October 5, 2024

ಇತ್ತೀಚಿಗೆ ಭಗವಂತನ ಪ್ರೀತಿಯ ಕರೆಗೆ ಓಗೊಟ್ಟು ಇಹಲೋಕ ತ್ಯಜಿಸಿದ ದ.ಕ ಉಳ್ಳಾಲ ಖಾಝಿ ಅಸೈಯದ್ ಅಲ್ ಬುಖಾರಿ ಫಝಲ್ ಕೂರತ್ ತಂಙಳ್ ಅನುಸ್ಮರಣಾ ಸಮಾಗಮದ ಬೃಹತ್ ಸಮಾವೇಶಕ್ಕೆ ಹಂಡುಗುಳಿ ಅಲ್ ಮಾಜಿದ್ ಸಹಾಯ ಹಸ್ತ ಟ್ರಸ್ಟ್ ನ ಅರ್ಥಪೂರ್ಣ ಕಾರ್ಯಕ್ರಮ ತಂಙಳ್ ರವರ ಜೀವನದ ಆದರ್ಶಗಳಿಗೆ ಮುನ್ನುಡಿ ಬರೆಯಿತು.

ಭಾನುವಾರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಂಡುಗುಳಿಯಲ್ಲಿ ನಡೆದಂತಹ ಬೃಹತ್ ಅನುಸ್ಮರಣಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಧರ್ಮಗುರು ಅಶ್ರಫ್ ಶಕಾಫಿ ಮಡಾವು ಮಾತನಾಡಿ ನಾನು ಹಾಗೂ ನೀವು ನಮ್ಮ ಮಾರ್ಗದರ್ಶಕರಾದ ಸೈಯದ್ ತಂಙಳ್ ರವರ ಅಗಲಿಕೆಯ ಬೇಸರದಲ್ಲಿ ಇದ್ದರೂ ಅವರು ತೋರಿಸಿದ ಆದರ್ಶ ಇಂದಿಗೂ ನಮ್ಮಲ್ಲಿ ಜೀವಂತವಾಗಿರಿಸಲು ಇಂತಹ ಅರ್ಥಪೂರ್ಣ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ಹೇಳಲು ನಮಗೆ ಹೆಮ್ಮೆಯಿದೆ ಎಂದರು .

ಮುಂದುವರಿದು ಮಾತನಾಡಿದ ಅವರು ಇಂದು ಇಲ್ಲಿ ಸೇರಿದ ಜನಸ್ತೋಮವನ್ನು ಕಂಡರೆ ನಮಗೆ ಮೊದಲು ತಿಳಿಯುವುದು ಅವರ ಜೀವಿತಾವಧಿಯಲ್ಲಿ ಆಧ್ಯಾತ್ಮಿಕವಾಗಿ ಹಾಗೂ ಭೌತಿಕವಾಗಿ ನಮಗೂ ಹಾಗೂ ನಮ್ಮವರಿಗೆ ತಂಙಳ್ ರವರು ನೀಡಿದಂತಹ ಕೊಡುಗೆ ಸಾಕಷ್ಟಿವೆ ಅವರ ಸರಳಮಯವಾದ ಜೀವನ ಸರ್ವ ಜನಾಂಗದಲ್ಲಿ ತೋರಿಸಿದಂತಹ ಪ್ರೀತಿ ವಾತ್ಸಲ್ಯ ಭೌತಿಕ ಹಾಗೂ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ಅವರು ನೀಡಿದಂತಹ ಕೊಡುಗೆಗಳು ಏನು ಎಂಬುದಕ್ಕೆ ಈ ಒಂದು ಅರ್ಥಪೂರ್ಣ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ನಿಮಿತ್ತ ಆಶೀರ್ವಚನ ನೀಡಲು ಆಗಮಿಸಿದಂತಹ ಶಿವಮೊಗ್ಗದ ಶಹೀದುದ್ದೀನ್ ತಂಙಳ್ ರವರು ಮಾತನಾಡಿ ಮಹಾನುಭಾವರ ಮರಣದ ನಂತರ ಅವರ ಅನುಸ್ಮರಣೆಗಾಗಿ ಸಾಕಷ್ಟು ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಅದೆಲ್ಲವನ್ನು ಪರಿಗಣಿಸಿದಾಗ ಈ ಸ್ಥಳದಲ್ಲಿ ನಡೆದಂತಹ ಕಾರ್ಯಕ್ರಮ ಬಹಳ ಕಿಕ್ಕಿರಿದ ಜನಸ್ತೋಮದಿಂದ ಕಂಗೊಳಿಸುತ್ತಿದೆ ಇದರಿಂದ ನಮಗೆ ತಿಳಿಯುವುದು ಅವರ ಆಶೀರ್ವಾದ ಸದಾ ಈ ಊರಿನಲ್ಲಿ ಇರುತ್ತದೆ ಹಾಗೆಯೇ ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಏರ್ಪಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿರುವ ಹಲ್ ಮಾಜಿದ್ ಟ್ರಸ್ಟ್ ಹಂಡುಗಳಿ ಹಾಗೂ ಇದರ ಸ್ಥಾಪಕ ಅಧ್ಯಕ್ಷರಾದ ‘ಸಿದ್ದೀಕ್ ಉಲ್ ಅಕ್ಬರ್, ಹಾಗೂ ಪದಾಧಿಕಾರಿಗಳ ಸಾಮಾಜಿಕ ಕಳಕಳಿಗೆ ನಮ್ಮ ನೈತಿಕ ಬೆಂಬಲವನ್ನು ಸೂಚಿಸಬೇಕು ಹಾಗೂ ಅವರ ಪ್ರತಿಯೊಂದು ಕೆಲಸದಲ್ಲಿ ನಮ್ಮ ಸಹಕಾರ ಇದ್ದರೆ ಇವರಿಗೆ ಇನ್ನಷ್ಟು ಇಂತಹ ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದು ಹೇಳಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಸ್ವಾಲಿಹ್ ತಂಙಳ್, ಕಾರ್ಯಕ್ರಮದ ಉದ್ಘಾಟಕರಾದ ಏ.ಕೆ. ಉಮರ್ ಮುಸ್ಲಿಯರ್, ಅಬ್ದುಲ್ ಜಬ್ಬಾರ್ ಸಹಧಿ, ಅಬ್ದುಲ್ ಜಬ್ಬಾರ್ ಮದನಿ ಕಕ್ಕಿಂಜೆ, ನಝೀರ್ ಶಕಾಫಿ ಖತೀಬರು ಹಂಡುಗುಳಿ, ಟ್ರಸ್ಟ್ ಕಾರ್ಯಾಧ್ಯಕ್ಷ ಮಹಮ್ಮದ್ ಆಲಿ, ಇಲ್ಯಾಸ್ ಬಾ ಹಸನಿ, ಹಾಗೂ ಇನ್ನಿತರರಿದ್ದರು.

ವಿಶೇಷ ವರದಿ:-ಮನ್ಸೂರ್ ಹೆಚ್.ಆರ್ ಮೂಡಿಗೆರೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ