October 5, 2024

ಮಕ್ಕಳ ಭವಿಷ್ಯ ರೂಪಿಸಲು ಶಿಕ್ಷಕರ ಪಾತ್ರ ಅಪಾರ ಎಂದು ಬಣಕಲ್ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಲ್.ದಿವಾಕರ್ ಹೇಳಿದರು.

ಅವರು ಬಣಕಲ್ ಪ್ರೌಢಶಾಲೆಯಲ್ಲಿ  ಆಯೋಜಿಸಿದ್ದ ನಿವೃತ್ತ ಮುಖ್ಯ ಶಿಕ್ಷಕ ಪಿ.ವಾಸುದೇವ್ ಅವರ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಕ್ಕಳ ಮನಸು ಮತ್ತು ಭವಿಷ್ಯ ರೂಪಿಸುವುದು ಶಿಕ್ಷಕರ ಬೋಧನೆಯ ಕಾರ್ಯದಿಂದ ಸಾಧ್ಯವಾಗಿದೆ.ವಾಸುದೇವ್ ಅವರು 36ವರ್ಷಗಳ ಕಾಲ ಅನೇಕ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಉತ್ತಮ ವ್ಯಕ್ತಿಗಳಾಗುವಂತೆ ಪ್ರೇರಣೆಯಾಗಿದ್ದಾರೆ.ಅಂತಹ ಶಿಕ್ಷಕರ ಜೀವನ ನಮಗೆ ಪಾಠವಾಗಬೇಕು’ಎಂದರು.

ಪ್ರಾಸ್ತಾವಿಕವಾಗಿ  ಮುಖ್ಯ ಶಿಕ್ಷಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ’ ಶಿಕ್ಷಕರು ಮಕ್ಕಳು ಸ್ನೇಹಿತರಂತೆ ಬೆರೆತು ಶಿಕ್ಷಣ ಕಲಿಯಬೇಕು.ಶಿಕ್ಷಕರು ಶಿಕ್ಷೆ ನೀಡುವವರಲ್ಲ.ಸಂಸ್ಕಾರ ಮತ್ತು ಶಿಕ್ಷಣ ನೀಡುವ ಗುರುಗಳಾಗಿದ್ದಾರೆ.ಮಕ್ಕಳು ವಿದ್ಯೆಯೊಂದಿಗೆ ಸಂಸ್ಕಾರ ಕಲಿಯುವುದನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಅದರ್ಶ ವ್ಯಕ್ತಿಗಳಾಗಿ ಬದುಕಿ ಕಲಿತ ಶಾಲೆಗೆ, ಶಿಕ್ಷಕರಿಗೆ ಹೆಸರು ತರಬೇಕು’ಎಂದರು.

ಸನ್ಮಾನ ಸ್ವೀಕರಿಸಿದ ಮುಖ್ಯ ಶಿಕ್ಷಕ ಪಿ.ವಾಸುದೇವ್ ಮಾತನಾಡಿ’ ಶಿಕ್ಷಕ ವೃತ್ತಿಗೆ ನಿವೃತ್ತಿಯಿದೆಯೇ ವಿನಹ ಶಿಕ್ಷಕರಿಗೆ ಜೀವನದಲ್ಲಿ ಎಂದೂ ನಿವೃತ್ತಿಯಿಲ್ಲ. ಮಕ್ಕಳು ಇಂದಿನ ಸ್ಥಿತಿಯಲ್ಲಿ ಮೊಬೈಲ್ ಮತ್ತಿತರ ದುಶ್ಚಟಗಳಿಗೆ ದಾಸರಾಗದೇ ಕಲಿಕೆಗೆ ಗಮನ ಕೊಡಬೇಕು’ಗುರು ಹಿರಿಯರಿಗೂ ಗೌರವ ಕೊಡುವ ಗುಣ ಬೆಳೆಸಿಕೊಳ್ಳಬೇಕು. ಸಹಕಾರ ಕೊಟ್ಟ ಪ್ರತಿಯೊಬ್ಬರನ್ನು ಈ ಸಂದರ್ಭದಲ್ಲಿ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಶಿಕ್ಷಕ ಪಿ.ವಾಸುದೇವ್ ದಂಪತಿಗಳಿಗೆ ಶಾಲಾಡಳಿತ ಹಾಗೂ ಶಿಕ್ಷಕರ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅತಿಥಿ ಶಿಕ್ಷಕ ಸದಾಶಿವ ಪೂಜಾರಿ,ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಕೆ ಸುರೇಶ್,ಖಜಾಂಚಿ ಬಿ.ಕೆ.ಪ್ರಥ್ವಿ,ನಿರ್ದೇಶಕ ಜಖಾವುಲ್ಲಾ,ಬಿ.ಎಸ್.ವಿಕ್ರಂ,ಯತೀಶ್,ರಮೇಶ್ ಬಿ.ಟಿ.ಶರತ್,ಎಚ್.ಎಲ್.ಶರತ್,ರಮೇಶ್,ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ