟಿ ಸಮುದ್ರ ಸೇರಿದರೂ ಹರಿಯುವ ತಾಣವನ್ನೆಲ್ಲ ಹಸನುಗೊಳಿಸುತ್ತಾಳೆ ಎಂದ ಕುಸುಮಾ, ಹೆಣ್ಣು ಬಳ್ಳಿ ಹಬ್ಬಿ ಆಶ್ರಯದಾತಳಾಗುತ್ತಾಳೆಯೆ ಹೊರತು ಇನೊಬ್ಬ್ಬರಿಗೆ ಅಸಡ್ಡೆಯಾಗುವುದಿಲ್ಲ. ಬದುಕಿನ ಜಟಕಾಬಂಡಿ ಓಡಿಸುವಂತ ಸ್ಥೈರ್ಯ ಅವಳಲ್ಲಿದೆ.
ಅನ್ನ ನೀಡುವಕೈ ರಾಷ್ಟ್ರವನ್ನು ಆಳಬಲ್ಲಳು ಎಂಬುದಕ್ಕೆ ಇಂದಿರಾಗಾಂಧಿ, ಸುಷ್ಮಾಸ್ವರಾಜ್ ಸೇರಿದಂತೆ ಅನೇಕ ಉದಾಹರಣೆಗಳಿವೆ. ಹುಟ್ಟಿದ ಮನೆಯಿಂದ ಗಂಡಮನೆ ಬೆಳಗಲು ಬಂದು ಹೆಣ್ಣು ಜಿ.ಎಸ್.ಶಿವರುದ್ರಪ್ಪ ಅವರ ಕವನದಲ್ಲಿ ‘ಆಕಾಶ ನೀಲಿಯಲ್ಲಿ ಚಂದ್ರತಾರೆ ತೊಟ್ಟಿನಲ್ಲಿ ಬೆಳಕನಿಟ್ಟು ತೂಗಿದಾಕೆ ಸ್ತ್ರೀ ಅಲ್ಲವೆ’ ರಾರಾಜಿಸುತ್ತಾಳೆ ಎಂದರು.

ಸಮುದಾಯದ ಅಸ್ಮಿತೆ ಮತ್ತು ಅಸ್ಥಿತ್ವವನ್ನು ಉಳಿಸುವ ಕಾರ್ಯವನ್ನು ಅಕ್ಕಮಹಾದೇವಿ ಸಂಘ ಮಾಡುತ್ತಿರುವುದು ಸಂತಸದ ಸಂಗತಿ ಎಂದ ಕುಸುಮಾ, ವಿದ್ಯೆಗಿಂತ ಬುದ್ಧಿವಂತಿಕೆ ಬದುಕಿಗೆ ಮುಖ್ಯ ಎಂದರು.

ಉಪಾಧ್ಯಕ್ಷೆ ಕಾತ್ಯಾಯಿನಿ ಚಂದ್ರಶೇಖರ್ ಮಾತನಾಡಿ ಗೌರಮ್ಮಬಸವೇಗೌಡರೊಂದಿಗೆ 15ವರ್ಷಗಳ ಹಿಂದೆ ಅಕ್ಕಮಹಾದೇವಿ ಮಹಿಳಾ ಸಂಘವನ್ನು ಕಟ್ಟಿದ್ದು, ನಿರಂತರವಾಗಿ ಪ್ರತಿತಿಂಗಳು ಚಟುವಟಿಕೆ ನಡೆಸುತ್ತಾ ಉತ್ತಮವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಅವರ ಪರಿಶ್ರಮ ಸಾರ್ಥಕವಾಗಬೇಕು. ಸಮುದಾಯ ಒಂದೂಗೂಡಿಸುವಲ್ಲಿ ಹಿರಿಯ ಸದಸ್ಯರ ಸಹಕಾರ ಅಗತ್ಯ. ಶರಣರು ಬರೆದ ವಚನಗಳನ್ನು ಜೀವನದಲ್ಲಿ ಪಾಲಿಸಿದಾಗ ಜೀವನ ಸಾರ್ಥಕ. ಎಲ್ಲರೊಳೊಂದಾಗಿ ಸೇವಾಕಾರ್ಯದಲ್ಲಿ ಕೈಜೋಡಿಸಿದಾಗ ಸಂಘ ಉಳಿಯಸಿ ಬೆಳೆಯಲು ಸಾಧ್ಯ ಎಂದರು.

ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾ ಚನ್ನಬಸಪ್ಪಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಕಳೆದ 15ವರ್ಷಗಳಿಂದ ಸಂಘ ಸದಸ್ಯರೆಲ್ಲರ ಸಹಕಾರದಿಂದ ಸೌಹಾರ್ದತೆಯಿಂದ ಚೆನ್ನಾಗಿ ನಡೆದುಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಕಾರ್ಯಕಾರಿ ಸಮಿತಿ ರಚನೆಗೊಂಡು ಮತ್ತಷ್ಟು ಸಾಮಾಜಿಕ ಸೇವಾ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.

ಪ್ರಸಕ್ತಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿಯಲ್ಲಿ ಶೇ.90 ಅಂಕಗಳಿಸಿದ 20ವಿದ್ಯಾರ್ಥಿಗಳಿಗೆ ತಲಾ ಒಂದುಸಾವಿರದಂತೆ ಒಟ್ಟು 20,000ರೂ. ಹಾಗೂ ಪ್ರಶಸ್ತಿಪತ್ರವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ನಿರ್ದೇಕರುಗಳಾದ ಹೇಮಲತಾ ಪಿ, ಗೀತಾಜಗದೀಶ್, ತಂಡ ಮುಖಂಡರಾದ ದಾಕ್ಷಾಯಣಿಸತೀಶ್ಚಂದ್ರ, ಈಶ್ವರಿಹುಲಿಯಪ್ಪ, ಪ್ರಮೀಳಾಕಲ್ಲೇಶ್, ವೀಣಾವಿಶ್ವನಾಥ್, ಲತಾಪ್ರಸನ್ನ, ಪಾರ್ವತಿ, ವಿಶಾಲಯೋಗೀಶ್, ಮಾನಸ, ಮಧುಮತಿ, ಪುಷ್ಪಾ, ಹೇಮಲತಾ ವೇದಿಕೆಯಲ್ಲಿದ್ದರು.

ಖಜಾಂಚಿ ಭಾರತಿ ಶಿವರುದ್ರಪ್ಪ ವಾರ್ಷಿಕ ಲೆಕ್ಕಪತ್ರ ವರದಿ ಮಂಡಿಸಿದ್ದು, ಸಹಕಾರ್ಯದರ್ಶಿ ನಾಗಮಣಿಕುಮಾರ್ ಸ್ವಾಗತಿಸಿ, ಪುಷ್ಪಾಸೋಮಶೇಖರ್ ವಂದಿಸಿದರು. ತಂಡ ಮುಖಂಡರಾದ ಮಾನಸಹರೀಶ್ ಮತ್ತು ಮಧುಮತಿಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಹೇಮಲತಾಚಂದ್ರಶೇಖರ್ ಪ್ರಾರ್ಥಿಸಿದ್ದು, ವಿಶಾಲಯೋಗೀಶ್ ಮತ್ತು ಲತಾಪ್ರಸನ್ನ ತಂಡ ನಾಡಗೀತೆ ಹಾಡಿದರು. ಪಾರ್ವತಿ ಬಸವರಾಜು ಅತಿಥಿ ಪರಿಚಯಿಸಿದರು.

ಮಾನಸಹರೀಶ್ ಸಾರಥ್ಯದಲ್ಲಿ ಹೊಯಸ್ಸಳ ಚರಿತ್ರೆಕುರಿತು ರೂಪಕ. ವಿಶಾಲ, ಪ್ರಮೀಳಾ, ಭವಾನಿವಿಜಯಾನಂದ , ಭಾರತಿಲೋಕೇಶ್ ತಂಡದ ಸಾಂಸ್ಕøತಿಕ ಕಾರ್ಯಕ್ರಮಗಳು ಆಕರ್ಷಕವಾಗಿತ್ತು.

ಶನಿವಾರ ಆಯೋಜಿಸಿದ್ದ ವಿಶಿಷ್ಟ ಸ್ಪರ್ಧೆ ‘ರೂಪ-ಪ್ರತಿರೂಪ’, ಹೂವಿನ ರಂಗವಲ್ಲಿ ಮತ್ತು ವಚನಗಾಯನ ಸ್ಫರ್ಧೆ ಹಾಗೂ ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅದೃಷ್ಟರಾಣಿ, ಅದೃಷ್ಟಸಿರಿ, ಅದೃಷ್ಟಮಹಿಳೆಯರನ್ನು ಆರಿಸಿ ಗೌರವಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ