October 5, 2024

ಮಲೆನಾಡಿನಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ವಿದ್ಯುತ್ ಸೇವೆ ನೀಡುವ ಉದ್ದೇಶದಿಂದ ನಮ್ಮೂರು ಕೊಟ್ಟಿಗೆಹಾರ ವಾಟ್ಸಾಪ್ ಗ್ರೂಪ್ ವತಿಯಿಂದ ಮೆಸ್ಕಾಂ ಸಿಬ್ಬಂದಿಗೆ ಉತ್ತಮವಾದ ಅಲ್ಯುಮಿನಿಯಂ ಏಣಿಯನ್ನು ಕೊಡುಗೆಯಾಗಿ ನೀಡಲಾಯಿತು.

ಗ್ರೂಪ್‍ನ ಸದಸ್ಯರಾದ ತನು, ಸಂಜಯ್ ಗೌಡ ಮಾತನಾಡಿ ಕೊಟ್ಟಿಗೆಹಾರ ಮಳೆಗಾಲದಲ್ಲಿ ವಿದ್ಯುತ್ ವ್ಯತ್ಯಯವಾಗುತ್ತದೆ ಮೆಸ್ಕಾಂ ಸಿಬ್ಬಂದಿಗಳು ಮಳೆಗಾಲದಲ್ಲಿ ಕಂಬ ಹತ್ತಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ. ಹಾಗಾಗಿ ಗ್ರೂಪಿನ ಸದಸ್ಯರು ವಂತಿಗೆ ಹಾಕಿ ರೂ 3600 ಬೆಲೆ ಬಾಳುವ ಇಪ್ಪತ್ತು ಅಡಿ ಏಣಿಯನ್ನು ಸಿಬ್ಬಂದಿಗೆ ನೀಡಿದ್ದೇವೆ. ಇದರ ಸಹಾಯದಿಂದ ಕಂಬ ಹತ್ತಿ ವಿದ್ಯುತ್ ದುರಸ್ತಿ ಮಾಡಲು ಸಿಬ್ಬಂದಿಗಳಿಗೆ ಸಹಕಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳಾದ ದೀಪಕ್, ಪವನ್, ಶಶಿ, ಮುಖಂಡರಾದ ತನು ಕೊಟ್ಟಿಗೆಹಾರ, ಸಂಜಯ್, ಕೃಷ್ಣಮೂರ್ತಿ, ವೀರಪ್ಪಗೌಡ, ರಾಜು ರೆಡ್ ಚೆಲ್ಲಿ, ಸಂತೋಷ್ ಅತ್ತಿಗೆರೆ, ನಾಗರಾಜ್ ಆಚಾರ್ಯ, ಅನಿಲ್ ಅತ್ತಿಗೆರೆ, ಎ.ಆರ್.ಅಭಿಲಾಷ್, ರಘು ಅತ್ತಿಗೆರೆ, ಜೀಯಾ, ವಿಕ್ರಂಗೌಡ, ಆದರ್ಶ್ ತರುವೆ, ಬೇಬಿ ಪಿ.ಜಿ, ಅಶೋಕ್ ಮಲ್ಲಂದೂರು, ಪ್ರಶಾಂತ್ ತರುವೆ, ಎ.ಎಂ.ಹಸೇನ, ಬಿ.ಎಂ.ಸುರಕ್ಷಿತ್ ಮತ್ತಿತರರು ಇದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ