October 5, 2024

ಸರಕಾರದ ಹಣದಿಂದ ನಿರ್ಮಾಣ ಮಾಡುವ ಸಮುದಾಯಭವನವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದಾಗ ಮಾತ್ರ ಅವುಗಳು ಸದ್ಬಳಕೆಯಾಗಲು ಸಾಧ್ಯ ಎಂದು ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ಅವರು ಗುರುವಾರ ತಾಲೂಕಿನ ಘಟ್ಟದಹಳ್ಳಿಯಲ್ಲಿ ಅವರ ಎಂಎಲ್‍ಸಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಸಮುದಾಯ ಭವನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಪ್ರತಿ ಗ್ರಾಮಗಳಲ್ಲಿ ಒಂದು ಸಮುದಾಯ ಭವನ ಇರಲೇಕು. ಸಮುದಾಯ ಭವನಗಳಿಂದ ಗ್ರಾಮಗಳಲ್ಲಿ ಮದುವೆ ಸೇರಿದಂತೆ ವಿವಿಧ ರೀತಿಯ ಶುಭ ಸಮಾರಂಭಗಳು ನಡೆಸಲು ಅನುಕೂಲವಾಗುತ್ತದೆ. ಹಾಗಾಗಿ ಸಮುದಾಯ ಭವನಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಸದ್ಭಳಕೆ ಮಾಡಿಕೊಳ್ಳಬೇಕಂದು ಮನವಿ ಮಾಡಿದರು.

ಸ್ಥಳೀಯ ಮೆಸ್ಕಾಂ ಲೈನ್‍ಮ್ಯಾನ್, ಅಂಗನವಾಡಿ ಕಾರ್ಯಕರ್ತರು, ಶ್ರೀಶೂಕಿಯರು, ಶಾಲೆ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಕೋನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್, ಉಪಧ್ಯಕ್ಷೆ ಮಂಜುಳ, ಕೃಷ್ಣೇಗೌಡ, ಅಣ್ಣೇಗೌಡ, ಎಂ.ಎನ್.ಅಶ್ವತ್, ಕೆ.ಮಂಚೇಗೌಡ, ಕೆ.ಪಿ.ರುದ್ರೇಶ್ ಮತ್ತಿತರರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ