October 5, 2024

ರೋಗ ರುಜಿನಗಳಿಂದ ಬಳಲಿ ತಮ್ಮ ಬಳಿ ಬರುತ್ತಿದ್ದಂತಹ ಎಲ್ಲಾ ರೀತಿಯ ಹಾಗೂ ಎಲ್ಲಾ ವರ್ಗದ ಜನರಿಗೆ ಆಧ್ಯಾತ್ಮಿಕವಾಗಿ ಪರಿಹಾರ ಒದಗಿಸಿ ಕೊಟ್ಟು ಇಂದಿಗೂ ಎಲ್ಲರ ಮನದಲ್ಲಿ ಜೀವಂತವಾಗಿ ಇರುವ ಸೈಯದ್ ಫಝಲ್ ಕೂರತ್ ತಂಙಳ್ ಸ್ಮರಣಾರ್ಥವಾಗಿ  ‘ಅಲ್ ಮಾಜಿದ್ ಟ್ರಸ್ಟ್ ಹಂಡುಗಳಿ, ಇದರ ವತಿಯಿಂದ ಶುಕ್ರವಾರ ಮೂಡಿಗೆರೆ ಎಂಜಿಎಂ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ತಂಙಳ್ ರವರು ಜೀವನದಲ್ಲಿ ತೋರಿಸಿಕೊಟ್ಟ ಆದರ್ಶಕ್ಕೆ ಸಾಕ್ಷಿಯಾದರು.

ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಸಿದ್ದೀಕ್ ಉಲ್ ಅಕ್ಬರ್ ಮಾತನಾಡಿ ; ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಖಾಝಿ ಹಾಗೂ ಮುಸ್ಲಿಂ ಸಮುದಾಯದ ನೆಚ್ಚಿನ ಗುರು ಸೈಯದ್ ಫಝಲ್ ಕೂರತ್ ತಂಙಳ್ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದು ಅವರ ಸ್ಮರಣಾರ್ಥ ಸಾಕಷ್ಟು ಸಾಮಾಜಿಕ ಕಾರ್ಯಗಳು ನಡೆಯುತ್ತಿದೆ. ಜಾತಿ ಧರ್ಮ ಇವೆಲ್ಲವೂ ಅವರವರ ಐಚ್ಛಿಕ ವಿಷಯ ಈ ಲೋಕದಲ್ಲಿ ಮಾನವನ ಜೀವನ ಅತ್ಯಂತ ಅಮೂಲ್ಯವಾದ ಜೀವನ ಇಲ್ಲಿ ಅಪರಾಧ ಎಂದು ಶಾಶ್ವತ ಅಲ್ಲ ಪ್ರತಿಯೊಬ್ಬನೂ ಸಮಾನಾರಾಗಿ ಬದುಕಬೇಕು ಮಾನವ ಕುಲದಲ್ಲಿ ಯಾರೇ ಕಷ್ಟದಲ್ಲಿದ್ದರೂ ಅವರಿಗೆ ನಮ್ಮ ಕೈಲಾದ ಸಹಾಯ ಮಾಡುವ ಮನಸ್ಸಿರಬೇಕು ಎಂಬಂತಹ ಪ್ರವಾದಿ ತತ್ವಗಳನ್ನು ತನ್ನ ಜೀವನದಲ್ಲಿ ಅಳವಡಿಸಿ ಸರಳತೆಯಿಂದ ಕೂಡಿದ ಜೀವನವನ್ನು ರೂಢಿಸಿ ಆಧ್ಯಾತ್ಮಿಕ ಮಾರ್ಗದಲ್ಲಿ ತಮ್ಮ ಬಳಿ ಬರುತ್ತಿದ್ದಂತಹ ಎಲ್ಲಾ ರೀತಿಯ ಜನರಿ ಕನಿಷ್ಠ ಪರಿಹಾರ ಒದಗಿಸಿ ಕೊಡುವ ಇವರ ಸರಳವಾದ ಜೀವನವೇ ಇಂದು ಶಾಶ್ವತವಾಗಿ ಉಳಿಯುತ್ತದೆ ಹಾಗೂ ಇವರ ಆದರ್ಶ ಇಂದಿಗೂ ಜೀವಂತವಾಗಿದೆ ಎಂದರು.

ಈ ನಿಟ್ಟಿನಲ್ಲಿ ಅಲ್ ಮಾಜಿದ್ ಟ್ರಸ್ಟ್ ವತಿಯಿಂದ ಕೈಗೊಂಡ ಇಂತಹ ಕಾರ್ಯ ತಂಙಳ್ ಅವರ ಜೀವನದ ಆದರ್ಶಗಳನ್ನು ಜೀವಂತವಾಗಿ ಇಡಿಸಲು ಪ್ರೇರಣೆಯಾಗಿದೆ ಹಾಗೂ ಟ್ರಸ್ಟ್ ವತಿಯಿಂದ ಇಂತಹ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ ಇವರ ಇಂತಹ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸ್ಥಳದಲ್ಲಿ ಟ್ರಸ್ಟ್ ಸ್ಥಾಪಕ ಅಧ್ಯಕ್ಷರಾದ ಸಿದ್ದೀಕ್ ಉಲ್ ಅಕ್ಬರ್, ಪದಾಧಿಕಾರಿಗಳಾದ ಮಹಮ್ಮದ್ ಆಲಿ, ಎಚ್.ಎಸ್. ರಜಾಕ್, ಎಚ್.ಕೆ ಅಬೂಬಕ್ಕರ್, ಅಬ್ದುಲ್ ರಝಾಕ್, ಮಹಮ್ಮದ್ ಹಾಗೂ ಇತರರಿದ್ದರು. ಟ್ರಸ್ಟ್ ನ ಕಾರ್ಯಕ್ಕೆ ಎಂ.ಜಿ.ಎಂ. ಆಸ್ಪತ್ರೆ ಆಡಳಿತಾಧಿಕಾರಿ ಡಾ. ಪ್ರಿಯಾಂಕ ಮೆಚ್ಚುಗೆ ವ್ಯಕ್ತಪಡಿಸಿದರು.

ವರದಿ: ಮನ್ಸೂರ್ ಹೆಚ್. ಆರ್ ಮೂಡಿಗೆರೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ